Cnewstv / 09.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಚಳುವಳಿಗಾರರನ್ನು ಕರೆದು ಮಾತನಾಡುವ ಸೌಜನ್ಯವೂ ಮುಖ್ಯಮಂತ್ರಿಗಳಿಗೆ ಇಲ್ಲ – ಹೆಚ್.ಆರ್. ಬಸವರಾಜಪ್ಪ .
ಶಿವಮೊಗ್ಗ: ಚಳುವಳಿಗಾರರನ್ನು ಕರೆದು ಮಾತನಾಡುವ ಸೌಜನ್ಯವೂ ಮುಖ್ಯಮಂತ್ರಿಗಳಿಗೆ ಇಲ್ಲ. ಅದೇನು ಭಯವೋ ಇಷ್ಟವಿಲ್ಲವೋ, ಸಮಸ್ಯೆಗಳೇ ಬೇಕಿಲ್ಲವೋ ಗೊತ್ತಿಲ್ಲ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದದರು.
ರೈತಸಂಘ ಸೇರಿದಂತೆ ವರ್ಷವಿಡೀ ಚಳುವಳಿಗಾರರು ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿದಂತೆ ಹಲವು ಕಡೆ ಚಳುವಳಿ ನಡೆಸುತ್ತಲೇ ಇರುತ್ತಾರೆ. ಬೆಳಗಾವಿಯಲ್ಲಿಯೂ ಕೂಡ ಚಳುವಳಿ ಮಾಡಿದರು. ಆದರೆ ಚಳುವಳಿಕಾರರನ್ನು ಕರೆದು ಸೌಜನ್ಯಕ್ಕಾಗಿಯಾದರೂ ಮುಖ್ಯಮಂತ್ರಿಗಳು ಮಾತನಾಡಲಿಲ್ಲ. ಇದೀಗ ಬಜೆಟ್ ಮಂಡನೆಯಲ್ಲಿದ್ದಾರೆ. ಆಗಲೂ ಕೂಡ ಹೋರಾಟಗಾರರನ್ನು, ಸಂಘಟನಕಾರರನ್ನು ಕರೆದು ಚರ್ಚಿಸಬಹುದಿತ್ತು. ಇದೇ ಮೊದಲ ಬಾರಿಗೆ ಈಗಿನ ಮುಖ್ಯಮಂತ್ರಿಗಳು ಅವರನ್ನೂ ಕರೆಯಲಿಲ್ಲ ಎಂದರು.
ಇದನ್ನು ಒದಿ : https://cnewstv.in/?p=12047
ಜನವಿರೋಧಿ ಕಾಯಿದೆಗಳನ್ನು ವಿರೋಧಿಸಿ ಹಲವು ಹಕ್ಕೊತ್ತಾಯಗಳ ಆಗ್ರಹಕ್ಕಾಗಿ ಫೆ.16ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಜನಾಗ್ರಹ ರ‍್ಯಾಲಿ ಮತ್ತು ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ. ಜನ ಚಳುವಳಿಗಳ ಸಂಯುಕ್ತ ಚಲೋ ಎಂಬ ಹೆಸರಿನಲ್ಲಿ ಸುಮಾರು 22ಕ್ಕೂ ವಿವಿಧ ಸಂಘಟನೆಗಳು ಒಟ್ಟಾಗಿ ಒಕ್ಕೂಟದ ರೀತಿಯಲ್ಲಿ ಈ ಪ್ರತಿಭಟನಾ ಸಮಾವೇಶ ಮತ್ತು ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೆಚ್.ಆರ್. ಬಸವರಾಜಪ್ಪ ತಿಳಿಸಿದರು.
ಕಳೆದ ನಾಲ್ಕು ವರ್ಷಗಳು ಕರ್ನಾಟಕದ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಜನರ ನೋವಿಗೆ ಸ್ಪಂದಿಸಲಿಲ್ಲ. ಹೋರಾಟಗಳನ್ನು ಪರಿಗಣಿಸಲಿಲ್ಲ. ಜೊತೆಗೆ ಜನವಿರೋಧಿ ಕಾಯಿದೆಗಳು, ರೈತವಿರೋಧಿ ಕಾಯಿದೆಗಳು ಸಾಲು ಸಾಲಾಗಿ ಜಾರಿಯಾದವು. ಯಾವ ಯೋಜನೆಗಳೂ ಬಡವರನ್ನು ತಲುಪಲಿಲ್ಲ. ಮೀಸಲಾತಿ ಕೂಡ ದಿಕ್ಕು ತಪ್ಪಿದೆ. ವಿದ್ಯಾರ್ಥಿ ವೇತನ ಕೂಡ ಕಡಿತಗೊಂಡಿದೆ. ಮಹಿಳೆಯರ ಮತ್ತು ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾದವು. ಜೊತೆಗೆ ಶೇ.40ರಷ್ಟು ಕಮಿಷನ್ ಎಂಬ ಕುಖ್ಯಾತಿಗೂ ಸರ್ಕಾರ ಪಾತ್ರವಾಯಿತು. ವೋಟ್‌ಬ್ಯಾಂಕ್ ಹೆಚ್ಚಿಸಕೊಳ್ಳಲು ಕೋಮುದ್ವೇಷಗಳೇ ಉಂಟಾದವು. ಒಂದು ರೀತಿಯಲ್ಲಿ ರಾಜಕಾರಣವೇ ನೀಚತನಕ್ಕೆ ಇಳಿಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗಾವಕಾಶಗಳು ಹೆಚ್ಚಬೇಕು. ಕೋಮುವಾದಿಕರಣ ನಿಲ್ಲಬೇಕು. ಭ್ರಷ್ಟಾಚಾರ ತೊಲಗಬೇಕು. ರಾಜ್ಯದಲ್ಲಿ ಶಾಂತಿ ನೆಲೆಸಬೇಕು. ದ್ವೇಷ ರಾಜಕಾರಣ ತೊಲಗಬೇಕು. ಈ ಬಾರಿಯ ಬಜೆಟ್‌ನಲ್ಲಾದರೂ ರೈತರಿಗೆ ಅನುಕೂಲವಾಗಬೇಕು. ಬೆಲೆ ಏರಿಕೆ ನಿಲ್ಲಬೇಕು. ರೈತರ ಬೆಳೆಗೆ ಬೆಲೆ ದಕ್ಕಬೇಕು ಎಂಬ ಹಲವು ವಿಷಯಗಳನ್ನು ಇಟ್ಟುಕೊಂಡು ಈ ಆಗ್ರಹ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನು ಒದಿ : https://cnewstv.in/?p=12044
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments