Cnewstv / 17.03.2023 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
5 ಮತ್ತು 8 ನೇ ತರಗತಿಯ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ ಪ್ರಕಟ.
ಬೆಂಗಳೂರು : 2022 -23 ನೇ ಸಾಲಿನ ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ.
ಮಾರ್ಚ್ 13 ರಿಂದ ಪರೀಕ್ಷೆ ನಡೆಸುವುದಾಗಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು ಆದರೆ ಶಿಕ್ಷಣ ಸಂಸ್ಥೆಗಳು ಪರೀಕ್ಷೆಯನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿತ್ತು. ಹಾಗಾಗಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಈಗ ಹೈಕೋರ್ಟ್ ಆದೇಶದಂತೆ ಮಾರ್ಚ್ 27 ರಿಂದ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆಗಳು ಆರಂಭವಾಗಲಿದೆ.
ಮಾರ್ಚ್ 27ರಿಂದ ಏಪ್ರಿಲ್ 1ರವರೆಗೆ ಪರೀಕ್ಷೆ ನಡೆಯಲಿದ್ದು, ಆಯಾ ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ಇನ್ನು ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ಫಲಿತಾಂಶವನ್ನು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುವುದು. ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಅನುತ್ತಿಣಗೊಳಿಸದೆ ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗುವುದು.
5ನೇ ತರಗತಿ ವೇಳಾಪಟ್ಟಿ
ಮಾರ್ಚ್ 27 (ಸೋಮವಾರ) : ಪ್ರಥಮ ಭಾಷೆ
ಮಾರ್ಚ್ 28 (ಮಂಗಳವಾರ) : ದ್ವಿತೀಯ ಭಾಷೆ
ಮಾರ್ಚ್ 29 (ಬುಧವಾರ) : ಪರಿಸರ ಅಧ್ಯಯನ
ಮಾರ್ಚ್ 30 (ಗುರುವಾರ) : ಗಣಿತ.
8 ನೇ ತರಗತಿ ವೇಳಾಪಟ್ಟಿ
ಮಾರ್ಚ್ 27 (ಸೋಮವಾರ ) : ಪ್ರಥಮ ಭಾಷೆ
ಮಾರ್ಚ್ 28 ( ಮಂಗಳವಾರ ) : ದ್ವಿತೀಯ ಭಾಷೆ
ಮಾರ್ಚ್ 29 ( ಬುಧವಾರ ) : ತೃತೀಯ ಭಾಷೆ
ಮಾರ್ಚ್ 30 (ಗುರುವಾರ): ಗಣಿತ
ಮಾರ್ಚ್ 31 (ಶುಕ್ರವಾರ) : ವಿಜ್ಞಾನ
ಏಪ್ರಿಲ್ 1 (ಶನಿವಾರ) : ಸಮಾಜ ವಿಜ್ಞಾನ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv