Breaking News

ರಾಷ್ಟ್ರೀಯ ಯುವ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ.

Cnewstv / 23.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾಷ್ಟ್ರೀಯ ಯುವ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ.

ಶಿವಮೊಗ್ಗ : ಭಾರತ ಸರ್ಕಾರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುದ ಕೇಂದ್ರ ಶಿವಮೊಗ್ಗ ಇವರ ವತಿಯಿಂದ 2022 – 23 ನೇ ಸಾಲಿನ ರಾಷ್ಟ್ರೀಯ ಯುವ ಕಾರ್ಯಕರ್ತರ ಹುದ್ದೆಗೆ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ತಾಲ್ಲೂಕಿಗೆ ಇಬ್ಬರಂತೆ ಕೆಲಸ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ ಕನಿಷ್ಠ ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು. 18 ರಿಂದ 29 ವರ್ಷದ ಒಳಗಿನವರಾಗಿರಬೇಕು. ಎನ್‍ಎಸ್‍ಎಸ್/ಎನ್‍ಸಿಸಿ ಯಲ್ಲಿ ಅನುಭವವುಳ್ಳ ಅಭ್ಯರ್ಥಿಗಳು ಹಾಗೂ ನೆಹರು ಯುವ ಕೇಂದ್ರದಲ್ಲಿ ನೊಂದಾಯಿತ ಯುವಕ/ಯುವತಿ ಸಂಘಗಳ ಸದಸ್ಯರುಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ಕಾಲೇಜು ವಿದ್ಯಾರ್ಥಿಗಳು ಹಾಗೂ ಈಗಾಗಲೇ ಬೇರೆ ಕಡೆ ಕೆಲಸ ಮಾಡುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ. ಮಾಸಿಕ ರೂ.5,000/- ಗೌರವಧನ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು www.nyks.nic.in ವೆಬ್‍ಸೈಟ್ ನಲ್ಲಿ ಅಥವಾ ಜಿಲ್ಲಾ ಯುವ ಅಧಿಕಾರಿಗಳ ಕಚೇರಿ, ನೆಹರು ಯುವ ಕೇಂದ್ರ ಇಲ್ಲಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾ.09 ಕಡೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08182-220883, 7975443499, 9961332968 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ತಿಳಿಸಿರುತ್ತಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*