Cnewstv / 1.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸ !! ವೈರಲ್ ಪೋಸ್ಟ್ ಬಗ್ಗೆ ಪೊಲೀಸ್ ಇಲಾಖೆ ಹೇಳಿದ್ದೇನು ??
ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ ಇದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದ್ದು ಇದೇ ಬೆನ್ನಲ್ಲೇ ಈ ರೀತಿಯ ಪೋಸ್ಟ್ ಸಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈಗಾಗಲೇ ಸಾಕಷ್ಟು ಮಂದಿ ಕೆಲಸಕ್ಕಾಗಿ ತಮ್ಮ ತಮ್ಮ CV ಕಳುಹಿಸುತ್ತಿದ್ದಾರೆ. ಆದರೆ ಇದು ಯಾವುದೇ ಅಧಿಕೃತ ಮಾಹಿತಿಯಾಗಿಲ್ಲ.
https://fb.watch/ir06dGOxsR/?mibextid=2Rb1fB
ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಾದ ಮಿಥುನ್ ಕುಮಾರ್ ರವರು ಎಚ್ಚರಿಕೆಯನ್ನು ನೀಡಿದ್ದು, ಯಾರು ಕೂಡ ಮೋಸ ಹೋಗಬಾರದು. ಈ ಪೋಸ್ಟ್ ಯಾರು ಪ್ರಕಟಿಸಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=11990
C News TV Kannada News Online in cnewstv