Cnewstv / 29.08.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಸೂಡಾದ ಅನಧಿಕೃತ ಶೆಡ್ ತೆರವುಗೊಳಿಸುವವರೆಗೆ ಹೋರಾಟ.. ಸ್ಥಳಕ್ಕೆ ಶಾಸಕ ಚನ್ನಬಸಪ್ಪ ಭೇಟಿ, ಮಾತುಕತೆ..
ಶಿವಮೊಗ್ಗ: ಅಧಿಕೃತ ರಸ್ತೆ ಮೇಲೆ ಸೂಡಾದವರು ಕಚೇರಿ ನೌಕರರ ವಾಹನ ನಿಲುಗಡೆಗೆ ನಿರ್ಮಿಸಿರುವ ಅನಧಿಕೃತ ಶೆಡ್ ಕೂಡಲೇ ತೆರವುಗೊಳಿಸಬೇಕು ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ಸಮಿತಿಗಳ ಒಕ್ಕೂಟದವರು ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸದಸ್ಯರು ಪಾಲಿಕೆ ಮುಂಭಾಗ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ಶಾಸಕ ಚನ್ನಬಸಪ್ಪ ಸ್ಥಳಕ್ಕೆ ಭೇಟಿ ನೀಡಿ ಆ. ೩೧ ರಂದು ನಡೆಯುವ ಸೂಡಾ ಸಭೆಯಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಆದರೆ, ಪ್ರತಿಭಟನಾ ನಿರತರು ತೆರವುಗೊಳಿಸುವವರೆಗೆ ಹೋರಾಟ ನಮ್ಮ ಮುಂದುವರೆಯುತ್ತದೆ. ಬುಧವಾರ ಮಹಾನಗರ ಪಾಲಿಕೆ ಆಯುಕ್ತರು ಕೂಡ ಭೇಟಿ ನೀಡಿ ಅದು ರಸ್ತೆ ಜಾಗ ಎಂಬುದನ್ನು ಒಪ್ಪಿಕೊಂಡಿದ್ದು, ನೀವು ಕೂಡ ಅದನ್ನು ಒಪ್ಪುತ್ತೀರಿ. ಕಾನೂನಾತ್ಮಕವಾಗಿ ಪಾಲಿಕೆ ಮತ್ತು ಸೂಡಾ ಅಧಿಕೃತವಾಗಿ ಅದು ಅನಧಿಕೃತ ಶೆಡ್ ಎಂದು ಒಪ್ಪಿದ್ದರೂ ಕೂಡ ಇನ್ನೂ ಮೀನಾಮೇಷ ಎಣಿಸುತ್ತಿರುವುದು ನಾಗರಿಕರಿಗೆಮಾಡುತ್ತಿರುವ ಅಪಮಾನ. ಸರ್ಕಾರದಿಂದಲೇ ನಿಯಮಗಳ ಉಲ್ಲಂಘನೆಯಾಗುತ್ತಿರುವುದು ವಿಷಾದನೀಯ. ಶೆಡ್ ತೆರವುಗೊಳಿ ಸುವವರೆಗೆ ನಾವು ಧರಣಿ ಸತ್ಯಾಗ್ರಹ ಹಿಂಪಡೆಯುವುದಿಲ್ಲ ಎಂದು ವೇದಿಕೆಯ ಸದಸ್ಯರು ಪಟ್ಟು ಹಿಡಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
Recent Comments