Cnewstv / 31.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಅಗಸ್ಟ್ 1 ರಿಂದ ನಂದಿನಿ ಹಾಲಿನ ದರ ಹೆಚ್ಚಳ.. ನಾಳೆಯಿಂದಲೇ ಪರಿಷ್ಕೃತದರ ಅನ್ವಯ..
ಶಿವಮೊಗ್ಗ : ಆಗಸ್ಟ್ 1ರಿಂದ ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ. ಪ್ರತಿ ಲೀಟರ್ ನಂದಿನಿ ಹಾಲಿಗೆ 3 ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದೆ ಎಂದು ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀಪಾದ್ ರಾವ್ ರವರು ತಿಳಿಸಿದ್ದಾರೆ.
500 ಮಿಲಿ ಪ್ಯಾಕೇಟ್‌ಗಳಲ್ಲಿ 10 ಮಿಲಿ ಹಾಲಿನ ಪರಿಮಾಣವನ್ನು ಹೆಚ್ಚಿಸಿ ಪ್ರಸ್ತುತ ಇರುವ ದರಕ್ಕೆ ರೂ.2.00 ರಂತೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ನಂದಿನಿ ಹಾಲಿನ ಇತರ ಉತ್ಪನ್ನಗಳಾದ ಮೊಸರು ಮಜ್ಜಿಗೆ, ಲಸ್ಸಿ, ತುಪ್ಪ ಇತರ ವಸ್ತುಗಳ ಮೇಲೂ ಸಹ ಬೆಲೆ ಏರಿಕೆ ಮಾಡಲಾಗಿದೆ.
ನೂತನ ಪರಿಷ್ಕೃತ ಈ ಕೆಳಗಿನಂತೆ.
ಟೋನ್ಸ್ ಹಾಲು (1000 ಮಿಲಿ) 39 ರೂ. ಪರಿಷ್ಕೃತ ದರ 42 ರೂ.
ಟೋನ್ಸ್ ಹಾಲು (510 ಮಿಲಿ) 20 ರೂ. ಪರಿಷ್ಕೃತ ದರ 22 ರೂಪಾಯಿ.
ಶುಭಂ ಸ್ಟಾಂಡರ್ಡ್ ಹಾಲು (1000 ಮಿಲಿ) 45 ರೂ. ಪರಿಷ್ಕೃತ ದರ 48 ರೂಪಾಯಿ.
ಶುಭಂ ಸ್ಟಾಂಡರ್ಡ್ ಹಾಲು (510 ಮಿಲಿ) 23 ರೂ. ಪರಿಷ್ಕೃತ ದರ 25 ರೂಪಾಯಿ.
ಹೊಮೊಜೀನೈಸ್ ಶುಭಂ ಹಾಲು(1000 ಮಿಲಿ) 46 ರೂ. ಪರಿಷ್ಕೃತ ದರ 49 ರೂಪಾಯಿ.
ಹೊಮೊಜೀನೈಸ್ ಶುಭಂ ಹಾಲು (510 ಮಿಲಿ) 23 ರೂಪಾಯಿ ಪರಿಷ್ಕೃತ ದರ 25 ರೂಪಾಯಿ.
ಹೊಮೊಜೀನೈಸ್ ಶುಭಂ ಹಾಲು (200 ಮಿಲಿ) 11 ರೂಪಾಯಿ ಪರಿಷ್ಕೃತ ದರ 12ರೂ
ಮೊಸರು (500 ಗ್ರಾಂ) 24 ರೂಪಾಯಿ.. ಪರಿಷ್ಕೃತ ದರ 26 ರೂಪಾಯಿ.
ಮೊಸರು (200 ಗ್ರಾಂ) 11 ರೂಪಾಯಿ ಪರಿಷ್ಕೃತ ದರ 12ರೂ.
ಮಜ್ಜಿಗೆ (200 ಮಿಲಿ) 8 ರೂಪಾಯಿ.. ಪರಿಷ್ಕೃತ ದರ 9 ರೂಪಾಯಿ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments