Cnewstv / 17.02.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಹೊತ್ತಿ ಉರಿದ ರಾಹುಲ್ ಹುಂಡೈ ಶೋರೂಮ್.. ಹೇಗಿದೆ ಸದ್ಯದ ಪರಿಸ್ಥಿತಿ ??
ಶಿವಮೊಗ್ಗ : ನಗರದ ಶಂಕರ್ ಮಠ ರಸ್ತೆಯಲ್ಲಿರುವ ರಾಹುಲ್ ಹುಂಡೈ ಕಾರ್ ಶೋರೂಮ್ ನಲ್ಲಿ ರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಶೋರೂಮ್ ಸಂಪೂರ್ಣ ವಾಲ್ ಸೀಲಿಂಗ್ ನಿಂದ ಮಾಡಲಾಗಿದ್ದರಿಂದ ಬೆಂಕಿಯಿಂದ ಶೋರೂಮಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ.
ಶೋರೂಮ್ ನಲ್ಲಿ ಬೆಂಕಿ ಅವಘಡಕ್ಕೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.
ಶೋರೂಮ್ ನಲ್ಲಿದ್ದ ಮೂರು ಕಾರುಗಳು ಹಾಗೂ ಸರ್ವಿಸ್ ಗೆ ಎಂದು ಇಟ್ಟಿದ್ದ ಕಾರುಗಳು ಹಾಗೂ ಪಕ್ಕದ ಟಾಟಾ ಶೋರೂಮ್ ನಾ ಹೊರ ಭಾಗದಲ್ಲಿದ್ದ 3 ರಿಂದ 4 ಕಾರುಗಳು ಬೆಂಕಿಗೆ ಸಿಲುಕಿ ಭಾಗಶಃ ನಾಶವಾಗಿದೆ. ರಾಹುಲ್ ಹೋಂಡೈ ಶೋ ರೂಮಿನ ನೆಲಮಹಡಿಯಲ್ಲಿ ಇದ್ದಂತಹ ಕಾರಿನ ಬಿಡಿ ಭಾಗಗಳು ಕೂಡ ಸುಟ್ಟು ಭಸ್ಮವಾಗಿದೆ. ಒಟ್ಟು ನಷ್ಟದ ಪ್ರಮಾಣ ನಿಖರವಾಗಿ ತಿಳಿದುಬಂದಿಲ್ಲ.
ಶೋರೂಮ್ ಗೆ ಬೆಂಕಿ ಬಿದ್ದಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 1.30 ರವರೆಗೆ ಬೆಂಕಿ ನಂದಿಸುವುದರಲ್ಲಿ ನಿರತರಾಗಿದ್ದರು. ಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶಂಕರ್ ಮಠ ರಸ್ತೆಯ ಶೋರೂಮ್ ನ ಮುಂಭಾಗದ ಒಂದು ರಸ್ತೆಯನ್ನ ಬಂದ್ ಮಾಡಲಾಗಿದೆ.
#RahulHyundaiShimoga #RahulHyundai #ShankarMuttRoad #Sheshadripuram #Fireaccident #Showroom
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv