Breaking News

ಸಂಸದರ ಕಚೇರಿ ಎದುರು ಬಿಸಿಯೂಟ ನೌಕರರ ಪ್ರತಿಭಟನೆ

Cnewstv / 23.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಸಂಸದರ ಕಚೇರಿ ಎದುರು ಬಿಸಿಯೂಟ ನೌಕರರ ಪ್ರತಿಭಟನೆ

ಶಿವಮೊಗ್ಗ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಸಿಯೂಟ ನೌಕರರು ಇಂದು ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಿಸಿಯೂಟ ನೌಕರರ ಸಮಸ್ಯೆ ಹಾಗೆಯೇ ಉಳಿದಿವೆ. ಕಡಿಮೆ ಸಂಬಳಕ್ಕಾಗಿ ಬಿಸಿಯೂಟ ನೌಕರರನ್ನು, ಆಶಾ ಕಾರ್ಯಕರ್ತೆಯರನ್ನು, ಅಂಗನವಾಡಿ ನೌಕರರನ್ನು ದುಡಿಸಿಕೊಳ್ಳಲಾಗುತ್ತಿದೆ. ಹಲವು ವರ್ಷಗಳಾದರೂ ವೇತನ ಏರಿಕೆ ಮಾಡಿಲ್ಲ. ಹಿಂದೂ ಮಹಿಳೆಯರ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ ನಮ್ಮನ್ನು ಗೌರವಧನ ಹೆಸರಲ್ಲಿ ಕಟ್ಟಿ ಹಾಕಿದೆ. ಸೌಲಭ್ಯ ನೀಡದೇ ವಂಚನೆ ಮಾಡುತ್ತಿದೆ ಎಂದು ದೂರಿದರು.

ದೇಶದ ಕಾರ್ಪೊರೇಟ್ ಕಂಪನಿಗಳಿಗೆ ೧೪.೫ ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ನೌಕರರಿಗೆ ಕೊಡಲು ಹಣವಿಲ್ಲವೇ? ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಯೋಜನೆಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ನಮಗೆ ಎಲ್ಲಾ ಸೌಲಭ್ಯ ನೀಡಬೇಕು. ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು ೪ ಗಂಟೆಯಿAದ ೬ ಗಂಟೆಗೆ ಹೆಚ್ಚಿಸಬೇಕು. ಖಾಸಗೀಕರಣ ನಿಲ್ಲಿಸಬೇಕು. ಶಿಕ್ಷಣ ಇಲಾಖೆ ಅಡಿಯಲ್ಲಿಯೇ ಅಕ್ಷರ ದಾಸೋಹ ಯೋಜನೆ ಮುಂದುವರೆಸಬೇಕು.

ನಿವೃತ್ತಿಯಾಗಿರುವ ಎಲ್ಲರಿಗೂ ಒಂದು ಲಕ್ಷ ರೂ ಇಡುಗಂಟು ಕೊಡಬೇಕು. ವೇತನ ಹೆಚ್ಚಳ ಮಾಡಬೇಕು. ರಜೆ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರಮುಖರಾದ ಹನುಮಮ್ಮ, ಸುನಿತಾ, ಸೂರ್ಯಕಲಾ, ರೂಪಾ, ಭಾಗ್ಯಮ್ಮ, ಇತರರು ಇದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

SP ದಿನೇಶ್ ರವರಿಗೆ ಕುರುಬಲ ಇರಬಹುದೇ ?? ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮಾತು ಕೊಡಲು ಸಾಧ್ಯವೇ ??

Leave a Reply

Your email address will not be published. Required fields are marked *

*