Cnewstv / 04.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹೊಂಗಿರಣ ಸಂಸ್ಥೆವತಿಯಿಂದ 20 ದಿನಗಳ ಮಕ್ಕಳ ಬೇಸಿಗೆ ಶಿಬಿರ.
ಶಿವಮೊಗ್ಗ: ಹೊಂಗಿರಣ ಸಂಸ್ಥೆಯಿಂದ ಏ.16ರಿಂದ 20 ದಿನಗಳ ಕಾಲ ಕೋಟೆ ರಸ್ತೆಯ ವಾಸವಿ ವಿದ್ಯಾಲಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಶಿಬಿರದ ನಿರ್ದೇಶಕ ಡಾ. ಸಾಸ್ವೆಹಳ್ಳಿ ಸತೀಶ್ ಹೇಳಿದರು.
ಅವರು ಇಂದು ಪ್ರೆಸ್ ಟ್ರಸ್ಟ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಂಗಿರಣ ಸಂಸ್ಥೆಯು ಕಳೆದ 26 ವರ್ಷಗಳಿಂದ ರಂಗಭೂಮಿ ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಹೆಸರು ಮಾಡಿದೆ. ಮುಖ್ಯವಾಗಿ ಮಕ್ಕಳ ರಂಗಶಿಬಿರಗಳನ್ನು ಏರ್ಪಡಿಸಿದೆ. ಈ ಬಾರಿ ಕೂಡ ಏ.16ರಿಂದ 20 ದಿನಗಳ ಕಾಲ ವಾಸವಿ ವಿದ್ಯಾಲಯದಲ್ಲಿ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4-30ರ ವರೆಗೆ ಶಿಬಿರ ನಡೆಯಲಿದೆ ಎಂದರು.
ಶಿಬಿರದಲ್ಲಿ ಮುಖ್ಯವಾಗಿ ರಂಗತರಬೇತಿ, ಜಾನಪದ ಸಾಹಿತ್ಯ, ನೃತ್ಯ, ಹಾಡು, ಆಕಾಶ ವೀಕ್ಷಣೆ, ಪವಾಡ ರಹಸ್ಯ, ಗೊಂಬೆಯಾಟ, ಮಾಡೆಲಿಂಗ್ ಪ್ರಸಾಧನ ಹೀಗೆ ಹಲವು ಹತ್ತು ವಿಷಯಗಳನ್ನು ಕಲಿಸಲಾಗುತ್ತದೆ. ಜೊತೆಗೆ ಸಾಹಸ ಕ್ರೀಡೆಯೂ ಇರುತ್ತದೆ. ಒಂದು ದಿನದ ಕಿರುಪ್ರವಾಸ ಕೂಡ ಆಯೋಜಿಸಲಾಗಿದೆ. ಮನರಂಜನೆಯ ಜೊತೆಗೆ ಸಾಹಿತ್ಯ, ಸಂಗೀತ, ಕಲೆ ಈ ಎಲ್ಲಾ ವಿಷಯಗಳನ್ನು ಕಲಿಸಲಾಗುತ್ತದೆ ಎಂದರು.
ಶಿಬಿರದಲ್ಲಿ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಹೇಳಿಕೊಡಲಿದ್ದಾರೆ. ವೇದ ಚಿತ್ರದ ಜುಂಜಪ್ಪ ಹಾಡಿನ ಖ್ಯಾತಿಯ ಮೋಹನ್‍ಕುಮಾರ್ ರಾಷ್ಟ್ರ ಮಟ್ಟದ ಖ್ಯಾತಿಯ ಹುಸೇನಿ, ಆಕಾಶಕಾಯಗಳ ಅಧ್ಯಯನ ನಡೆಸಿರುವ ಹಾರೋಹಳ್ಳಿ ಸ್ವಾಮಿ ಕತೆಗಾರ ಶಿವಕುಮಾರ ಮಾವಲಿ, ರಂಗ ಕಲಾವಿದ ಅಜಯ್ ನೀನಾಸಂ, ಕಾಮಿಡಿ ಕಿಲಾಡಿಯ ಹೊಂಗಿರಣ ಚಂದ್ರು, ಧಾರಾವಾಹಿ ನಟ ಚಂದ್ರಶೇಖರ ಶಾಸ್ತ್ರಿ ಸೇರಿದಂತೆ ಹತ್ತಾರು ಕಲಾವಿದರು, ವಿಜ್ಞಾನಿಗಳು, ಕುಶಲ ಕರ್ಮಿ ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಶಿಬಿರದ ಮುಕ್ತಾಯ ಸಮಾರಂಭವು ಮೇ.4 ಮತ್ತು 5ರಂದು ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಶಿಬಿರದಲ್ಲಿ ಕಲಿತ ಮಕ್ಕಳೇ ಈ ಸಮಾರಂಭದಲ್ಲಿ ತಾವು ಕಲಿತ ವಿಷಯಗಳನ್ನು ಪ್ರದರ್ಶನ ಮಾಡಲಿದ್ದಾರೆ. ಶಿಬಿರದಲ್ಲಿ 6ರಿಂದ 17 ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ. ಈಗಾಗಲೇ ನೊಂದಣಿ ಆರಂಭವಾಗಿದೆ. 50 ಮಕ್ಕಳಿಗೆ ಮಾತ್ರ ಅವಕಾಶ ಇದೆ. ಹೆಚ್ಚಿನ ವಿವರಗಳಿಗೆ 9844364071, 9741960356 ಅನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments