Cnewstv / 21.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಲ್ಲಮಪ್ರಭು ಹೆಸರಿಡಿ.
ಶಿವಮೊಗ್ಗ : ಸೋಗಾನೆ ಬಳಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿರುವ ವಿಮಾನ ನಿಲ್ದಾಣಕ್ಕೆ 12ನೇ ಶತಮಾನದ ಮಹಾನ್ ಸಂತ ಶ್ರೇಷ್ಟ ತತ್ವಜ್ಞಾನಿ ಹಾಗೂ ಜಗತ್ತಿನ ಮೊಟ್ಟ ಮೊದಲ ಸಂಸತ್ತಿನ ಅಧ್ಯಕ್ಷರಾದ ಅಲ್ಲಮ ಪ್ರಭು ದೇವರ ಹೆಸರನ್ನು ಇಡಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ರಾಷ್ಟೀಯ ಬಸವದಳ ಟ್ರಸ್ಟ್ ಶಿವಮೊಗ್ಗ ವತಿಯಿಂದ ಮನವಿ ಸಲ್ಲಿಸಲಾಯಿತು.
ಇದನ್ನು ಒದಿ : https://cnewstv.in/?p=12170
ಪ್ರಜಾಪ್ರಭುತ್ವದ ತತ್ವ ಸಿದ್ಧಾಂತಗಳಿಗೆ ಪ್ರಪ್ರಥಮವಾಗಿ ಮುನ್ನುಡಿ ಬರೆದ ಹೆಗ್ಗಳಿಕೆ ನಮ್ಮ ದೇಶದ್ದಾಗಿದೆ. 12ನೆ ಶತಮಾನದಲ್ಲಿ ಗುರುಬಸವಣ್ಣನವರು ಸಂಸ್ಥಾಪಿಸಿದ ಅನುಭವ ಮಂಟಪವು ಜಗತ್ತಿನ ಮೊಟ್ಟಮೊದಲ ಸಂಸತ್ ಎಂದೆನಿಸಿಕೊAಡಿದೆ. ಅನುಭವ ಮಂಟಪದ ಮೊದಲ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಮೌಲ್ಯಗಳ ಸಿದ್ಧಾಂತವನ್ನು ಜಗತ್ತಿಗೆ ಪಸರಿಸಿದ ಹಿರಿಮೆ ಮಹಾನ್ ಅನುಭಾವಿ ಅಲ್ಲಮಪ್ರಭು ದೇವರದ್ದು, ಅವರು ನಮ್ಮ ದೇಶದ ಅಸ್ಮಿತೆ ಎನ್ನಬಹುದು. ಅವರ ಹೆಸರಿನಲ್ಲಿ ರಾಜ್ಯ ಹಾಗೂ ದೇಶದ ಯಾವುದೇ ಸ್ಥಳಗಳಿಗೆ ಹೆಸರು ಇಟ್ಟಿರುವ ಉದಾಹರಣೆಗಳಿಲ್ಲ. ಇದು ವಿಷಾದದ ಸಂಗತಿಯಾಗಿದೆ.
ಪ್ರಧಾನಿ ಮೋದಿಯವರು ಕೂಡ ಪ್ರಜಾಪ್ರಭುತ್ವ ಸಿದ್ಧಾಂತಗಳ ತಾಯಿಬೇರು. ಕರ್ನಾಟಕ ರಾಜ್ಯದಲ್ಲಿ ಉದಯವಾದ ಪ್ರಮುಖ ಸಂಗತಿಗಳನ್ನು ಸಂಸತ್‌ನಲ್ಲಿ ಸದಾ ಸ್ಮರಿಸುತ್ತಿರುವುದನ್ನು ನಾವೆಲ್ಲರೂ ಕಂಡಿದ್ದೇವೆ. ಹಾಗೆಯೆ ಅಲ್ಲಮಪ್ರಭು ದೇವರ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯಾಗಿದೆ. ಆದ್ದರಿಂದ ವಿಮಾನ ನಿಲ್ದಾಣಕ್ಕೆ ಅಲ್ಲಮಪ್ರಭು ದೇವರ ಹೆಸರಿಡುವುದು ಸರ್ವರೀತಿಯಿಂದಲೂ ಸರ್ವೋತ್ತಮ ಆಯ್ಕೆ ಎನಿಸಿದೆ. ಆದ್ದರಿಂದ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದರ ಮೂಲಕ ಪ್ರಜಾಪ್ರಭುತ್ವದ ಆಶಯಗಳಿಗೆ ಜೀವ ತುಂಬುವ ಕಾರ್ಯ ಮಾಡಿದಂತೆ ಆಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಯಲವಟ್ಟಿ ಮಲ್ಲಿಕಾರ್ಜುನ್, ಹಿರಣ್ಣಯ್ಯ,
ಟಿ.ಜಿ.ಬಸವರಾಜಯ್ಯ, ನಿತಿನ್ ಪಾಟೀಲ್
ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv