ಅಪ್ಪ ಮಕ್ಕಳು ನೀವಿಬ್ಬರೂ ಅಧಿಕಾರದಲ್ಲಿದ್ದಾಗ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ. ಜಿಲ್ಲೆಗೆ ನಿಮ್ಮ ಕೊಡುಗೆ ಏನೂ ಇಲ್ಲ. ನಾನು ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತುಗಳನ್ನೇ ಮತ್ತೆ ಸಮರ್ಥಿಸಿಕೊಳ್ಳುತ್ತಿದ್ದೇನೆ. ನಿಮ್ಮಿಂದ ಏನೂ ಆಗಿಲ್ಲ. ಇನ್ನು ತುಮರಿ ಸೇತುವೆಗೆ ಸಂಬಂಧಿಸಿದಂತೆ ಇವತ್ತೂ ಹೇಳುತ್ತೇನೆ. ಅದಕ್ಕೆ ಆಡಳಿತಾತ್ಮಕ ಅನುಮೋದನೆಯಿರಲಿ ಅದರ ನೀಲನಕ್ಷೆಯೇ ಇನ್ನೂ ಸಿದ್ಧವಾಗಿಲ್ಲ. ಅಂದಾಜು ವೆಚ್ಚವೂ ಇಲ್ಲ. ಇದನ್ನು ರಾಘವೇಂದ್ರ ಅವರೇ ಒಪ್ಪಿಕೊಳ್ಳುತ್ತಾರೆ. ಅವರು ಹೇಳಿದಂತೆ ನಿರ್ಮಾಣ ವೆಚ್ಚ ಕಡಿತಗೊಳಿಸಿರುವುದು ದೆಹಲಿ ಕಛೇರಿಯಲ್ಲಿಯಲ್ಲ. ಬೆಂಗಳೂರಿನ ಇವರ ಕಛೇರಿಯಲ್ಲಿ. ದೆಹಲಿಯ ಅಧಿಕಾರಿಗಳು ಇದನ್ನು ಸುತಾರಾಂ ಒಪ್ಪಿಲ್ಲ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಇದರ ಶಂಕುಸ್ಥಾಪನೆ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಕಾನೂನಾತ್ಮಕವಾಗಿ ಇಲ್ಲದ ನೂರಾರು ಕೋಟಿ ರೂ.ಗಳ ಕಾಮಗಾರಿಗೆ ಹೇಗೆ ಶಂಕುಸ್ಥಾಪನೆ ನೆರವೇರಿಸಿದರು ಎನ್ನುವುದೇ ಗೊತ್ತಿಲ್ಲ. ಹೋಗಲಿ ಶಂಕುಸ್ಥಾಪನೆ ನೆರವೇರಿಸಿದ ಮೇಲಾದರೂ ಈ ಬಗ್ಗೆ ಕ್ರಮ ಕೈಗೊಳ್ಳಬಹುದಿತ್ತು. ಆದರೆ, ಅದನ್ನೂ ಮಾಡಲಿಲ್ಲ. ಇದೀಗ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ನೀತಿ ಸಂಹಿತೆಯ ನೆಪದಲ್ಲಿ ಅದು ಮತ್ತೆ ನೆನೆಗುದಿಗೆ ಬೀಳುವುದು ಖಚಿತ.ಯಡಿಯೂರಪ್ಪನವರಿಗೆ, ರಾಘವೇಂದ್ರರವರಿಗೆ ಅಥವಾ ಬಿಜೆಪಿ ಕೇಂದ್ರನಾಯಕರಿಗೆ ನಿಜಕ್ಕೂ ತಾಕತ್ತಿದ್ದರೆ ತಕ್ಷಣವೇ ತುಮರಿ ಸೇತುವೆ ಕಾಮಗಾರಿಗೆ ಟೆಂಡರ್ ಕರೆಯಬೇಕು. ಜನರ ಮನಸ್ಸಿನಲ್ಲಿ ಸುಳ್ಳನ್ನು ತುಂಬಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ರೈಲು ಕಾಮಗಾರಿಗಳ ವಿಚಾರವಾಗಿ ಅವರು ರೈಲು ಬಿಟ್ಟಿದ್ದು ನಿಜ. ಅಡಿಕೆ ಹಾನಿಕರ ಎಂದು ಸಂಸತ್‍ನಲ್ಲಿ ಬಹಿರಂಗವಾಗಿ ಹೇಳಿದವರೇ ಬಿಜೆಪಿ ಸಚಿವರು. ಆಗ ಬಿ.