Cnewstv / 3.06.2023 / ಮಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಅಪರಿಚಿತನಿಗೆ ಬ್ಯಾಂಕ್ ಅಕೌಂಟ್ ನಂಬರ್ ಹೇಳಿದ ಕೂಡಲೇ ಹೋಯಿತು 1.21 ಲಕ್ಷ ರೂಪಾಯಿ..
ಮಂಗಳೂರು : ಮಹಿಳೆಯೋರ್ವರಿಂದ ಆಕೆಯ ಪತಿಯ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು 1.21 ರೂ. ವಂಚಿಸಿರುವ ಬಗ್ಗೆ ಪ್ರಕರಣ ಮಂಗಳೂರಿನಲ್ಲಿ ದಾಖಲಾಗಿದೆ.
ಮಹಿಳೆಯೋರ್ವರಿಗೆ ಎ. 11 ರಂದು ಅಪರಿಚಿತ ವ್ಯಕ್ತಿ ಬ್ಯಾಂಕ್ ಖಾತೆ ಸ್ಥಗಿತದ ಬಗ್ಗೆ ಸಂದೇಶ ಕಳುಹಿಸಿದ್ದ. ಅದರ ಬಗ್ಗೆ ವಿಚಾರಿಸಿದಾಗ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು ಅದನ್ನು ಸರಿಪಡಿಸಲು ಡೆಬಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರ ನೀಡುವಂತೆ ತಿಳಿಸಿ. ಮಹಿಳೆ ಅದನ್ನು ನಿಜವೆಂದು ನಂಬಿ ತನ್ನ ಪತಿಯ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದರು. ಅನಂತರ ಅವರ ಮೊಬೈಲ್‌ಗೆ ಬಂದಿದ್ದ ಒಟಿಪಿಯನ್ನು ಕೂಡ ನೀಡಿದ್ದರು. ಅದೇ ರೀತಿ ಇನ್ನೊಂದು ಬ್ಯಾಂಕ್‌ನ ಖಾತೆಯ ಮಾಹಿತಿಯನ್ನು ಕೂಡ ಹೆಸರಿಸಲಾಗಿದೆ. ಕೆಲವು ಸಮಯದ ಬಳಿಕ ಅವರ ಪತಿಯ ಒಂದು ಖಾತೆಯಿಂದ 71,400 ರೂ. ಮತ್ತು ಇನ್ನೊಂದು ಖಾತೆಯಿಂದ 50,000 ರೂ. ಸೇರಿದಂತೆ ಒಟ್ಟು 1,21,400 ರೂ.ಗಳನ್ನು ಅಪರಿಚಿತ ಮೋಸದಿಂದ ಪಡೆದಿದ್ದಾನೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments