Cnewstv / 06.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬಿಜೆಪಿ ಸುಳ್ಳಿನ ವ್ಯಾಪಾರವನ್ನು ಗುತ್ತಿಗೆ ತೆಗೆದುಕೊಂಡಿದೆ : ಆರ್.ಎಂ. ಮಂಜುನಾಥ ಗೌಡ.
ಶಿವಮೊಗ್ಗ : ಬಿಜೆಪಿ ಸುಳ್ಳಿನ ವ್ಯಾಪಾರವನ್ನು ಗುತ್ತಿಗೆ ತೆಗೆದುಕೊಂಡಿದೆ ಎಂದು ಕೆಪಿಸಿಸಿ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ಆರೋಪಿಸಿದರು.
ಅವರು ಇಂದು ಹೋಟೆಲ್ ಜ್ಯುವೆಲ್ ರಾಕ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ವೈಷಮ್ಯದ ಮಾರುಕಟ್ಟೆ ಮೂಲಕ ತನ್ನ ವ್ಯಾಪಾರ ಮುಂದುವರೆಸಿದೆ. ಕೇವಲ ಆಶ್ವಾಸನೆಗಳ ಮೂಲಕ ಜನರಿಗೆ ಮಂಕುಬೂದಿ ಎರಚುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸುಳ್ಳನ್ನೇ ಕೇಂದ್ರವಾಗಿಟ್ಟುಕೊAಡು ಜನರ ಪರವಾಗಿ ನಿಲ್ಲದೆ ದೇಶವನ್ನು ಅಧೋಗತಿಗೆ ತರುತ್ತಿದೆ. ಬರುವ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಯಾವ ಉದ್ಯೋಗಗಳೂ ಇಲ್ಲ, ಸಾರ್ವಜನಿಕ ವಲಯಗಳು ಮಾರಾಟವಾದವು. ಪ್ರಸ್ತುತ ಸಮಸ್ಯೆಗಳನ್ನು ಬಗೆಹರಿಸಲಿಲ್ಲ. ಬೆಲೆ ಏರಿಕೆ ಮುಂದುವರಿದಿದೆ. ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ. ಗುಜರಾತ್‌ಗೆ ಮಾತ್ರ ಉದ್ಯಮಗಳು ಬೇಕೇ, ಕರ್ನಾಟಕಕ್ಕೆ ಬೇಡವೇ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗ ನಾಲ್ಕು ಸಾವಿರ ಕೋಟಿ ಸಾಲವಿತ್ತು. ಈಗ ಅದು ೮ ಸಾವಿರ ಕೋಟಿ ದಾಟಿದೆ ಎಂದರು. ಭದ್ರಾವತಿಯಲ್ಲಿ ಎಂಪಿಎಂ ಕಾರ್ಖಾನೆ ಮುಳುಗಿದೆ. ಈಗ ವಿಐಎಸ್‌ಎಲ್ ಸರದಿ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರು ಇನ್ನೂ ಭರವಸೆ ನೀಡುತ್ತಲೇ ಇದ್ದಾರೆ.
ಇದನ್ನು ಒದಿ : https://cnewstv.in/?p=12010
ಕಾರ್ಖಾನೆಯನ್ನು ಪುನಶ್ಚೇತನಗೊಳಿಸುತ್ತೇವೆ ಎಂದು ಆಶ್ವಾಸನೆ ನೀಡುತ್ತಿದ್ದಾರೆ. ಈ ರೀತಿ ಸುಳ್ಳು ಹೇಳುವುದನ್ನು ಬಿಜೆಪಿಯವರು ಬಿಡಬೇಕು. ಕೋಮು ಸೌಹಾರ್ದವನ್ನು ಕಾಪಾಡಬೇಕು. ದ್ವೇಷದ ಬೀಜ ಬಿತ್ತಿ ಯುವಕರಿಗೆ ಉದ್ಯೋಗ ನೀಡದೆ ಅವರ ಮನಸ್ಸನ್ನು ಧರ್ಮದ ಹೆಸರಲ್ಲಿ ಭಾವನಾತ್ಮಕತೆಗೆ ದೂಡಿ ತಮ್ಮ ಮತಬ್ಯಾಂಕನ್ನು ತುಂಬಿಸಿಕೊಳ್ಳುತ್ತಿರುವ ಬಿಜೆಪಿಗೆ ಶಾಂತಿ ಬೇಕಾಗಿಲ್ಲ. ಜನ ಈಗಾಗಲೇ ಬೇಸರಗೊಂಡಿದ್ದಾರೆ ಎಂದರು.
ರಾಹುಲ್ ಗಾಂಧಿಯವರು ಸುಮಾರು 4 ಸಾವಿರಕ್ಕೂ ಹೆಚ್ಚು ಕಿ.ಮೀ. ಪಾದಯಾತ್ರೆಯ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದು ಒಡೆದ ಮನಸ್ಸುಗಳನ್ನು ಭಾರತ್ ಜೋಡೋ ಯಾತ್ರೆಯ ಮೂಲಕ ಜೋಡಿಸಿದ್ದಾರೆ. ಜಮ್ಮುವಿನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಾನು ಕೂಡ ಭಾಗವಹಿಸಿದ್ದೆ. ಇದೊಂದು ಐತಿಹಾಸಿಕ ಸಮಾರಂಭವಾಗಿತ್ತು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಸಹಜವಾಗಿಯೇ ಹಬ್ಬಿದೆ. ತೀರ್ಥಹಳ್ಳಿಯೂ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಲಿದೆ. ಬಿಜೆಪಿಯ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ರಾಹುಲ್‌ರ ಹೆಜ್ಜೆ ಸತ್ಯದ ದರ್ಶನ ನೀಡಿದೆ ಎಂದರು.
ಇದನ್ನು ಒದಿ : https://cnewstv.in/?p=12008
ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಕೆ.ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಫೆ.೮ರಂದು ಭದ್ರಾವತಿ ಮತ್ತು ತೀರ್ಥಹಳ್ಳಿಗೆ ಬರಲಿದ್ದಾರೆ. ಬೆಳಿಗ್ಗೆ ಭದ್ರಾವತಿಯ ಸಭೆಯ ನಂತರ ಸಂಜೆ ತೀರ್ಥಹಳ್ಳಿಗೆ ಬರಲಿದ್ದು, ನೂರಾರು ಕಾರ್ಯಕರ್ತರು ಅವರನ್ನು ಬೈಕ್ ರ‍್ಯಾಲಿ ಮೂಲಕ ಸ್ವಾಗತಿಸಲಿದ್ದಾರೆ. ನಂತರ ನಡೆಯುವ ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments