Cnewstv / 11.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಯುವನಿಧಿ ಕಾರ್ಯಕ್ರಮ ಪ್ರಯುಕ್ತ ಮಾರ್ಗ ಬದಲಾವಣೆ-ವಾಹನ ನಿಲುಗಡೆ.
ಶಿವಮೊಗ್ಗ : ಕರ್ನಾಟಕ ಸರ್ಕಾರ ಆಯೋಜಿಸಿರುವ ಯುವನಿಧಿ ಯೋಜನೆ ಕಾರ್ಯಕ್ರಮವನ್ನು ನಗರದ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ವಾಹನಗಳ ನಿಲುಗಡೆ ಹಾಗೂ ತಾತ್ಕಾಲಿಕವಾಗಿ ಈ ಕೆಳಕಂಡಂತೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ.
ಜ.12 ರಂದು ಬೆಳಿಗ್ಗೆ 6 ರಿಂದ ಸಂಜೆ 6.30 ರವರೆಗೆ
ಕೆಳಕಂಡಂತೆ ವಾಹನಗಳ ಮಾರ್ಗ ಬದಲಾವಣೆ:
ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಆಲ್ಕೊಳ ಸರ್ಕಲ್ ಗೋಪಾಳ ಸರ್ಕಲ್ ನ್ಯೂಮಂಡ್ಲಿ ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿ ರಸ್ತೆಗೆ ಸೇರುವುದು.
ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ನ್ಯೂಮಂಡ್ಲಿ ಸರ್ಕಲ್ ಗೋಪಾಳ ಸರ್ಕಲ್ ಆಲ್ಕೊಳ ಮಾರ್ಗವಾಗಿ ಸಾಗರ ರಸ್ತೆ ಬಂದು ಸೇರುವುದು.
ಶಿವಮೊಗ್ಗದಿಂದ ಶಿಕಾರಿಪುರ, ನ್ಯಾಮತಿ ಸೊರಬ ಕಡೆ ಹೋಗುವ ಎಲ್ಲಾ ವಾಹನಗಳು ಆಯನೂರು ಹಾರ್ನಳ್ಳಿ ಸವಳಂಗ ಮಾರ್ಗವಾಗಿ ಚಲಿಸುವುದು.
ಶಿಕಾರಿಪುರ ನ್ಯಾಮತಿ ಸೊರಬ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಎಲ್ಲಾ ವಾಹನಗಳು ಸವಳಂಗ ಹಾರ್ನಳ್ಳಿ ಆಯನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಬರುವುದು.
ಶಿವಮೊಗ್ಗ ನಗರದಿಂದ ಅಬ್ಬಲಗೆರೆ ಕೊಮ್ಮನಾಳ್ ಕುಂಚೇನಹಳ್ಳಿ ತಾಂಡಗಳಿಗೆ ಹೋಗುವ ಎಲ್ಲಾ ವಾಹನಗಳು ರಾಗಿಗುಡ್ಡ ಕುವೆಂಪು ನಗರದ ಮುಖಾಂತರ ಚಲಿಸುವುದು.
ಅಬ್ಬಲಗೆರೆ ಕೊಮ್ಮನಾಳ್ ಕುಂಚೇನಹಳ್ಳಿ ತಾಂಡಗಳಿಂದ ಶಿವಮೊಗ್ಗ ನಗರಕ್ಕೆ ಬರುವ ಎಲ್ಲಾ ವಾಹನಗಳು ಕುವೆಂಪು ನಗರ ರಾಗಿಗುಡ್ಡ ಸಂಗೊಳ್ಳಿ ರಾಯಣ್ಣ ಸರ್ಕಲ್ ಮುಖಾಂತರ ಚಲಿಸುವುದು.
ವಾಹನ ನಿಲುಗಡೆ ನಿಷೇಧವಾಗಿರುವ ಸ್ಥಳಗಳು:
ಆಲ್ಕೊಳ ಸರ್ಕಲ್‍ನಿಂದ ಪೊಲೀಸ್ ಚೌಕಿ ಮಾರ್ಗವಾಗಿ ಉಷಾ ಸರ್ಕಲ್‍ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಹೆಲಿಪ್ಯಾಡ್ ಸರ್ಕಲ್‍ನಿಂದ ಜೈಲ್ ಸರ್ಕಲ್‍ವರೆಗೆ ಹಾಗೂ ಜೈಲ್ ಸರ್ಕಲ್‍ನಿಂದ ಲಕ್ಷ್ಮೀ ಟಾಕೀಸ್‍ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಎಂ.ಆರ್.ಎಸ್ ಸರ್ಕಲ್ ಬೈಪಾಸ್ ರಸ್ತೆ ಸಂದೇಶ್ ಮೋಟಾರ್ ಸರ್ಕಲ್‍ನಿಂದ ಅಶೋಕ ಸರ್ಕಲ್ ಮೂಲಕ ಹೆಲಿಪ್ಯಾಡ್ ಮಾರ್ಗವಾಗಿ ವಿನೋಬನಗರ ಕೆಳದಿ ಚೆನ್ನಮ್ಮ ರಸ್ತೆ ಸೈಕಲೋತ್ಸವ ಸರ್ಕಲ್‍ನಿಂದ ವಿನೋಬನಗರ ಕೆ.ಇ.ಬಿ ಆಫೀಸ್‍ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ರಾಜ್‍ಕುಮಾರ್ ಸರ್ಕಲ್‍ನಿಂದ ಮೇದಾರಿ ಕೇರಿ ರಸ್ತೆ ಬೊಮ್ಮನಕಟ್ಟೆ ರೈಲ್ವೆ ಗೇಟ್‍ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಪೊಲೀಸ್ ಚೌಕಿಯಿಂದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಶನೇಶ್ವರ ದೇವಸ್ಥಾನ ರಸ್ತೆ ಮಾರ್ಗವಾಗಿ ಬೊಮ್ಮನಕಟ್ಟೆ ರೈಲ್ವೆ ಗೇಟ್‍ಗೆ ಹೋಗುವ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸಲಿರುವ ವಾಹನಗಳ ಮಾರ್ಗ ಮತ್ತು ಪಾರ್ಕಿಂಗ್ ವ್ಯವಸ್ಥೆ:
ತೀರ್ಥಹಳ್ಳಿ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ನ್ಯೂಮಂಡ್ಲಿ ಎಡಕ್ಕೆ ತಿರುಗಿ ಗೋಪಾಳ ಸರ್ಕಲ್ ಆಲ್ಕೊಳ ಸರ್ಕಲ್ ಬಲಕ್ಕೆ ತಿರುಗಿ ಎ.ಪಿ.ಎಂ.ಸಿ ಒಳಭಾಗಕ್ಕೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಎ.ಪಿ.ಎಂ.ಸಿ ಒಳಭಾಗದಲ್ಲಿ ಪಾರ್ಕಿಂಗ್ ಮಾಡುವುದು.
ಸಾಗರ, ಹೊಸನಗರ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಆಲ್ಕೊಳ ಸರ್ಕಲ್ ಸಾಗರ ರಸ್ತೆ ಆಲ್ಕೊಳ ಸರ್ಕಲ್ ಪೊಲೀಸ್ ಚೌಕಿಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಎ.ಪಿ.ಎಂ.ಸಿ ಮತ್ತು ಸೋಮಿನಕೊಪ್ಪ ಆದರ್ಶನಗರ ಲೇಔಟ್‍ನಲ್ಲಿ ಪಾರ್ಕಿಂಗ್ ಮಾಡುವುದು.
ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಬಸವನಗಂಗೂರು ಬೊಮ್ಮನಕಟ್ಟೆ ಮಾರ್ಗವಾಗಿ ಬೊಮ್ಮನಕಟ್ಟೆಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಬೊಮ್ಮನಕಟ್ಟೆ ಎಸ್.ಎಲ್.ಕೆ ಲೇಔಟ್‍ನಲ್ಲಿ ಪಾರ್ಕಿಂಗ್ ಮಾಡುವುದು.
ಹೊನ್ನಾಳಿ, ಹರಿಹರ, ದಾವಣಗೆರೆ, ಹಾವೇರಿ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಸವಳಂಗ ಬಸವನಗಂಗೂರು ಬೊಮ್ಮನಕಟ್ಟೆ ಮಾರ್ಗವಾಗಿ ಬೊಮ್ಮನಕಟ್ಟೆಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಬೊಮ್ಮನಕಟ್ಟೆ ಎಸ್.ಎಲ್.ಕೆ ಲೇಔಟ್‍ನಲ್ಲಿ ಪಾರ್ಕಿಂಗ್ ಮಾಡುವುದು.
ಭದ್ರಾವತಿ, ಚಿಕ್ಕಮಗಳೂರು, ಎನ್,ಆರ್.ಪುರ ಕೊಪ್ಪ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಎಂ.ಆರ್.ಎಸ್ ಸರ್ಕಲ್ ಬೈಪಾಸ್ ರಸ್ತೆ ಸಂದೇಶ್ ಮೋಟರ್ಸ್ ಸರ್ಕಲ್ ನ್ಯೂಮಂಡ್ಲಿ ಸರ್ಕಲ್ ಗೋಪಾಳ ಸರ್ಕಲ್ ಆಲ್ಕೊಳ ಸರ್ಕಲ್ ಬಲಕ್ಕೆ ಎ.ಪಿ.ಎಂ.ಸಿ ಒಳಭಾಗಕ್ಕೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಎ.ಪಿ.ಎಂ.ಸಿ ಒಳಭಾಗದಲ್ಲಿ ಪಾರ್ಕಿಂಗ್ ಮಾಡುವುದು.
ಹೊಳೆಹೊನ್ನೂರು, ಚನ್ನಗಿರಿ, ಚಿತ್ರದುರ್ಗದ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಹೊಳೆಹೊನ್ನೂರು ಸರ್ಕಲ್ ಶಂಕರಮಠ ಸರ್ಕಲ್ ಕೆ.ಇ.ಬಿ ಸರ್ಕಲ್ ರೈಲ್ವೆ ನಿಲ್ದಾಣದ ರಸ್ತೆ ಉಷಾ ಸರ್ಕಲ್‍ಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ನೆಹರು ಕ್ರೀಡಾಂಗಣ ಕುವೆಂಪು ರಂಗಮಂದಿರ ಎನ್.ಇ.ಎಸ್ ಮೈದಾನ ಶೇಷಾದ್ರಿಪುರಂ ಗೂಡ್ಸ್ ಶೇಡ್ ಸೈನ್ಸ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
ಈ ಎಲ್ಲಾ ಮಾಗ್ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು ಆಂಬುಲೆನ್ಸ್ ಹಾಗೂ ಮೂಲಭೂತ ಸವಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿರುತ್ತದೆ ಎಂದು ಅವರು ತಿಳಿಸಿದ್ದಾರೆ.
#Yuvanidhi #parking #traffic #shivamogga
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ..
Recent Comments