Cnewstv / 04.09.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಹೊಸಮನೆ ಬಡಾವಣೆಯಲ್ಲಿ ಪೊಲೀಸ್ ಚೌಕಿ ನಿರ್ಮಿಸಲು ಪಾಲಿಕೆ ವಿಪಕ್ಷ ನಾಯಕಿ ಯಿಂದ ಮನವಿ.
ಶಿವಮೊಗ್ಗ : ಹೊಸಮನೆ ಬಡಾವಣೆಯ ನಾಗರೀಕರ ಅನುಕೂಲಕ್ಕಾಗಿ ಪೊಲೀಸ್ ಚೌಕಿ ನಿರ್ಮಿಸಿ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಇಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಹೊಸಮನೆ ಬಡಾವಣೆ ಹಾಗೂ ಶರಾವತಿ ನಗರದ ನಾಗರೀಕರ ಹಲವು ದಿನಗಳ ಬೇಡಿಕೆಯಾದ ಪೊಲೀಸ್ ಚೌಕಿ ನಿರ್ಮಾಣ ಮಾಡಲು ಆಹ್ವಾಲುಗಳು ಬಂದಿದ್ದು, ಅದರಂತೆ ಈ ಎರಡು ಬಡಾವಣೆಯಲ್ಲಿ ಸುಮಾರು 26 ಸಾವಿರ ಜನಸಂಖ್ಯೆ ಹೊಂದಿದ್ದು. ಈ ಭಾಗದಲ್ಲಿ ಮಧ್ಯಮ ವರ್ಗದವರು , ಬಡವರು, ಕೂಲಿ ಕಾರ್ಮಿಕರು, ಸಂಘಟಿತ ವಲಯದ ಜನರು ಅತಿ ಹೆಚ್ಚು ವಾಸಿಸುತ್ತಿದ್ದು, ಜನರಿಗೆ ಅನುಕೂಲವಾಗಲು ಈ ಎರಡು ಬಡಾವಣೆಗಳ ಮಧ್ಯಭಾಗದಲ್ಲಿ ಅಂದರೆ ಚಾನಲ್ ಏರಿಯ ಮೇಲ್ಭಾಗದಲ್ಲಿ ಸಾಗರ ರಸ್ತೆಯಿಂದ 100 ಅಡಿ ರಸ್ತೆ ರಾಜೇಂದ್ರ ನಗರದ ವರೆಗೆ ಹಾದು ಹೋಗುವ ಸರ್ವಿಸ್ ರಸ್ತೆಯಲ್ಲಿ ನಾಗಪ್ಪ ದೇವಸ್ಥಾನ ಹಾಗೂ ಮಲೆ ಮಾದೇಶ್ವರ ದೇವಸ್ಥಾನದ ಸಮೀಪ ಸರ್ಕಾರಿ ಜಾಗವಿದ್ದು.
ಈ ಜಾಗದಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡುವುದರಿಂದ. ಈ ಭಾಗದ ಎರಡು ಬಡಾವಣೆಯ ನಾಗರೀಕರ ತುರ್ತು ದೂರು ದುಮ್ಮನಗಳಿಗೆ ಸ್ಪಂದಿಸಲು ತುಂಬಾ ಅನುಕೂಲಕರವಾಗಿರುತ್ತದೆ. ಈಗಾಗಲೇ ಎರಡು ಬಡಾವಣೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಸಂಪೂರ್ಣಗೊಂಡಿದ್ದು ರಸ್ತೆಗಳಲ್ಲಿ ಅನೇಕ ಯುವಕರು ಬೈಕ್ ಗಳನ್ನು ಅತಿ ವೇಗವಾಗಿ ಓಡಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ಸಣ್ಣ ಮಕ್ಕಳಿಗೆ ತೊಂದರೆ ಆಗುತ್ತಿದ್ದು, ಜೊತೆಗೆ ಕೆಲವು ಮಾದಕ ವ್ಯಸನಿಗಳು ನಾಗರೀಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು ತತಕ್ಷಣ ನಾಗರೀಕರ ರಕ್ಷಣೆಗೆ ಅನುಕೂಲವಾಗಲು ಈ ಭಾಗದ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಚೌಕಿ ನಿರ್ಮಾಣ ಮಾಡುವುದು ಅತಿ ಅವಶ್ಯಕವಾಗಿದ್ದು, ತಾವುಗಳು ಒಮ್ಮೆ ಬಡಾವಣೆಗೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಈ ಭಾಗದ ಜನರ ಹಲವು ದಿನಗಳ ಬೇಡಿಕೆ ಯಾದ ಪೊಲೀಸ್ ಚೌಕಿ ನಿರ್ಮಿಸಬೇಕೆಂದು ಮನವಿ ಮಾಡಿಕೊಂಡರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments