Cnewstv / 03.09.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಒಂದೇ ವಾರದಲ್ಲಿ 2 ಲಕ್ಷಕ್ಕೂ ಹೆಚ್ಚು ವಾಹನ ಸವಾದರಿಂದ ರೂಲ್ಸ್ ಬ್ರೇಕ್..
ಬೆಂಗಳೂರು : ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಒಂದೇ ವಾರದಲ್ಲಿ 2 ಲಕ್ಷಕ್ಕೂ ಅಧಿಕ ವಾಹನ ಸವಾರರು ರೂಲ್ಸ್ ಬ್ರೇಕ್ ಮಾಡಿದ್ದಾರೆ..
ಬೆಂಗಳೂರು – ಮೈಸೂರು ಹೈವೇ ಹೆದ್ದಾರಿಯಲ್ಲಿ ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಕಠಿಣ ನಿಯಮವನ್ನು ಜಾರಿಗೊಳಿಸಿದೆ. ಹೆದ್ದಾರಿ ಯುದ್ಧಕು ಅತ್ಯಾಧುನಿಕ ಕ್ಯಾಮರಾ ಹಾಗೂ ಸೆನ್ಸರ್ ಅಳವಡಿಕೆ ಮಾಡಲಾಗಿದೆ. ಇಲ್ಲಿಯವರೆಗೆ 193 ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಕಳೆದ ಒಂದೇ ವಾರದಲ್ಲಿ ಎರಡು ಲಕ್ಷಕ್ಕೂ ಅಧಿಕ ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿದ್ದಾರೆ. 6 ಸಾವಿರ ಜನರಿಗೆ ಈಗಾಗಲೇ ದಂಡದ ಆದೇಶ ಕಳುಹಿಸಲಾಗಿದೆ. ಪೊಲೀಸರು ಇಲ್ಲ, ಕ್ಯಾಮರಾ ಇಲ್ಲ ಎಂದು ವೇಗವಾಗಿ ಹೋಗುವಂತಿಲ್ಲ. ಇಡೀ ಹೆದ್ದಾರಿ ಯುದ್ಧಕ್ಕೂ ಐಟಿಎಂಎಸ್ ಕ್ಯಾಮೆರಾ ನಿಗಾ ಇದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಇದನ್ನು ಒದಿ..
C News TV Kannada News Online in cnewstv