Breaking News

ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ನಾಯಕರಿಂದ ವಿರೋಧ

ಟಿಪ್ಪು ಜಯಂತಿ ಆಚರಣೆಗೆ ಶಿವಮೊಗ್ಗ ಬಿಜೆಪಿಯ ಸ್ಥಳೀಯ ನಾಯಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ನಗರದ ಶಿವಪ್ಪನಾಯಕ ವೃತ್ತದ ಬಳಿ ಪ್ರತಿಭಟನೆಯನ್ನು ನಡೆಸಿದ್ದರು, ಪ್ರತಿಭಟನೆಯಲ್ಲಿ ಡಿ ಎಸ್ ಅರುಣ್, ದತ್ತಾತ್ರಿ , ಹಿರಣ‌್ಯಯ್ಯ ಮುಂತಾದ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ನಂತರ cnewstv.in ಜೊತೆ ಮಾತನಾಡಿದ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ, ಟಿಪ್ಪು ಒಬ್ಬ ಮತಾಂಧ ಕೇವಲ ಹಿಂದೂಗಳನ್ನು ಮಾತ್ರವಲ್ಲದೆ ಕ್ರೈಸ್ತರನ್ನು ಸಹ ಮತಾಂತರ ಮಾಡುತ್ತಿದ್ದ. ಇಂತಹ ಮತಾಂಧನನ್ನು ವೈಭವೀಕರಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ ಇದನ್ನು ನಾವು ಖಂಡಿಸುತ್ತೇವೆ. ಈ ರೀತಿಯ ವ್ಯಕ್ತಿಗಳನ್ನು ಆರಾಧನೆ ಮಾಡುವುದು ರಾಜ್ಯ ಸರ್ಕಾರ ಶೋಭೆ ತರುವುದಿಲ್ಲ .
ಟಿಪ್ಪು ಒಬ್ಬ ಕ್ರೂರಿ ಎಂದು ಇತಿಹಾಸದಲ್ಲಿ ಹೇಳಲಾಗಿದೆ ಇಂತಹ ಕ್ರೂರಿಯ ಆಚರಣೆಗೆ ಸರ್ಕಾರ ಬದ್ಧವಾಗಿರುವುದು ಸರಿಯಲ್ಲ. ಟಿಪ್ಪು ಜಯಂತಿ ನಮ್ಮ ರಾಜ್ಯಕ್ಕೆ ನಮ್ಮ ಜನತೆಗೆ ಅವಶ್ಯಕತೆ ಇಲ್ಲ ಎಂದು ತಿಳಿಸಿದರು ..

Leave a Reply

Your email address will not be published. Required fields are marked *

*