Cnewstv / 28.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಇಂದಿನಿಂತ ರಾಜ್ಯಾದ್ಯಂತ ಶಾಲೆಗಳು ಪುನಾರಂಭ..
ಬೆಂಗಳೂರು : ಬೇಸಿಗೆ ರಜೆ ಮುಗಿದಿದ್ದು, ಇಂದಿನಿಂದ ಶಾಲೆಗಳು ಪುನರಾರಂಭವಾಗಿದೆ.
ಸರ್ಕಾರದ 2023-24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಇಂದಿನಿಂದ ರಾಜ್ಯಾದ್ಯಂತ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನರಾರಂಭಗೊಳ್ಳಲಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಶೈಕ್ಷಣಿಕ ವೇಳಪಟ್ಟಿ…
ಶಾಲೆಯ ಆರಂಭ: ಮೇ 29, 2023
ಪ್ರಾರಂಭೋತ್ಸವ: ಮೇ 31, 2023
ಪ್ರವೇಶ ಪ್ರಕ್ರಿಯೆಗೆ ಗಡುವು: ಜೂನ್ 30 ರ ಒಳಗೆ
ಮೊದಲನೇ ಶೈಕ್ಷಣಿಕ ಅಧಿವೇಶನ: ಮೇ 29 ರಿಂದ ಅಕ್ಟೋಬರ್ 7 ರವರಗೆ
ಮಧ್ಯಂತರ ರಜೆ: 2023ರ ಅಕ್ಟೋಬರ್ 8 ರಿಂದ ಅಕ್ಟೋಬರ್ 24 ರವರೆಗೆ
ಎರಡನೇ ಶೈಕ್ಷಣಿಕ ಅಧಿವೇಶನ: ಅಕ್ಟೋಬರ್ 25, 2023 ರಿಂದ ಏಪ್ರಿಲ್ 10, 2024 ರವರೆಗೆ
ಎರಡನೇ ರಜೆ: 2024ರ ಏಪ್ರಿಲ್ 11 ರಿಂದ ಮೇ 28 ರ ವರೆಗೆ
ಶಾಲಾ ಕರ್ತವ್ಯದ ದಿನಗಳು: 244 ದಿನ
ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ದಿನ: 180 ದಿನ
ಪರೀಕ್ಷಾ ಕಾರ್ಯ ದಿನಗಳು: 26 ದಿನ
ಪಠ್ಯೇತರ ಚಟುವಟಿಕೆ: 24 ದಿನ
ಮೌಲ್ಯಮಾಪನ ಪ್ರಕ್ರಿಯೆ: 10 ದಿನ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments