Cnewstv / 27.06.2023 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
“WhatsApp ಪಿಂಕ್ ಸ್ಕ್ಯಾಮ್”
ನವದೆಹಲಿ : “Whatsapp ಪಿಂಕ್ ಸ್ಕ್ಯಾಮ್” ಬಗ್ಗೆ ವಾಟ್ಸ್‌ಆಪ್ ಗ್ರಾಹಕರು ಎಚ್ಚರಿಕೆ ವಹಿಸಬೇಕಾಗಿದೆ. ಕೆಲವು ದಿನಗಳಿಂದ ಅನೇಕರಿಗೆ Whatsapp ಅಪ್‌ಡೇಟ್ ಹೆಸರಿನಲ್ಲಿ ಫಾರ್ವಡೆಡ್ ಮೆಸೇಜ್ ಬರುತ್ತಿದೆ.
ಇದರಲ್ಲಿ ಇನ್‌ಸ್ಟಾಲೇಶನ್ ಲಿಂಕ್ ಇದೆ, ಪಿಂಕ್ ಥೀಮ್ ಇರುವ ಅಪ್ಲಿಕೇಶನ್ ಡೌನ್‌ಲೋಡ್ ಆಗಿದೆ ಎಂದು ತಿಳಿಸಲಾಗಿದೆ. ಇದನ್ನು “ವಾಟ್ಸ್‌ಆ್ಯಪ್ ಪಿಂಕ್” ಎಂದು ಕರೆಯಲಾಗಿದೆ. ಆದರೆ ಇದು ದುರುದ್ದೇಶಪೂರಿತ ಆ್ಯಪ್‌ಗಳಲ್ಲಿ ಒಂದಾಗಿದ್ದರೆ, ಇದು ನಿಮ್ಮ ಒಟಿಪಿ, ಸಂಪರ್ಕ ಸಂಖ್ಯೆ, ಫೋಟೋಗಳು, ಬ್ಯಾಂಕ್‌ಗಳ ಮಾಹಿತಿ ಸೇರಿದಂತೆ ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಡೇಟಾ ಕಡಿಯಲಿದೆ. ಹೀಗಾಗಿ ವಾಟ್ಸ್ಆ್ಯಪ್ ಗ್ರಾಹಕರು ಈ ರೀತಿಯ “ವಾಟ್ಸ್‌ಆ್ಯಪ್ ಪಿಂಕ್ ಸ್ಕ್ಯಾಮ್” ಬಗ್ಗೆ ಜಾಗೃತರಾಗಿ ಎಂದು ತಜ್ಞರು ಸೂಚಿಸಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments