Cnewstv / 24.08.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಇಸ್ರೋ ವಿಜ್ಞಾನಿಗಳ ಮಹತ್ವದ ಸಾಧನೆ ಇಡೀ ಜಗತ್ತೇ ಮೆಚ್ಚುವಂತದ್ದು – ಎನ್. ರಮೇಶ್.
ಶಿವಮೊಗ್ಗ : ಇಸ್ರೋ ವಿಜ್ಞಾನಿಗಳ ಮಹತ್ವದ ಸಾಧನೆ ಇಡೀ ಜಗತ್ತೇ ಮೆಚ್ಚುವಂತದ್ದು, ವಿಜ್ಞಾನಿಗಳ ಸಾಧನೆಯಿಂದ ವಿಶ್ವ ಭಾರತದ ಕಡೆ ನಿಬ್ಬೆರಗಾಗಿ ನೋಡುವಂತೆ ಮಾಡಿದೆ ಎಂದು ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಎನ್. ರಮೇಶ್ ಹೇಳಿದರು. ಅವರು ಇಂದು ಚಂದ್ರಯಾನ 3 ಯಶಸ್ವಿಯಾಗಿದ್ದಕ್ಕೆ ತಮ್ಮ ಶಾಲೆಯಲ್ಲಿ ವಿಜಯೋತ್ಸವ ಆಚರಿಸಿ, ಸಂಭ್ರಮಿಸಿ ಸಿಹಿ ಹಂಚಿ ಮಾತನಾಡಿದರು.
ಭಾರತ ಪ್ರಾರಂಭದಿಂದಲೂ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಇಸ್ರೊ ಸಂಸ್ಥೆಯನ್ನು ಕೂಡ ಅಂದಿನ ಪ್ರಧಾನ ಮಂತ್ರಿಯಾಗಿದ್ದ ನೆಹರೂರವರು ಸ್ಥಾಪನೆ ಮಾಡಿದ್ದರು. ಅದು ಕೂಡ ಹೆಮ್ಮೆಯ ವಿಷಯವಾಗಿದೆ.ನಂತರ ಬಂದ ಇಂದಿರಾಗಾAಧಿ ಸೇರಿದಂತೆ ದೇಶದ ಎಲ್ಲಾ ಪ್ರಧಾನಿಗಳು ಚಂದ್ರಲೋಕದ ಕಡೆ ಗಮನಹರಿಸಿವೆ. ಇದೀಗ `ವಿಕ್ರಂ ಲ್ಯಾಂಡರ್’ ಚಂದ್ರನನ್ನು ಸ್ಪರ್ಷಿಸಿದೆ. ಇದೊಂದು ರೋಮಾಂಚಕಾರಿ ಅನುಭವವಾಗಿದೆ. ಇದರಿಂದ ಚಂದ್ರನ ಮೇಲಿರುವ ಸಾಕಷ್ಟು ಕುತೂಲಹಕಾರಿ ಅಂಶಗಳು ತಿಳಿಯುತ್ತವೆ ಎಂದರು.
ಚಂದ್ರಯಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ನಡೆದು ಬಂದ ದಾರಿ ಹಾಗೂ ಚಂದ್ರಯಾನ-೩ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟ ಕ್ಷಣಗಳ ವೀಡಿಯೋ ತುಣುಕುಗಳನ್ನು ಮಕ್ಕಳಿಗೆ ತೋರಿಸಲಾಯಿತು. ನಂತರ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲ ಪ್ರದೀಪ್ ಮತ್ತು ಶಾಲಾ ಉಪಾಧ್ಯಾಯ ಹಾಗೂ ಸಿಬ್ಬಂದಿಗಳು ಮತ್ತು ಮಕ್ಕಳು ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments