Www.cnewstv.in / 10.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಾಂಗ್ರೆಸ್ಸಿಗೂ ಒಂದು ಸಂಸ್ಕೃತಿ ಬರ್ತಾ ಇದೆ, ಇದಕ್ಕೆ ಉದಾಹರಣೆ ಯುವನಿಧಿ ಕಾರ್ಯಕ್ರಮ – ಎಂ ಬಿ ಹರಿಕೃಷ್ಣ.
ಶಿವಮೊಗ್ಗ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯುವ ನಿಧಿ ಯೋಜನೆ ನಿಯಮದ ಪ್ರಕಾರ ಶಿವಮೊಗ್ಗದಲ್ಲಿ ಸದ್ಯ ಯಾರೂ ಫಲಾನುಭವಿ ಆಗಲು ಬರುವುದೇ ಇಲ್ಲ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಬಿ ಕೆ ಹರಿಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯುವನಿಧಿ ಯೋಜನೆ ಅರ್ಜಿ ಫಾರಂ ಕೊನೆಯಲ್ಲಿ ಫಲಾನುಭವಿ ಉತ್ತೀರ್ಣರಾಗಿ 6 ತಿಂಗಳು ಕಳೆದಿರಬೇಕು ಎಂದು ಉಲ್ಲೇಖಿಸಲಾಗಿದೆ. ಆದರೆ ಕುವೆಂಪು ವಿಶ್ವವಿದ್ಯಾಲಯದ ಅಂತಿಮ ಪದವಿ ಪರೀಕ್ಷೆಗಳ ಫಲಿತಾಂಶ ಕಳೆದ ಅಕ್ಟೋಬರ್‌ನಲ್ಲಿ ಪ್ರಕಟವಾಗಿದೆ. ಅಂದರೆ ಫಲಿತಾಂಶ ಪ್ರಕಟವಾಗಿ ಕೇವಲ 3 ತಿಂಗಳು ಮಾತ್ರ ಆಗಿದೆ. ಹಾಗಾಗಿ ಇವರುಗಳು ಫಲಾನುಭವಿ ಆಗಲು ಬರುವುದೇ ಇಲ್ಲ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕೂಡ ಬಹುತೇಕ ಅದೇ ಸಮಯಕ್ಕೆ ಫಲಿತಾಂಶ ಪ್ರಕಟವಾಗಿದೆ. ಆ ವಿದ್ಯಾರ್ಥಿಗಳು ಕೂಡ ಯೋಜನೆಯ ಫಲಾನುಭವಿ ಆಗಲು ಬರುವುದಿಲ್ಲ. ಅರ್ಜಿ ಸಲ್ಲಿಸಬಹುದು ಅಷ್ಟೇ. ಆದರೆ ಹಣ ಪಡೆಯಲು ಇನ್ನೂ ಮೂರು ತಿಂಗಳು ಕಾಯಬೇಕಾಗುತ್ತದೆ. ಫಲಾನುಭವಿಗಳೇ ಇಲ್ಲದೇ ಶಿವಮೊಗ್ಗದಲ್ಲಿ ಕಾರ್ಯಕ್ರಮ ಮಾಡಿ ಯಾರಿಗೆ ಹಣ ಹಾಕುತ್ತಾರೆ ಎಂದು ಪ್ರಶ್ನಿಸಿದರು?
ಒಂದೊಂದು ರಾಜಕೀಯ ಪಕ್ಷಗಳದ್ದು ಒಂದೊಂದು ಅಭಿವೃದ್ಧಿ ಮಾನದಂಡ ಇರುತ್ತದೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಮಾನದಂಡಗಳೊಂದಿಗೆ ಹೊರಟಿದೆ. ಚುನಾವಣಾ ಪೂರ್ವದಲ್ಲಿ ಎಲ್ಲರಿಗೂ ಗ್ಯಾರಂಟಿ ಎಂದು ಹೇಳಿ ನಂತರ ನಿಯಮಗಳನ್ನು ಹೇರುತ್ತಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಪ್ರತಿಭಟಿಸಿದ ಪರಿಣಾಮ ಒಂದಿಷ್ಟು ಸಡಿಲಿಕೆ ಮಾಡಿದ್ದಾರೆ.
ಇವರ ಮಾದರಿಗಳ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ ಅನುಷ್ಠಾನದ ಬಗ್ಗೆ ಪ್ರಶ್ನೆಗಳಿವೆ ಎಂದರು. ಚುನಾವಣಾ ಪೂರ್ವದಲ್ಲಿ ಎಲ್ಲ ನಿರುದ್ಯೋಗಿ ಫಲಾನುಭವಿಗಳಿಗೆ ಯುವನಿಧಿ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ಈಗ 2023 ರಲ್ಲಿ ಉತ್ತೀರ್ಣವಾಗಿ 06 ತಿಂಗಳು ಕಳೆದಿರಬೇಕು ಎಂಬ ಮಾನದಂಡ ರೂಪಿಸಿದ್ದಾರೆ. ಹಾಗಿದ್ದರೆ ಇನ್ನುಳಿದ ನಿರುದ್ಯೋಗಿಗಳು ಏನು ಮಾಡಬೇಕು? ಇವರ ಬದಲಾದ ನಿಲುವಿನಿಂದ ಅನೇಕರು ಭ್ರ‍್ರಮನಿರಸನಗೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಯುವಮೋರ್ಚಾ ಮುಂಬರುವ ದಿನಗಳಲ್ಲಿ ಹೋರಾಟ ಮಾಡಲಿದೆ ಎಂದರು.
#Bjp #Yuvanidhi #Shivamogga #BKHarikrishna #Sidaramayya #DKShivakumar #youthcongress #congress #yuvanidhi #ಯುವಮೋರ್ಚಾ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ
Recent Comments