Breaking News

ಶಾಲಾ ಪ್ರವಾಸಕ್ಕೆಂದು ಹೊರಟಿದ್ದ ಬಸ್ಸ್ ಪಲ್ಟಿ : ವಿದ್ಯಾರ್ಥಿನಿ ಸಾವು.

ಭದ್ರಾವತಿಯ ಪೂರ್ಣ ಪ್ರಜ್ಞ ಶಾಲೆಯಿಂದ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದ್ಯೊಯುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಬೆಳ್ಳಗೆ ಚಿಕ್ಕಮಗಳೂರು ಜಿಲ್ಲೆ ಎನ್ಆರ್ ಪುರ ತಾಲೂಕಿನ ಬಾಳೆಕೊಪ್ಪದ ಬಳಿ ನಡೆದಿದೆ. . ಬಸ್ಸಿನ ಮುಂಭಾಗದಲ್ಲಿ ಕುತ್ತಿದ್ದ ದಿಯಾ(16) ಎಂಬ ವಿದ್ಯಾರ್ಥಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದಳು. 15ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿದ್ದು, ಮೂವರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಶಿವಮೊಗ್ಗದ ಮೆಗ್ಗಾನ್ ಮತ್ತು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ಪತ್ರೆಗೆ ದಾಖಲಾದ ಮಕ್ಕಳನ್ನು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಇನ್ನೂ ಈ ಘಟನೆ ಸಂಬಂಧ ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

*