ಎಸ್.ವೈ. ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರು. ಈಗಲೂ ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಆಮದು ಸುಂಕ ಜಾಸ್ತಿ ಮಾಡಬೇಕೆಂಬ ಸಣ್ಣ ಜ್ಞಾನವೂ ಕೇಂದ್ರ ಸರ್ಕಾರಕ್ಕಿಲ್ಲ ಎಂದು ದೂರಿದರು.ರಾಘವೇಂದ್ರ ಅವರು ಕಾಂಗ್ರೆಸ್ ಮತ್ತು ತಮ್ಮನ್ನು ಕುರಿತಂತೆ ಭ್ರಮನಿರಸನಗೊಂಡಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ, ನಿಜವಾಗಿ ಭ್ರಮನಿರಸನಗೊಂಡಿರುವುದು ಯಡಿಯೂರಪ್ಪನವರು. ಎರಡೇ ದಿನ ಮುಖ್ಯಮಂತ್ರಿಯಾಗಿ ಮತ್ತೆ ಮುಖ್ಯಮಂತ್ರಿಯಾಗಲಿಲ್ಲ ಎಂಬ ಹಪಹಪಿತನ, ಅಧಿಕಾರದ ಆಸೆ ಅವರನ್ನ ಕಾಡಿದೆ. ಇದನ್ನು ಹೇಳುವುದನ್ನು ಬಿಟ್ಟು, ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ವಿರೋಧ ಪಕ್ಷವಾಗಿ ಏನೂ ಕೆಲಸ ಮಾಡದ ಅವರು ಕುರ್ಚಿಯ ಆಸೆಗೆ ಭದ್ರಾವತಿ ಶಾಸಕ ಸಂಗಮೇಶ್ ಅವರಿಗೆ ಹಣದ ಆಸೆ ತೋರಿಸಿದ್ದು ಸುಳ್ಳೇನಲ್ಲ ಎಂದರು.ಕಾಂಗ್ರೆಸ್‍ನಲ್ಲಿ ಅಸಮಾಧಾನ ಇದೆ ಎಂದು ಹೇಳುವ ರಾಘವೇಂದ್ರ ಅವರು, ಬಿಜೆಪಿಯಲ್ಲಿ ಅಸಮಾಧಾನ ಇಲ್ಲವೇ? ಇವರ ಅಭ್ಯರ್ಥಿ ಘೋಷಣೆಗೆ ಸಂಬಂಧಿಸಿದಂತೆ ಬಿಜೆಪಿಯ ಒಂದು ಗುಂಪಿನ ಯಾರಿಗೂ ಒಪ್ಪಿಗೆ ಇಲ್ಲ. ಈಶ್ವರಪ್ಪನವರು ಕೇವಲ ರಾಘವೇಂದ್ರ ಅವರ ಹೆಸರನ್ನು ಹೇಳುತ್ತಿಲ್ಲ. ಆಯನೂರು ತಟಸ್ಥವಾಗಿದ್ದಾರೆ. ರುದ್ರೇಗೌಡರು ಗೊಂದಲದಲ್ಲಿದ್ದಾರೆ. ಹೀಗೆ ಬಿಜೆಪಿಯಲ್ಲಿಯೇ ಬೇಕಾದಷ್ಟು ಅಸಮಾಧಾನ ಇರುವಾಗ ಕಾಂಗ್ರೆಸ್‍ನ ವಿಚಾರ ಇವರಿಗೆ ಏಕೆ ಬೇಕು? ಮೊದಲು ತಮ್ಮ ಪಕ್ಷದಲ್ಲಿರುವ ಅಸಮಾಧಾನಗಳನ್ನು ಸರಿಪಡಿಸಿಕೊಳ್ಳಲಿ ಎಂದರು.ರಾಘವೇಂದ್ರ ಸೋಲಿಸುವುದು ಖಚಿತ, ಯಡಿಯೂರಪ್ಪನವರು ರಾಜ್ಯದ ಅಭಿವೃದ್ದಿಯ ಬಗ್ಗೆ, ಸಮಸ್ಯೆಯ ಬಗ್ಗೆ ಮಾತನಾಡುವುದು ಬಿಟ್ಟು, ನನ್ನ ಮಗನೇ ಅಭ್ಯರ್ಥಿ ಎಂದು ಕೂಗಿ ಹೇಳುತ್ತಿದ್ದಾರೆ. ಈ ಹಿಂದೆ ದೇವರಾಣೆ ನನ್ನ ಮಗ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿ, ನಂತರ ನಿಲ್ಲಿಸಿದ್ದು ಇತಿಹಾಸ. ಈಗ ತಮ್ಮ ಮಗನನ್ನು ನಿಲ್ಲಿಸಲು ಹೊರಟಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ರಾಘವೇಂದ್ರ ಅವರನ್ನು ಸೋಲಿಸುವುದು ಖಚಿತ. ಬಿಜೆಪಿಯಿಂದ ರಾಘವೇಂದ್ರ ಸೇರಿದಂತೆ ಯಾರೇ ಅಭ್ಯರ್ಥಿಯಾದರೂ ಅವರನ್ನು ಸೋಲಿಸುವುದು ನಿಶ್ಚಿತ ಎಂದ ಅವರು, ಅವರನ್ನು ಸೋಲಿಸಲು ಬಹಳ ದೊಡ್ಡ ವ್ಯಕ್ತಿಯಾಗಬೇಕೆಂದೇನೂ ಇಲ್ಲ. ನನ್ನಂಥವರೂ ಸಾಕು. ಹಾಗಾಗಿ ರಾಹುಲ್ ಅವರಿಗೆ ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡುತ್ತೇನೆ. ನಾನೇ ಸೋಲಿಸುತ್ತೇನೆ ಎಂದರು. ಇನ್ನು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎನ್. ರಮೇಶ್, ಸಿ.ಎಸ್. ಚಂದ್ರಭೂಪಾಲ್, ಪಿ.ವಿಶ್ವನಾಥ್ (ಕಾಶಿ), ಎಸ್. ಚಿನ್ನಪ್ಪ, ಹೆಚ್.ಎಂ. ಮಧು ಇದ್ದರು.
- ತುಂಗಾ ನದಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಶವ ಪತ್ತೆ ...
- ಪ್ರಧಾನಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಕ್ಷಮೆಯಾಚನೆಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಆಗ್ರಹ ...
- ಮಾಜಿ ನಗರಸಭಾ ಅಧ್ಯಕ್ಷರಾದ N J ರಾಜಶೇಖರ್ ಇನ್ನಿಲ್ಲ ...
- ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಜಿಲ್ಲಾ ಅಧ್ಯಕ್ಷರಾಗಿ ಕರವೇ ಕಿರಣ್ ನೇಮಕ ...
- ಕುವೆಂಪು ವಿಶ್ವವಿದ್ಯಾಲಯದ ಪ್ರವೇಶಾತಿಗೆ ಅವಧಿ ವಿಸ್ತರಣೆ. ...
- ದಸರಾ ಚಲನಚಿತ್ರೋತ್ಸವ… ...
- ಬೆಳ್ಳಿ ಅಂಬಾರಿಯ ಜಂಬೂಸವಾರಿಗೆ ಶಿವಪ್ಪನಾಯಕ ಅರಮನೆಯಲ್ಲಿ ಸಕಲ ಸಿದ್ಧತೆ ...
- ನವರಾತ್ರಿ ಸಂಭ್ರಮ.. ...
- ಶಿವಮೊಗ್ಗ ದಸರಾಕ್ಕೆ ಸಕ್ರೆಬೈಲಿನ ಮೂರು ಆನೆಗಳಿಗೆ ವಿಶೇಷ ಆಹ್ವಾನ: ಅಂಬಾರಿ ಹೊರಲು ಸಾಗರಗೆ ತಾಲೀಮು ...
- ಶಿವಮೊಗ್ಗದಲ್ಲಿ ನ್ಯೂಸ್ 18 ಕನ್ನಡ ವಾಹಿನಿಯ ಕರುನಾಡ ಹಬ್ಬ ಕರುನಾಡ ಹಬ್ಬಕ್ಕೆ ನಿಮ್ಮ ಸಿ ನ್ಯೂಸ್ ಸಾಥ್! ...
Recent Comments