Cnewstv / 29.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಳೆಯಲಿ ದಾರಿ ಕಾಣದ ಮಹಿಷಿ, ಬಿದ್ದಿದ್ದು ರಾಜ ಕಾಲುವೆಯಲ್ಲಿ – ಎದ್ದಿದ್ದು ಕ್ರೇನ್ ನಲ್ಲಿ.
ಶಿವಮೊಗ್ಗ : ರಾಜಕಾಲುವೆಗೆ ಎಮ್ಮೆಯೊಂದು ಬಿದ್ದ ಘಟನೆ ಸೋಮವಾರ ಸಂಜೆ ನಗರದಲ್ಲಿ ನಡೆದಿದೆ.
ಸೋಮವಾರ ಸಂಜೆ ಶಿವಮೊಗ್ಗ ನಗರದ ವಿನೋಬನಗರದ ರಾಜ ಕಾಲುವೆಯಲ್ಲಿ ಎಮ್ಮೆಯೊಂದು ಆಕಸ್ಮಿಕವಾಗಿ ಬಿದ್ದಿದೆ. ಸುಮಾರು 10 ಅಡಿ ಎತ್ತರದ ರಾಜಕಾಲುವೆಯಲ್ಲಿ ಬಿದ್ದಿರುವ ಎಮ್ಮೆಯನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ತಕ್ಷಣವೇ ಸ್ಥಳಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು
ಕೇನ್ ಬಳಸಿ ಎಮ್ಮೆಯನ್ನು ರಾಜ ಕಾಲುವೆಯಿಂದ ಹೊರತಗೆದಿದ್ದಾರೆ. ನೆನ್ನೆ ಸಂಜೆ ಸುರಿದ ಬಾರಿ ಬಿರುಗಾಳಿ ಹಾಗೂ ಮಳೆಯ ಪರಿಣಾಮ ಎಮ್ಮೆ ರಾಜ ಕಾಲುವೆಗೆ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399