Www.cnewstv.in / 31.10.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹಿಪ್‌ಹಾಪ್ ಚಾಂಪಿಯನ್‌ಶಿಪ್ ಪಡೆದ ಸ್ಟೆಪ್ ಹೋಲ್ಡರ್
ಶಿವಮೊಗ್ಗ : ಇಂಡಿಯಾ ಸ್ಪೋಟ್ಸ್ ಏರೋಬಿಕ್ಸ್ ಅಂಡ್ ಫಿಟ್‌ನೆಸ್ ಫೆಡರೇಷನ್ (ಐಎಸ್ಎಎಫ್ಎಫ್) ನಿಂದ ಮಂಜೂರಾತಿ ಪಡೆದಿರುವ ಸ್ಪೋಟ್ಸ್ ಏರೋಬಿಕ್ಸ್ ಅಂಡ್ ಫಿಟ್‌ನೆಸ್ ಅಸೋಸಿಯೇಷನ್ ಆಫ್ ಕರ್ನಾಟಕ (ಎಸ್ಎಎಫ್‌ಎಕೆ) ವತಿಯಿಂದ ಮಂಡ್ಯದ ಪಿಇಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅ. 27ರಿಂದ 29ರವರೆಗೆ ಹಮ್ಮಿಕೊಂಡಿದ್ದ 18ನೇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್‌ಶಿಪ್‌ನ ಹಿಪ್ ಹಾಪ್ ವಿಭಾಗದಲ್ಲಿ ನಗರದ ಸ್ಟೆಪ್ ಹೋಲ್ಡರ್ ಪ್ರತಿನಿಧಿಸಿದ್ದ ಕರ್ನಾಟಕ ತಂಡದ ಪಾಲಾಗಿದೆ.
9, 12, 14 ಮತ್ತು 16 ವರ್ಷದ ಒಳಗಿನವರ ಸ್ಪೋಟ್ಸ್ ಏರೋಬಿಕ್ಸ್, ಫಿಟ್‌ನೆಸ್ ಏರೋಬಿಕ್ಸ್, ಸ್ಟೆಪ್ ಏರೋಬಿಕ್ಸ್ ಮತ್ತು ಹಿಪ್ ಹಾಪ್ ವಿಭಾಗಗಳಲ್ಲಿ ಸ್ಟೆಪ್ ಹೋಲ್ಡರ್‌ನ ನೃತ್ಯಪಟುಗಳು ಹಾಗೂ ಈ ತಂಡದಲ್ಲಿದ್ದ ಜೈನ್ ಪಬ್ಲಿಕ್ ಸ್ಕೂಲ್ ಮತ್ತು ಪೋದಾರ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಪ್ರತಿನಿಧಿಸಿ ಒಟ್ಟು 94 ಪದಕಗಳನ್ನು ಪಡೆದುಕೊಂಡಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv