Cnewstv / 8.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಸಾರ್ವಜನಿಕ ಅಹವಾಲು ಸಭೆ
ಶಿವಮೊಗ್ಗ : ಸ್ಮಾರ್ಟ್ ಸಿಟಿ ಯೋಜನೆಯನ್ನ ಪಾಲಿಕೆಗೆ ಹಸ್ತಾಂತರಿಸುವ ಸಲುವಾಗಿ ಸಾರ್ವಜನಿಕ ಅಹವಾಲನ್ನ ಸ್ವೀಕರಿಸಲು ದಿನಾಂಕ ನಿಗದಿಪಡಿಸಲಾಗಿದೆ. ಸೆ.12 ರಂದು ಕುವೆಂಪು ರಂಗ ಮಂದಿರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯನ್ನ ಕರೆಯಲಾಗಿದೆ.
ಸಾರ್ಟ್ ಸಿಟಿ ಕಾಮಗಾರಿಯನ್ನ ಪಾಲಿಕೆಗೆ ಹಸ್ತಾಂತರಿಸಲು ಕಳೆದ ತಿಂಗಳು ಸಾರ್ವಜನಿಕ ಆಕ್ಷೇಪಣೆಯನ್ನ ಕರೆಯಲಾಗಿತ್ತು. ಸಾರ್ವಜನಿಕ ಯೋಜನೆಯ ಅನುಷ್ಠಾನದ ಬಗ್ಗೆ ನಾಗರೀಕ ಹಿತರಕ್ಷಣೆಯ ವೇದಿಕೆ ಆಕ್ಷೇಪಣೆ ಎತ್ತಿತ್ತು. ಪಾಲಿಕೆಗೆ ಯೋಜನೆಯನ್ನ ಹಸ್ತಾಂತರಿಸುವ ಮೊದಲು ಲೋಪಗೊಂಡಿರುವ ಯೋಜನೆಯನ್ನ ಸರಿಪಡಿಸಿ ನಂತರ ಹಸ್ತಾಂತರಿಸಲು ಹೇಳಿತ್ತು.
1000 ಕೋಟಿ ರೂ. ಯೋಜನೆಯ ಸ್ಮಾರ್ಟ್ ಸಿಟಿಯ ಬಗ್ಗೆ ನಾಗರೀಕರಿಂದಲೇ ಆಕ್ಷೇಪಣೆ ವ್ಯಕ್ತವಾಗಿತ್ತು. ಕಾಮಗಾರಿ ಆರಂಭದ ಮೊದಲು ಸಾರ್ವಜನಿಕರ ಯಾವುದೇ ಸಲಹೆಯನ್ನ ಸ್ಮಾರ್ಟ್ ಸಿಟಿ ಯೋಜನೆಯು ಪರಿಗಣಿಸದೆ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆಯ ವಿರುದ್ಧ ಸಾರ್ವಜನಿಕರು ರೋಸತ್ತು ಹೋಗಿದ್ದು ಇತ್ತು.
ಆದರೆ ಆಗಸ್ಟ್ ತಿಂಗಳಲ್ಲಿ ಈ ಕಾಮಗಾರಿಯನ್ನ ತರಾತುರಿಯಲ್ಲಿ ಪಾಲಿಕೆಗೆ ಹಸ್ತಾಂತರಿಸಲು ಸ್ಮಾರ್ಟ್ ಸಿಟಿ ಚಿಂತಿಸುತ್ತಿದೆ ಎಂದು ನಾಗರೀಕ ಹಿತರಕ್ಷಣ ವೇದಿಕೆ ಆಕ್ಷೇಪಿಸಿತ್ತು. ಇದರ ಪರಿಣಾಮವಾಗಿ ಸೆ.12 ರಂದು ಕುವೆಂಪು ರಂಗ ಮಂದಿರದಲ್ಲಿ ಯೋಜನೆ ಅನುಷ್ಠಾನದ ಕುರಿತು ಸಾರ್ವಜನಿಕ ಅಹವಾಲು ಸ್ವೀಕರಿಸಲು ತೀರ್ಮಾನಿಸಲಾಗಿದೆ. ಈ ಅಹವಾಲು ಸ್ವೀಕಾರಸಭೆಯಲ್ಲಿ ಸಾರ್ವಜನಿಕರ, ಸಂಘ ಸಂಸ್ಥೆಗಳ ಅಹವಾಲನ್ನ ಪಾಲಿಕೆ ಪರಿಗಣಿಸಲಿದೆಯಾ ಅಥವಾ ನಾಮಕಾವಸ್ಥೆಗೆ ಸಭೆ ನಡೆಸಲಿದೆಯಾ ಕಾದು ನೋಡಬೇಕಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments