Cnewstv / 18.02.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿರಾಳಕೊಪ್ಪ ಬಸ್ ನಿಲ್ದಾಣದಲ್ಲಿದ್ದ ಬ್ಯಾಗ್ ನಲ್ಲಿದ್ದ ನಿಗೂಢ ವಸ್ತು ಸ್ಫೋಟ.
ಶಿವಮೊಗ್ಗ : ಶಿರಾಳಕೊಪ್ಪ ಬಸ್ ನಿಲ್ದಾಣ ಸಮೀಪ ನಿಗೂಢ ವಸ್ತು ಸ್ಫೋಟವಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ
ಬಸ್ ನಿಲ್ದಾಣ ಬಳಿ ರಸ್ತೆಯ ಪುಟ್ ಪಾತ್ ನಲ್ಲಿ ಈ ಘಟನೆ ನಡೆದಿದೆ. ಬ್ಲಾಸ್ಟ್ ನ ತೀವ್ರತೆಯಿಂದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಗಾಯಾಳುಗಳು ಶಿಕಾರಿಪುರ ಆಸ್ಪತ್ರೆಗೆ ದಾಖಲು ಮಾಡಲಾಇ.
ಬ್ಯಾಗ್ ನಲ್ಲಿದ್ದ ವಸ್ತು ಏಕಾಏಕಿ ಸ್ಫೋಟಗೊಂಡಿದೆ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಂದಿ ಶಿಕಾರಿಗೆ ಬಳಸುವ ನಾಡಾ ಬಾಂಬ್ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ.ತಕ್ಷಣ ಸ್ಥಳಕ್ಕೆ ಶಿರಾಳಕೊಪ್ಪ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
#Shiralkoppa #Bombblast #bombblast #Shikaripura #Shivamogga
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ..
C News TV Kannada News Online in cnewstv