Cnewstv / 28.03.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಾರ್ವಜನಿಕ ಸಭೆಗಳಲ್ಲಿ ಹೇಗೆ ಮಾತನಾಡಬೇಕು ಎಂಬ ಅರಿವೇ ಮಧುಬಂಗಾರಪ್ಪನವರಿಗೆ ಗೊತ್ತಿಲ್ಲ – ಸಂಸದ ಬಿ.ವೈ.ರಾಘವೇಂದ್ರ.
ಶಿವಮೊಗ್ಗ : ಸಾರ್ವಜನಿಕ ಸಭೆಗಳಲ್ಲಿ ಹೇಗೆ ಮಾತನಾಡಬೇಕು ಎಂಬ ಅರಿವೇ ಮಧುಬಂಗಾರಪ್ಪನವರಿಗೆ ಗೊತ್ತಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತೀಕ್ಷಣವಾಗಿ ಪ್ರತಿಕ್ರಿಯಿಸಿದರು.
ಶಿವಮೊಗ್ಗ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ, ಸಂಸ್ಕೃತಿ ಇದೆ, ಆದರೆ ಕಾಂಗ್ರೆಸ್ಸಿಗರಿಗೆ ಇದರ ಅರಿವೇ ಇಲ್ಲ. ಚುನಾವಣೆಗಳು ಬಂದಾಗ ಅಭಿವೃದ್ಧಿ, ಸಾಧನೆ, ವೈಪಲ್ಯ ಕುರಿತಂತೆ ಚರ್ಚೆಗಳು ನಡೆಯುವುದು ಸಹಜವೇ. ಆದರೆ, ಈ ಚರ್ಚೆಗಳು ಮತ್ತು ಮಾತುಗಳು ಉಪಯೋಗಿಸುವ ರೀತಿ ಮಾತ್ರ ಬೇರೆಯದೇ ಆಗಿದ್ದು, ಕಾಂಗ್ರೆಸ್‌ನವರು ತಮ್ಮ ಸಂಸ್ಕೃತಿಯನ್ನೇ ಮರೆತಿದ್ದಾರೆ ಎಂದರು.
ಶಿಕಾರಿಪುರದ ಸಭೆಯೊಂದರಲ್ಲಿ ಮಧುಬಂಗಾರಪ್ಪನವರು ಬಿಜೆಪಿ ಕಾರ್ಯಕರ್ತರನ್ನು ಚೇಲಗಳು ಎಂದು ಕರೆದಿದ್ದಾರೆ. ಆದರೆ ಇವರಿಗೆ ನೆನಪಿರಲಿ ಇದೇ ಚೇಲಗಳು ಇವರ ತಂದೆ ಬಂಗಾರಪ್ಪನವರ ಪರವಾಗಿ ಕೆಲಸ ಮಾಡಿದ್ದರು ಎಂದರು.
ಪ್ರಧಾನಿ ಮೋದಿಯವರಿಗೆ ಗೌರವ ಕೊಟ್ಟರೆ ದೇಶ ಭಕ್ತ ಎಂದು ಕರೆದರೆ, ಇವರಿಗೇಕೆ ಸಿಟ್ಟು, ಮಧುಬಂಗಾರಪ್ಪ ಜೆಡಿಎಸ್‌ನಲ್ಲಿ ಇದ್ದಾಗ ದೇವೇಗೌಡರನ್ನು ದೇವರು ಎಂದು ಕರೆದಿರಲಿಲ್ಲವೇ? ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯ 10 ವರ್ಷದ ಸಾಧನೆ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು 75 ವರ್ಷಗಳ ಕಾಲ ಏನು ಮಾಡಿದ್ದೇವೆ ಎಂದು ತಿರುಗಿ ನೋಡಲಿ. ಶಿವಮೊಗ್ಗದಲ್ಲಿ ಆದ ಅಭಿವೃದ್ಧಿಯ ಬಗ್ಗೆ ಇವರಿಗೆ ಮಾತನಾಡುವ ಹಕ್ಕಾದರೂ ಏನಿದೆ? ಸೇತುವೆ, ರೈಲ್ವೆ, ವಿಮಾನ ಇವೆಲ್ಲವೂ ಇವರಿಗೆ ಕಾಣಿಸುದಿಲ್ಲವೇ ಎಂದು ಪುನರುಚ್ಛರಿಸಿದರು.
ಕಾಂಗ್ರೆಸ್ಸ್ನವರ ಟೀಕೆಗೆ ಅವರ ಅಸಭ್ಯತನ ಮಾತುಗಳಿಗೆ ಮತದಾರ ಖಂಡಿತ ಉತ್ತರ ಕೊಡುತ್ತಾನೆ. ಈ ಬಾರಿ ನಾವು ೪೦೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಈಗಾಗಲೇ ಲೋಕಸಭೆಯಲ್ಲಿ ಕಾಂಗ್ರೆಸ್ಸಿಗೆ ವಿರೋಧ ಪಕ್ಷದ ಸ್ಥಾನವು ಸಿಕ್ಕಿಲ್ಲ. ಮುಂದೆ ಅವರಿಗೆ ಗ್ಯಾಲರಿಯೇ ಗತಿಯಾಗಬಹುದು ಎಂದು ಹಂಗಿಸಿದರು.
#BYRagavendra #Shivamogga #Madhubangarappa #MPElection #2024
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments