Cnewstv / 23.02.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನೀರಿನ ಕಂದಾಯ ವಸೂಲಾತಿಗೆ ವಿಶೇಷ ಕೌಂಟರ್.
ಶಿವಮೊಗ್ಗ : ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ಫೆ.25 ರ ಭಾನುವಾರದಂದು 2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ “ವಿನೋಬನಗರ ಕೆ.ಹೆಚ್.ಬಿ. ಕಲ್ಲಹಳ್ಳಿ ಅಭಿಷ್ಟವರ ಗಣಪತಿ ದೇವಸ್ಥಾನದ ಹತ್ತಿರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ -ಸೀಗೆಹಟ್ಟಿ, ಯಲ್ಲಮ್ಮ ದೇವಸ್ಥಾನ ಚಾನಲ್ ಹತ್ತಿರ-ಶಾಂತಿನಗರ, ಸುಬ್ಬಯ್ಯ ಕಾಂಪ್ಲೆಕ್ಸ್ ಆಟೋ ಸ್ಟ್ಯಾಂಡ್ ಹತ್ತಿರ- ಜೈಲ್ ರಸ್ತೆ ಹಾಗೂ ಲಕ್ಷ್ಮೀ ಕ್ಯಾಂಟೀನ್ ಹತ್ತಿರ ಮಿಳ್ಳಘಟ್ಟ ಮುಖ್ಯರಸ್ತೆ” ಈ ಎಲ್ಲಾ ಕಡೆಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ.
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
#Watertax #shivamogga #Citycorporation #Tax #Specialcounter
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv