Breaking News

 ಪೂಜ್ಯ ರಾಮಭಟ್ಟರು ನಾನು ಕಂಡಂತೆ 05

 Cnewstv / 28.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪೂಜ್ಯ ರಾಮಭಟ್ಟರು ನಾನು ಕಂಡಂತೆ 05..

ಅದು ಕಳೆದ ದೀಪಾವಳಿಯ ಬಲಿಪಾಡ್ಯದ ಗೋಪೂಜೆಯ ಸಂದರ್ಭ …..ಶಿವಮೊಗ್ಗದ ಜಿಲ್ಲಾ ಬ್ರಾಹ್ಮಣ ಮಹಾ ಸಭಾ ಕಟುಕರ ಪಾಲಾಗುವ ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೊಸತಾಗಿ ಆರಂಭಿಸಿದ ಸುರಭಿ ಗೋಶಾಲೆಯಲ್ಲಿ ಹಬ್ಬದ ಸಡಗರ! ಗೋವುಗಳಿಗೆ ಅಕ್ಕಿ ಬೆಲ್ಲವಿತ್ತು ಶಾಸ್ತ್ರೋಕ್ತವಾಗಿ ದೀಪಾವಳಿ ಹಬ್ಬವನ್ನು ಸದಸ್ಯರೆಲ್ಲೂ ಒಟ್ಟಾಗಿ ಆಚರಿಸಬೇಕೆಂದು ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ನಟರಾಜ್ ಭಾಗವತ್ ಅವರ ಇಚ್ಛೆ ….. ಅದರಂತೆ ಸಂಘದ ಸದಸ್ಯರು, ಕುಟುಂಬ, ಮಕ್ಕಳು ಮಾತ್ರವಲ್ಲದೆ ಆಸಕ್ತ ಹಲವಾರು ನಾಗರೀಕರೂ ಸೇರಿದ್ದರು…. ಸುರಭಿ ಗೋಶಾಲೆಗೆ ಬಂದಿದ್ದ ಯಾರಾದರೂ donation ಕೊಡಬಹುದೆಂದು ನಾನು ಗೋಶಾಲೆಯ ಒಂದು ಮೂಲೆಯಲ್ಲಿ ರಶೀದಿ ಪುಸ್ತಕ ಹಿಡಿದು ಕುಳಿತಿದ್ದೆ . ನಮ್ಮ ಅ. ಪ ರಾಮಭಟ್ಟರು ಹಾಗು ಅವರ ತಂಡ ನೆರಿದಿದ್ದ ಮಂದಿಗೆ ಅತ್ಯಂತ ಶ್ರದ್ಧೆ ಭಕ್ತಿಗಳಿಂದ ಗೋ ಪೂಜೆಯನ್ನು ಮಾಡಿಸಿದ್ದರು…..

ಅಂದುಕೊಂಡಂತೆ ಗೋಪೂಜೆ ಹೊಸರೀತಿಯಲ್ಲಿ ನಡೆದು ನಮ್ಮ ಸುರಭಿ ಗೋಶಾಲೆ ಜನರಿಗೆ ಮತ್ತಷ್ಟು ಹತ್ತಿರವಾಗಿತ್ತು ….. ಬಂದ ಕೆಲವರು ಗೋಶಾಲೆಗಾಗಿ donations ಕೊಟ್ಟ ಕಾರಣ ನಾನು ಅದರ ಲೆಕ್ಕದಲ್ಲಿ ಮುಳುಗಿದ್ದೆ . …. ಆಗ ನನ್ನ ಬಳಿ ಬಂದ ರಾಮಭಟ್ಟರು ತಮ್ಮ ಅಂಗವಸ್ತ್ರದಲ್ಲಿ ಕಟ್ಟಿದ್ದ ಗಂಟೊಂದನ್ನು ಬಿಡಿಸಿ ಹತ್ತು , ಇಪ್ಪತ್ತು ಚಿಲ್ಲರೆ ಸೇರಿದಂತೆ ಸರಿಸುಮಾರು ಸಾವಿರದ ಏಳುನೂರು ರೂಪಾಯಿಯನ್ನು ಕೊಟ್ಟು , ಜೊತೆಗಿದ್ದ ಒಂದಷ್ಟು ಬಿಡಿಗಾಸುಗಳನ್ನು ಅಲ್ಲಿಯೇ ಇದ್ದ ಗೋಶಾಲೆಯ ಕಾಣಿಕೆ ಡಬ್ಬಿಗೆ ಹಾಕಿ ನೋಟುಗಳ ಮೊತ್ತವನ್ನು ದಾಖಲಿಸುವಂತೆ ಕೇಳಿಕೊಂಡರು! ….. ತಡೆಯಲಾಗದೆ ನಾನು ಇದರ ಕುರಿತು ಕೇಳಿದಾಗ ಅವರು ಹೇಳಿದ ಮಾತುಗಳನ್ನು ಕೇಳಿ ನನಗೆ ಅವರ ಮೇಲಿದ್ದ ಗೌರವ ನೂರ್ಮಡಿಯಾಗಿತ್ತು !

ಬಂದವರೆಲ್ಲಾ ಗೋಪೂಜೆ ನೆರವೇರಿಸಿ ತೀರ್ಥ ಪ್ರಸಾದ ನೀಡುತ್ತಿದ್ದ ರಾಮಭಟ್ಟರಿಗೆ ನಮಸ್ಕರಿಸಿ ಕೈಗಿತ್ತ ದಕ್ಷಿಣೆಯ ಮೊತ್ತದ ಒಂದು ಬಿಡಿಗಾಸು ತನಗಿಟ್ಚುಕೊಳ್ಳದೆ , ಅಷ್ಚೂ ಮೊತ್ತವನ್ನು ಗೋಶಾಲೆಯ ನಿರ್ವಹಣಾ ನಿಧಿಗೆ ಸಮರ್ಪಿಸಿದ್ದರು! …. ಅದು ಅವರಿಗೆ ಬಂದ ದಕ್ಷಿಣೆ, ಅವರು ಮನಸ್ಸು ಮಾಡಿದ್ದರೆ ಅಷ್ಟನ್ನೂ ಅವರೇ ಇಟ್ಟುಕೊಳ್ಳಬಹುದಿತ್ತು! ಆದರೆ , ಒಂದೇ ಒಂದು ರುಪಾಯಿಯನ್ನೂ ಸಹ ಸ್ವಂತಕ್ಕಾಗಿ ಅವರು ಇಟ್ಟುಕೊಳ್ಳಲೇ ಇಲ್ಲ . ಗೋವುಗಳು ಸುಖವಾಗಿರಬೇಕು , ಗೋಶಾಲೆ ಸುಸೂತ್ರವಾಗಿ ನಡೆಯಬೇಕೆಂಬುದೇ ಈ ಪರಮ ಸಾತ್ವಿಕರ ಆಶಯವಾಗಿತ್ತು.

ದೇವಸ್ಥಾನದ ಅರ್ಚಕರೆಂದರೆ ತಟ್ಟೆಕಾಸಿನ ಗಿರಾಖಿ ಎಂದು ಹೀಯಾಳಿಸುವ ಈ ಕಾಲದಲ್ಲಿ ರಾಮಭಟ್ಟರ ಘನವಾದ ವ್ಯಕ್ತಿತ್ವ ನನ್ನ ಕಣ್ಣಿಗೆ ದಿವ್ಯವಾಗಿ ಗೋಚರಿಸಿತ್ತು .

ಇಂತಹ ಮೇರು ವ್ಯಕ್ತಿಗೆ ಅಂದು ಹರಿಹರಪುರದ ಶ್ರೀಗಳಿಂದ “ವೇದನಾರಾಯಣಾನುಗ್ರಹ” ಪ್ರಶಸ್ತಿ ದೊರೆತದ್ದು ನಿಜಕ್ಕೂ ಒಂದು ಸಾರ್ಥಕವಾದ ಕೆಲಸವಾಗಿತ್ತು.

ಅದರ್ಶ ಬದುಕು , ತತ್ವ-ಸಿದ್ಧಾಂತಗಳು ಬರೀ ಪುಸ್ತಕದಲ್ಲಿಲ್ಲ……. ರಾಮಭಟ್ಟರ ರೂಪದಲ್ಲಿ ನಮ್ಮ ಕಾಲದಲ್ಲೂ ನಾವು ನೋಡಬಹುದು ಎನ್ನುವುದೇ ನಮ್ಮ ಸುದೈವ . ರಾಮಭಟ್ಟರಂತಹ ನಿಸ್ವಾರ್ಥಿಗಳು ಈ ಸಮಾಜಕ್ಕೆ ಸುಲಭವಾಗಿ ಅರಿವಿಗೆ ಬಾರದ ದೊಡ್ಡ ಆಸ್ತಿ🙏

ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಶಿವಮೊಗ್ಗೆಯ ಕಾರ್ಯಕ್ರಮವೊಂದಕ್ಕೆ ಬಂದಾಗ, ಪ್ರಸನ್ನ ಗಣಪತಿ ದೇವಸ್ಥಾನಕ್ಕೆ ಆಹ್ವಾನವಿತ್ತು ಸತ್ಕರಿಸಿದ್ದರು. ಸನಾತನ ಪ್ರಜ್ಞೆಯ ಅಪ್ಪಟ ರಾಷ್ಟ್ರಾಭಿಮಾನಿಯಾದ ರಾಮಭಟ್ಟರು ಅಪರೂಪದಲ್ಲಿ ಅಪರೂವದ ವ್ಯಕ್ತಿಯಾಗಿದ್ದರು.

ಶ್ರೀ ಸಾಮಾನ್ಯನೇ ಭಗವತ್ ಧನ್ಯ ಎಂಬ ನುಡಿಗೆ ಉದಾಹರಣೆಯಾಗಿ ಬದುಕಿದ್ದರು. ಕಾಲನಲ್ಲಿ ಕಾಲವಾದರೂ ಕಾಲಾತೀತವಾದ ಛಾಪು ಬಿಟ್ಟುಹೋದ ಮಹನೀಯರು.

~ ವಿನಯ್ ಶಿವಮೊಗ್ಗ

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments