Cnewstv / 16.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಜಿಲ್ಲೆಗೆ ಆಗಮಿಸಲಿರುವ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆ..
ಶಿವಮೊಗ್ಗ, ಡಿ.೧೬: ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆ ಡಿ.೧೮ರಂದು ಮಧ್ಯಾಹ್ನ ೨ಕ್ಕೆ ಭದ್ರಾವತಿಗೆ ಆಗಮಿಸಲಿದ್ದು, ಜಿಲ್ಲಾ ಭಗೀರಥ ಉಪ್ಪಾರ ಸಮಾಜದ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್.ಟಿ.ಹಾಲಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಸುಮಾರು ೧೧ಕೋಟಿಗೂ ಹೆಚ್ಚು ಉಪ್ಪಾರ ಜನಾಂಗದವರಿದ್ದಾರೆ. ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಸಮುದಾಯವನ್ನು ಜಾಗೃತಗೊಳಿಸುವ ಹಿನ್ನಲೆಯಲ್ಲಿ ಭಗೀರಥಿ ಭಾರತ ಜನಕಲ್ಯಾಣ ರಥಯಾತ್ರೆ ಬಿಹಾರ್ ರಾಜ್ಯದಿಂದ ಆರಂಭವಾಗಿ ದೆಹಲಿ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಪ್ರವಾಸ ಮಾಡಿ, ಈಗ ಕರ್ನಾಟಕ ರಾಜ್ಯಕ್ಕೆ ಆಗಮಿಸಿದೆ.
ಈ ರಥವು ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಡಿ.೧೮ರಂದು ಆಗಮಿಸಲಿದೆ. ಈ ಯಾತ್ರೆಯಲ್ಲಿ ಶ್ರೀ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ರಾಜ್ಯದ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು, ಉಪ್ಪಾರ ಸಮಾಜದ ವಿವಿಧ ಘಟಕಗಳು, ಜಿಲ್ಲಾ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತನಿಧಿಗಳು, ಕಟ್ಟೆ ಬಳಗದ ಯಜಮಾನರು, ಮುಖಂಡರು, ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ಉಪ್ಪಾರ ಸಂಘದಿAದ ಅದ್ಧೂರಿಯಾಗಿ ಈ ರಥವನ್ನು ಬೈಕ್ ರ‍್ಯಾಲಿಯ ಮೂಲಕ ಸ್ವಾಗತಿಸಲಿದ್ದೇವೆ ಎಂದರು.
ಸುಮಾರು ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಇದರಲ್ಲಿ ಭಾಗವಹಿಸಲಿದ್ದಾರೆ. ರಥ ಯಾತ್ರೆ ಭದ್ರಾವತಿಗೆ ಬಂದರೂ ಕೂಡ ಶಿವಮೊಗ್ಗ ಸೇರಿದಂತೆ ವಿವಿಧ ಊರುಗಳಲ್ಲಿ ಮತ್ತು ನಗರಗಳಲ್ಲಿ ಈ ಕಲ್ಯಾಣರಥ ಯಾತ್ರೆಗಾಗಿ ಸಂಭ್ರಮದಿAದ ಸ್ವಾಗತಿಸುತ್ತಾರೆ. ಭದ್ರಾವತಿಯ ಗಡಿ ಪ್ರದೇಶದಿಂದ ಬೈಕ್ ರ‍್ಯಾಲಿ ಮೂಲಕ ಇದು ಪ್ರವೇಶವಾಗುತ್ತದೆ. ಭದ್ರಾವತಿ ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಆಯೋಜಿಸಲಾಗಿದೆ. ವಿವಿಧ ಕಲಾ ತಂಡಗಳು ಇದರಲ್ಲಿ ಭಾಗವಹಿಸಲಿದ್ದಾರೆ. ನಂತರ ಸುಮಾರು ೩ಕ್ಕೆ ಭದ್ರಾವತಿ ನಗರದ ಬಸವೇಶ್ವರ ವೃತ್ತದಲ್ಲಿ ಯಾತ್ರೆ ಸಮಾವೇಶಗೊಳ್ಳುತ್ತದೆ.
ಕೆ.ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಖಜಾಂಚಿ ನಾಗರಾಜ್ ಕಂಕಾರಿ, ಪದಾಧಿಕಾರಿಗಳಾದ ಕೆ.ರಾಮಪ್ಪ, ಬಿ.ಮೋಹನ, ಎಸ್.ರಾಜಶೇಖರ್, ಮುರಳಿಸಣ್ಣಕ್ಕಿ, ಮೈಲಾರಪ್ಪ ಸೇರಿದಂತೆ ಹಲವರಿದ್ದರು.
#ಭಗೀರಥಭಾರತಜನಕಲ್ಯಾಣರಥಯಾತ್ರೆ..#ಉಪ್ಪಾರಜನಾಂಗ #ಪುರುಷೋತ್ತಮಾನಂದಪುರಿ ಮಹಾಸ್ವಾಮಿ #upparasamaja #Bhagirathasamaja #Shivamogga
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ
Recent Comments