Cnewstv / 11.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ನಗರದಲ್ಲಿ ದಿಢೀರ್ ಬದಲಾವಣೆ, ಬಿಜೆಪಿ ಟಿಕೆಟ್ ಯಾರಿಗೆ.?? ಬದಲಾಗುತ್ತಾ ಕಾಂಗ್ರೆಸ್ ಲೆಕ್ಕಚಾರ ??
ಶಿವಮೊಗ್ಗ : ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಯಲ್ಲಿ ಇಂದು ಮಧ್ಯಾಹ್ನ ದಿಡೀರ್ ಬದಲಾವಣೆ ಆಗಿದೆ.
ಇದನ್ನು ಒದಿ : https://cnewstv.in/?p=11995
ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದು ಶಿವಮೊಗ್ಗ ರಾಜಕೀಯ ಚಿತ್ರಣವನ್ನೇ ಬದಲು ಮಾಡಿದೆ. ಬಿಜೆಪಿ ಪಕ್ಷದಿಂದ ಈ ಬಾರಿ ಕೆ ಎಸ್ ಈಶ್ವರಪ್ಪನವರೇ ಅಭ್ಯರ್ಥಿ ಎಂದು ಹೇಳಲಾಗುತ್ತಿತ್ತು ಆದರೆ ಪಟ್ಟಿ ಬಿಡುಗಡೆಗು ಮುನ್ನವೇ ಈಶ್ವರಪ್ಪನವರು ರಾಜೀನಾಮೆ ಘೋಷಣೆ ಮಾಡಿದ್ದು
ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೆ ಎಸ್ ಈಶ್ವರಪ್ಪನವರ ಪುತ್ರ ಕೆ ಇ ಕಾಂತೇಶ್, ವಿಧಾನಪರಿಷ ಸದಸ್ಯರಾದ ಆಯನೂರು ಮಂಜುನಾಥ್, ಡಾ ಧನಂಜಯ್ ಸರ್ಜಿ, ಎಸ್ ಎಸ್ ಜ್ಯೋತಿ ಪ್ರಕಾಶ್ ರವರು ಮುಂಚೂಣಿಯಲ್ಲಿದ್ದರು. ಇದೀಗ ಈಶ್ವರಪ್ಪನವರು ನಿವೃತ್ತಿ ಘೋಷಣೆ ಮಾಡಿರುವುದು ಬಿಜೆಪಿ ಪಾಳ್ಯದಲ್ಲೇ ಮತ್ತೊಂದಿಷ್ಟು ಗೊಂದಲಗಳನ್ನ ಸೃಷ್ಟಿ ಮಾಡಿದೆ.
ಇತ್ತ ಕಾಂಗ್ರೆಸ್ ಬಿಜೆಪಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಈ ಬಾರಿ ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಚುಕ್ಕಾಣಿಯನ್ನು ಹಿಡಿಯಲೇಬೇಕು ಎಂದು ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿತ್ತು. ಬಿಜೆಪಿಯಿಂದ ಈ ಬಾರಿ ಕೆ ಎಸ್ ಈಶ್ವರಪ್ಪನವರೇ ಅಭ್ಯರ್ಥಿ ಆಗಬಹುದು ಎಂಬ ನಿರೀಕ್ಷೆಯ ಲೆಕ್ಕಾಚಾರವು ಇತ್ತು. ಹಾಗಾಗಿ ಕಾಂಗ್ರೆಸ್ ಎರಡು ಪಟ್ಟಿ ಬಿಡುಗಡೆಯಾದರೂ ಸಹ ಶಿವಮೊಗ್ಗ ನಗರದ ಅಭ್ಯರ್ಥಿಯನ್ನ ಇನ್ನು ಕೂಡ ಘೋಷಣೆ ಮಾಡಿರಲಿಲ್ಲ. ಆದರೆ ಇದೀಗ ಈಶ್ವರಪ್ಪನವರು ನಿವೃತ್ತಿ ಘೋಷಣೆ ಮಾಡಿರುವುದು ಕಾಂಗ್ರೆಸಿಗೆ ಮತ್ತೊಂದು ಲೆಕ್ಕಾಚಾರದ ಕಗ್ಗಂಟಾಗಲಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments