Breaking News

ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ಬೃಹತ್ ಪ್ರತಿಭಟನೆ.

Cnewstv / 06.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ಬೃಹತ್ ಪ್ರತಿಭಟನೆ.

ಶಿವಮೊಗ್ಗ : ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ವೇ ಅಧಿಕಾರಿಗಳ ಅಧಿಕಾರ ದುರುಪಯೋಗಕ್ಕೆ ಸಾರ್ವಜನಿಕ ವಲಯ ಆತಂಕಗೊಳ್ಳುವಂತೆ ಮಾಡಿದೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾಧ್ಯಕ್ಷ ಕಿರಣ್ ರವರ ನೇತೃತ್ವದಲ್ಲಿ ಅಶೋಕ ವೃತ್ತದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ಕಳೆದ ೧೦ ವರುಷಗಳಿಂದ ಸರ್ವೇ ಅಧಿಕಾರಿಗಳು ಖುದ್ದು ಸ್ಥಳಕ್ಕೆ ತೆರಳಿ ಭೂ ಮಾಪನ ನಿಯಮದಂತೆ ಸರ್ವೇ ಪರಿಶೀಲನೆ ನಡೆಸದೆ, ಈ ಸದರಿ ವೇಳೆಯಲ್ಲಿ ಮೂಲ ಗ್ರಾಮ ನಕ್ಷೆಗಳ ಪ್ರಕಾರವನ್ನು ಅನುಸರಿಸದೇ ಲ್ಯಾಂಡ್ ಲಿಟಿಗೇಶನ್ ಹಾಗೂ ರಾಜಕೀಯ ಬೆಂಬಲಿತ ಅರ್ಜಿದಾರರಿಗೆ ಹಾಗೆಯೇ ಈ ಇವರುಗಳ ಅನುಸಾರದಂತೆ ಓರಲ್ ನಕ್ಷೆಯನ್ನು ನಿಂತ ಜಾಗದಲ್ಲಿಯೇ ಸ್ಕೆಚ್ ಹಾಕಿ ಸಿದ್ದಪಡಿಸಿ ಸರ್ವೇ ಇಲಾಖೆಯ ಆತುರದ ಸ್ಕೆಚ್ ನೀಡುತ್ತಿರುವುದರಿಂದ ಶಿವಮೊಗ್ಗ ತಾಲ್ಲೂಕಿನಲ್ಲಿ ಲ್ಯಾಂಡ್ ಲಿಟಿಗೇಶನ್ ಜಾಲ ತನ್ನ ಅನಾಹುತಕಾರಿಯನ್ನು ಹೆಚ್ಚಿಸಿಕೊಂಡಿದೆ ಹಾಗೂ ಇದರ ಕಡಿವಾಣಕ್ಕೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಸರ್ವೇ ಅಧಿಕಾರಿಗಳ ಅಧಿಕಾರ ದುರುಪಯೋಗದಿಂದ ಸಾರ್ವಜನಿಕ, ಸರಕಾರಿ ಕರಾಬುಕಟ್ಟೆ, ಸರಕಾರಿ ಪಡೆ, ಗೋಮಾಳ, ಕೆರೆಕಟ್ಟೆ ಆಸ್ತಿಗಳ ರಕ್ಷಣೆ ಅಸಾಧ್ಯವಾಗುತ್ತಿದೆ.

ಈಗಾಗಲೇ ಇಂತಹ ಜಾಲದೊಂದಿಗೆ ಶಾಮೀಲು ಆಗಿರುವ ಸರ್ವೇ ಅಧಿಕಾರಿಗಳ ಅಧಿಕಾರ ದುರುಪಯೋಗವನ್ನು ಪತ್ತೆ ಹಚ್ಚಲು ಪೊಲೀಸ್ ಮತ್ತು ರೆವಿನ್ಯೂ ಇಲಾಖೆಗಳನ್ನೊಳಗೊಂಡ ತನಿಖಾ ತಂಡಕ್ಕೆ ವಿಶೇಷ ಅಧಿಕಾರವನ್ನು ನೀಡಬೇಕು ಇದರಿಂದ ಶಿವಮೊಗ್ಗ ತಾಲ್ಲೂಕಿನಲ್ಲಿ ಅಧಿಕಗೊಳ್ಳುತ್ತಿರುವ ಲ್ಯಾಂಡ್ ಲಿಟಿಗೇಶನ್ ಕ್ರೈಂ ಗಳಿಗೆ ಕಡಿವಾಣ ಹಾಕಬಹುದಾಗಿದೆ.

ನ್ಯಾಯಾಲಯದ ಕಟೆಕಟೆಗೆ ಅಸಲಿ ವಾರಸುದಾರರು ನಿಲ್ಲುತ್ತಿರುವುದು ಸಾಮಾನ್ಯವಾಗಿದೆ, ಪಥ ಬದಲಿಸುವುದು, ಸರ್ವೇ ನಂಬರ್ ಬದಲಾವಣೆ, ಭೂ ಮಾಪನ ನಿಯಮವನ್ನು ಉಲ್ಲಂಘಿಸಿರುವ ಹಲವು ಪ್ರಕರಣಗಳು ಶಿವಮೊಗ್ಗದಲ್ಲಿ ನಡೆಯುತ್ತಿರುವುದು ಕಂಡು ಬಂದಿರುವುದರಿಂದ ಜಿಲ್ಲಾಡಳಿತ ಈ ಕೂಡಲೇ ಕಳೆದ ೧೦ ವರ್ಷಗಳಿಂದ ಶಿವಮೊಗ್ಗ ಭೂ ದಾಖಲೆಗಳ ಸಹಾಯಕ ಇಲಾಖೆಯಿಂದ ಸಿದ್ದಪಡಿಸಿ ನೀಡಲಾಗಿರುವ ಎಲ್ಲಾ ನಕ್ಷೆಗಳನ್ನು ಮತ್ತೊಮ್ಮೆ ಪರಿಶೀಲಿಸಲು ವಿಶೇಷ ತಂಡ ರಚಿಸಬೇಕು ಎಂದು‌ ಒತ್ತಾಯಿಸಿದರು.

ಶಿವಮೊಗ್ಗ ಭೂ ಮಾಪನ ಇಲಾಖೆಯ ಡಿಡಿಎಲ್‌ಆರ್ ಹಾಗೂ ಎಡಿಎಲ್‌ಆರ್ ಅಧಿಕಾರಿಗಳು, ಕಂಪ್ಯೂಟರ್ ಆಪರೇಟರ್‌ಗಳು, ಸರಿಸುಮಾರು ೨೨ ಜನ ಸರ್ವೇ ಅಧಿಕಾರಿಗಳು ಒಳಗೊಂಡಿರುವ ಇಲಾಖೆ ಭೂ ನ್ಯಾಯವನ್ನು ನೀಡುವ ಬದಲು ಲ್ಯಾಂಡ್ ಲಿಟಿಗೇಶನ್ ಜಾಲದೊಂದಿಗೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಬಹುತೇಕ ಕಂಡು ಬಂದಿರುತ್ತದೆ, ಇದರಿಂದ ಶಿವಮೊಗ್ಗ ತಾಲ್ಲೂಕು ಕೆರೆಗಳ ವಿಸ್ತೀರ್ಣ ಕಡಿತವಾಗಿದೆ, ಹಲವೆಡೆ ಕೆರೆಕಟ್ಟೆ, ಗೋಮಾಳ, ಜಮೀನು ಕರಾಬು, ಸರಕಾರಿ ಪಡೆ ಜಮೀನುಗಳೇ ಮಂಗ ಮಾಯವಾಗಿ ಲೇ-ಔಟ್‌ಗಳಾಗಿ ಪರಿವರ್ತಿತಗೊಂಡಿದೆ, ಇದಕ್ಕೆ ನೀಡಲಾಗಿರುವ ಪಥ ಬದಲಾವಣೆ, ನಕ್ಷೆ ತಿದ್ದುಪಡಿ, ನಕಾಶೆ ತೋರಿಸಿದ ಹಾದಿ ತಿರುಚುವಿಕೆಗಳಿಂದ ಪಕ್ಕಾಪೋಡಿಗಳು ರಾತ್ರೋರಾತ್ರಿ ಸಿದ್ದಗೊಳ್ಳುತ್ತಿದೆ, ಅಲ್ಲದೆ ಜಮೀನು ಹದ್ದುಬಸ್ತಿಗಾಗಿ ರೌಡಿಗಳನ್ನು ಕಟ್ಟಿಕೊಂಡು ಮೂಲ ವಾರಸುದಾರರನ್ನು ಒಕ್ಕಲೆಬ್ಬಿಸುವುದಕ್ಕೆ ಮುಂದಾಗಿರುವುದು ವೇದಿಕೆ ಖಂಡಿಸುತ್ತದೆ, ಇದಕ್ಕೆ ಕಾರಣವಾದ ಸರ್ವೇ ಅಧಿಕಾರಿಗಳನ್ನು ಕೂಡಲೇ ಅಮಾನತ್ತಿಲ್ಲಿಟ್ಟು ಸರಕಾರಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಶಿವಮೊಗ್ಗ ನಗರ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹದೊಂದು ಜಾಲ ಸಕ್ರೀಯವಾಗಿರುವುದಕ್ಕೆ ಜೀವಂತ ಉದಾಹರಣೆ ಇತ್ತೀಚೆಗಷ್ಟೆ ನಡೆದಿದೆ, ನಿಧಿಗೆ ಹೋಬಳಿಯ ಕೊಳ್ಳಿ ಗ್ರಾಮದಲ್ಲಿ ತಿದ್ದುಪಡಿ ದಾಖಲೆಗಳನ್ನು ಹಿಡಿದುಕೊಂಡು ಬಡ ರೈತಾಪಿಗಳನ್ನು ಒಕ್ಕಲೆಬ್ಬಿಸಿ ಸುಮಾರು ಆರು ಕೋಟಿ ಮೌಲ್ಯದ ಜಮೀನು ಹದ್ದುಬಸ್ತಿಗಾಗಿ ರೌಡಿಗಳನ್ನು ಕರೆದುಕೊಂಡು ಹೋಗಿದ್ದ ಇವರನ್ನು ತಡೆದು ಪ್ರಶ್ನಿಸುತ್ತಿದ್ದ ಸಂದರ್ಭದಲ್ಲಿ ಓಡಿ ಹೋಗಿದ್ದವರು ಸ್ಥಳೀಯ ತುಂಗಾ ನಗರ ಪೊಲೀಸ್ ಠಾಣೆಗೆ ಇದೇ ತಿದ್ದುಪಡಿ ದಾಖಲೆಗಳನ್ನು ಒದಗಿಸಿ ದೂರು ನೀಡಿದ್ದರು, ಇದರ ಪ್ರತಿಯಾಗಿ ಗ್ರಾಮದ ಯುವಕರಿಂದಲೂ ದೂರು ಸ್ವೀಕರಿಸಲಾಗಿತ್ತು ಆದರೆ ತುಂಗಾ ನಗರ ಪೊಲೀಸರು ತಿದ್ದುಪಡಿ ಹಾಗೂ ಮೂಲ ಗ್ರಾಮ ನಕ್ಷೆಯ ಆಧಾರಿತ ಸರ್ವೇ ನಕ್ಷೆ ಇಲ್ಲದೆ ಹದ್ದುಬಸ್ತಿಗಾಗಿ ತೆರಳಿದ್ದವರ ಪರವಾಗಿಯೇ ನಿಂತಿರುವುದು ಅಲ್ಲದೆ ತಡೆದಿದ್ದ ಗ್ರಾಮದ ಯುವಕರ ಮೇಲೆಯೇ ಪ್ರಥಮ ವರ್ತಮಾನ ವರದಿ ದಾಖಲಿಸಿರುವುದು ಭಾರತೀಯ ದಂಡ ಸಂಹಿತೆಯನ್ನು ಉಲ್ಲಂಘಿಸಿದಂತಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಗ್ರಾಮದ ಯುವಕರ ಹಾಗೂ ರೈತರ ಮೇಲಿನ ಈ ಪ್ರಕರಣಕ್ಕೆ ಬಿ ವರದಿ ದಾಖಲಿಸಲು ಎಸ್ಪಿಯವರಿಗೆ ಸೂಚಿಸಬೇಕು ಹಾಗೂ ತಿದ್ದುಪಡಿ ದಾಖಲೆಗಳನ್ನು ಹಿಡಿದುಕೊಂಡು ಅಕ್ರಮವಾಗಿ ಜಮೀನು ಪ್ರವೇಶಿಸಿ ಅಲ್ಲಿರುವ ಮೂಲ ವಾರಸುದಾರರಿಗೆ ಬೆದರಿಕೆಯೊಡ್ಡಿದವರ ಮೇಲೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ವಿಚಾರಣೆ ನಡೆಸಬೇಕು. ‌

ಇಂತಹ ಪ್ರಕರಣಗಳು ನಗರದ ಆಲ್ಕೊಳ ಗ್ರಾಮ, ಇಂದಿನ ನಗರ ವ್ಯಾಪ್ತಿ, ಗಾಡಿಕೊಪ್ಪ, ಮಲ್ಲಿಗೆನಹಳ್ಳಿ, ಕೋಟೆಗಂಗೂರು, ಗೆಜ್ಜೆನಹಳ್ಳಿ, ನವುಲೆ, ರಾಗಿಗುಡ್ಡ, ಅಬ್ಬಲಗೆರೆ, ತೇವರ ಹಾಗೂ ಗೋಂದಿ ಚಟ್ನಳ್ಳಿ, ಹಸೂಡಿ, ಬೊಮ್ಮನಕಟ್ಟೆ, ಅನುಪಿನಕಟ್ಟೆ, ರಾಮೀನಕೊಪ್ಪ, ಹಾಯ್‌ಹೊಳೆ, ಸೋಗಾನೆ, ಕೊರ್ಲಳ್ಳಿ, ಇನ್ನೂ ಮುಂತಾದೆಡೆ ಇಂತಹದೊಂದು ಪ್ರಕರಣಗಳು ಹೆಚ್ಚುತ್ತಿದೆ, ಇದಕ್ಕೆ ಸವಳಂಗ ರಸ್ತೆಯ ಅಬ್ಬಲಗೆರೆ ಗ್ರಾಮ ಪಂಚಾಯಿತಿಯ ದೇವರ ಗುಡಿ ಹೊಡೆದು ಹಾಕಿ ಜಮೀನು, ಕೆರೆ ಜಾಗವನ್ನು ಹದ್ದುಬಸ್ತು ಮಾಡಿಕೊಳ್ಳಲು ಮುಂದಾದವರ ವಿರುದ್ದ ಸಾರ್ವಜನಿಕರೇ ರಸ್ತೆತಡೆ ನಡೆಸಿದ ಪ್ರಕರಣ, ಹಾಗೂ ಮೂಲ ನಕ್ಷೆಯ ಆಧಾರಿತವಲ್ಲದ ಸರ್ವೇ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗದಡಿ ಸ್ವಯಂ ಸಿದ್ದಪಡಿಸಿ ಸರಕಾರಿ ದಾಖಲೆಯನ್ನಾಗಿಸಿದ ನಕ್ಷೆಯನ್ನು ನ್ಯಾಯಾಲಯ ಹಾಗೂ ಸಕ್ಷಮ ಪ್ರಾಧಿಕಾರಗಳಿಗೆ ನೀಡಿ ವಂಚಿಸುತ್ತಿದ್ದಾರೆ.

ಶಿವಮೊಗ್ಗ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯ ಡಿಡಿಎಲ್‌ಆರ್ ಹಾಗೂ ಎಡಿಎಲ್‌ಆರ್ ಅಧಿಕಾರಿಗಳ ಹಾಗೂ ಕಂಪ್ಯೂಟರ್ ಆಪರೇಟರ್‍ಸ್, ಹಾಗೂ ಸರ್ವೆ ಅಧಿಕಾರಿಗಳ ಅಧಿಕಾರ ದುರುಪಯೋಗದಡಿ ಕಳೆದ ೧೦ ವರ್ಷಗಳಿಂದಲೂ ಅವ್ಯಾಹತವಾಗಿ ಲ್ಯಾಂಡ್ ಲಿಟಿಗೇಶನ್ ಪ್ರಕರಣಗಳು ಹೆಚ್ಚುತ್ತಿರುವುದಲ್ಲದೆ ಬೆಂಗಳೂರು ಏರ್‌ಪೋರ್ಟ್ ದೇವನಹಳ್ಳಿ ವ್ಯಾಪ್ತಿಯಲ್ಲಿ ಭೂ ಮಾಫಿಯಾದಂತೆ, ರಾಷ್ಟ್ರಕವಿ ಕುವೆಂಪು ಏರ್‌ಪೋರ್ಟ್ ವ್ಯಾಪ್ತಿಯ ಸೋಗಾನೆ ಹಾಗೂ ಸುತ್ತಮುತ್ತ ಪ್ರದೇಶಗಳಿಗೆ ಲ್ಯಾಂಡ್ ಲಿಟಿಗೇಶನ್ ಮಾಫಿಯಾ ತನ್ನ ಕರಾಳತೆಗೆ ವೇಗವಿಟ್ಟಿರುವುದರಿಂದ ಪೊಲೀಸ್ ಇಲಾಖೆ ಇದೊಂದು ಸಿವಿಲ್ ಪ್ರಕರಣವೆಂದು ಸಬೂಬು ಹೇಳಿ ದೂರ ಸರಿದರೆ ದೇವನಹಳ್ಳಿಯಲ್ಲಿ ನಡೆದಂತೆ ಭೂ ಮಾಫಿಯಾಕ್ಕೆ ತುತ್ತಾಗಿ ಕೊಲೆಗಳಂತಹ ರಕ್ತಪಾತಗಳಿಗೆ, ತಿದ್ದುಪಡಿ ದಾಖಲೆಗಳಿಂದ ಸಾರ್ವಜನಿಕರ ಆಸ್ತಿ-ಪಾಸ್ತಿ ಕಬ್ಜಾಗಳಿಗೆ ಕಡಿವಾಣ ಇಲ್ಲದಂತಾಗುತ್ತದೆ, ಹಾಗೂ ಸಿವಿಲ್ ವ್ಯಾಜ್ಯ ಎನ್ನುವುದು ಎರಡು ಜಿನಿಯನ್ ಭೂ ಮಾಲೀಕರ ನಡುವೆ ನಡೆವ ವಿಷಯಕ್ಕೆ ಸಕ್ಷಮ ಪ್ರಾಧಿಕಾರ ಹಾಗೂ ಸಿವಿಲ್ ನ್ಯಾಯಾಲಯದ ಮೊರೆ ಹೋಗಬಹುದೇ ವಿನಃ, ತಿದ್ದುಪಡಿ ಅಕ್ರಮ ದಾಖಲೆಗಳನ್ನು ಹಿಡಿದುಕೊಂಡು ಕಬ್ಜಾ ಮಾಡಲು ಬರುವ ಜಾಲಕ್ಕೆ ಅಲ್ಲವಾಗಿದೆ ಹೀಗಾಗಿ ಜಿಲ್ಲಾಡಳಿತ ಈ ಕೂಡಲೇ ಆದೇಶಕ್ಕೆ ಬರುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಿಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲು ಆದೇಶಿಸಿ ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣೆಗೆ ಮುಂದಾಗಲು ಸೂಚಿಸಬೇಕು ಹಾಗೂ ಶಿವಮೊಗ್ಗ ಭೂ ದಾಖಲೆಗಳ ಸಹಾಯಕ ಇಲಾಖೆಯಿಂದ ಕಳೆದ ೧೦ ವರುಷಗಳಿಂದ ನೀಡಲಾಗಿರುವ ಭೂ ನಕ್ಷೆಗಳನ್ನು ಮತ್ತೊಮ್ಮೆ ಪರಿಶೀಲಿಸಲು ವಿಶೇಷ ತನಿಖಾ ತಂಡ ರಚನೆಗೆ ಕೂಡಲೇ ಮುಂದಾಗಿ ಆದೇಶಿಸಬೇಕೆಂದು ಒತ್ತಾಯಪಡಿಸಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments