Cnewstv / 21.02.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶ್ರೀಗುರು ಶಾಂತವೀರೇಶ್ವರ ಸೇವಾ ಸಮಿತಿ ವತಿಯಿಂದ ಇಷ್ಟಲಿಂಗ ಪೂಜೆ ಮತ್ತು ಧರ್ಮಸಭೆ..
ಶಿವಮೊಗ್ಗ : ಶ್ರೀಗುರು ಶಾಂತವೀರೇಶ್ವರ ಸೇವಾ ಸಮಿತಿ ವತಿಯಿಂದ ಫೆ. 23 ರಂದು ಬೆಳಿಗ್ಗೆ 9 ಕ್ಕೆ ಗೋಪಾಳದ ದ್ರೌಪದಮ್ಮ ದೇವಸ್ಥಾನದ ಹತ್ತಿರವಿರುವ ಸಿಂದಗಿ ಶಾಂತವೀರೇಶ್ವರ ನಿವಾಸದಲ್ಲಿ ಇಷ್ಟಲಿಂಗ ಪೂಜೆ ಮತ್ತು ಧರ್ಮಸಭೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಯ್ಯ ಶಾಸ್ತಿç ಎಸ್.ಎನ್.ಹೇಳಿದರು.
ಗುರು ಶಾಂತವೀರೇಶ್ವರ ಸೇವಾ ಸಮಿತಿಯು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟ ವಸತಿ ಶಿಕ್ಷಣ ನೀಡುವ ಉದ್ದೇಶದಿಂದ ಇಂಟರ್‌ನ್ಯಾಷನಲ್ ಸ್ಕೂಲ್ ಆರಂಭಿಸುವ ಯೋಜನೆಯು ಇದೆ ಎಂದರು.
ಶಾಂತವೀರೇಶ್ವರ ನಿವಾಸದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಇಷ್ಟಲಿಂಗ ಮಹಾಪೂಜೆಯನ್ನು ನಡೆಸಲಾಗುವುದು. ಕಾಶಿಯ ಜ್ಞಾನಸಿಂಹಸಾನಧೀಶ್ವರ ಶ್ರೀ ೧೦೦೮ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದಾರೆ. ಹಾಗೂ ಮಧ್ಯಾಹ್ನ 12 ಕ್ಕೆ ಧರ್ಮಸಭೆಯನ್ನು ಆಯೋಜಿಸಲಾಗಿದೆ.
ತಮ್ಮ ಸಂಸ್ಥೆಯವತಿಯಿಂದ ಶ್ರೀಗುರು ಶಾಂತವೀರೇಶ್ವರ ಲಿಂಗಾಯಿತ ವಧುವರರ ಅನ್ವೇಷಣೆ ಕೇಂದ್ರದ ಮೂಲಕ ಕಳೆದ ೨೪ ವರ್ಷಗಳಿಂದ ವಧು-ವರರ ಸಮಾವೇಶವನ್ನು ಆಯೋಜಿಸುತ್ತ ಬಂದಿದ್ದು, ಸಾವಿರಾರು ಜೋಡಿಗಳಿಗೆ ಕಂಕಣ ಭಾಗ್ಯ ಕಲ್ಪಿಸಿದ್ದೇವೆ. ಹಾಗೆಯೇ ಎಸ್‌ಜಿಎಸ್ ಟರ‍್ಸ್ ಮೂಲಕ ಸಿಂಗಾಪುರ, ಮಲೇಷಿಯ, ದುಬೈ ಸೇರಿದಂತೆ ಹಾಗೂ ಕಾಶಿ, ಕೇದಾರ, ಗಂಗೋತ್ರಿ, ಗಯಾ, ಕನ್ಯಾಕುಮಾರಿ, ರಾಮೇಶ್ವರ ಮುಂತಾದ ಧಾರ್ಮಿಕ ಕ್ಷೇತ್ರಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಯಾತ್ರೆಯನ್ನು ಕೂಡ ಆಯೋಜಿಸಿದ್ದೇವೆ ಎಂದರು.
ಹಾಗೆಯೇ ಎಸ್‌ಜಿಎಸ್ ಡೆವಲರ‍್ಸ್ ಮೂಲಕ ಅತ್ಯಂತ ಕಡಿಮೆ ಬೆಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ನಿವೇಶನ ನೀಡುವ ಸಂಕಲ್ಪ ಕೂಡ ಹೊಂದಿದ್ದೇವೆ. ಶ್ರೀಶೈಲ ಗೃಹ ನಿರ್ಮಾಣ ಸಹಕಾರ ಸಂಘವನ್ನು ಸ್ಥಾಪಿಸಿ ಈಗಾಗಲೇ ಹಲವರಿಗೆ ಆನಂದಧಾಮ ಬಡಾವಣೆಯ ಮೂಲಕ ನಿವೇಶನವನ್ನು ವಿತರಿಸಲಾಗಿದೆ. ಅಲ್ಲಿ ೬ ತಿಂಗಳೊಳಗೆ ಮನೆ ಕಟ್ಟುವವರಿಗೆ ೧ಲಕ್ಷ ನೆರವು ಕೂಡ ನೀಡಲಾಗುವುದು ಎಂದರು.
#Shivamogga #Trip #Istalingapooje
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv