Cnewstv / 28.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಪತಿಯ ಪರ ಭರ್ಜರಿ ಪ್ರಚಾರ ಮಾಡುತ್ತಿರುವ ಅನಿತಾ ಮಧು ಬಂಗಾರಪ್ಪ..
ಶಿವಮೊಗ್ಗ : ಸೊರಬ ಚುನಾವಣೆ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪನವರ ಪರವಾಗಿ ಅವರ ಶ್ರೀಮತಿ ಅನಿತ ಮಧು ಬಂಗಾರಪ್ಪನವರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಸೊರಬದಾ ಚಿಕ್ಕದ್ಯಾವಸ ಗ್ರಾಮದಲ್ಲಿ ಹಾಗೂ ಬೆನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡದಿವಳಿಗೆ ಗ್ರಾಮಕ್ಕೆ ಆಗಮಿಸಿ ಅಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಮಹಿಳಾ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಹಾಗೂ ರೈತ ಸಮಸ್ಯೆಗಳ ಪರವಾಗಿ ಕೆಲಸ ಮಾಡುವಂತೆ ನಾನು ನಿಮ್ಮ ಜೊತೆ ನಿಂತು ನಿಮ್ಮ ಪರವಾಗಿ ಮಾತನಾಡಿ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ತಾವುಗಳೆಲ್ಲರೂ ನನ್ನ ಪತಿ ಎಸ್, ಮಧು ಬಂಗಾರಪ್ಪನವರಿಗೆ ಮತ ನೀಡಿ ಅತಿ ಹೆಚ್ಚಿನ ಮತದಿಂದ ಆಯ್ಕೆ ಮಾಡಿ ಕೊಡುವಂತೆ ಮನವಿ ಮಾಡಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv