ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಅವರು ಇತ್ತೀಚೆಗೆ ನನ್ನ ಹಾಗೂ ನನ್ನ ತಂದೆ ಯಡಿಯೂರಪ್ಪ ಬಗ್ಗೆ ಆಡಿರುವ ಮಾತು ಸತ್ಯಕ್ಕೆ ದೂರವಾಗಿದೆ..ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ೭ ಸ್ಥಾನಗಳಲ್ಲಿ ಬಿಜೆಪಿ ೬ನ್ನು ಗೆದ್ದ ಕಾರಣ ಅವರು ಭ್ರಮನಿರಸನಗೊಂಡಿದ್ದಾರೆ. ಅಲ್ಲದೆ ಪಕ್ಷದ ಜಿಲ್ಲಾ ಉಪಾಧ್ಯಕ್ಷರೇ ತೀ.ನಾ.ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಅಧೋಗತಿಗೆ ಇಳಿಯುತ್ತಿದೆ. ಇಂದಿರಾ ಗಾಂಧಿ ಇದ್ದಂತಹ ಪಕ್ಷ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಂಡಿದೆ. ಇನ್ನು ರೈಲ್ವೆ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯಾಗಿದೆ. ಬೀರೂರು-ಶಿವಮೊಗ್ಗ ಜೋಡಿ ಮಾರ್ಗ ನಿರ್ಮಾಣ, ಶಿವಮೊಗ್ಗ-ಹೊನ್ನಾವರ ಮಾರ್ಗ ನಿರ್ಮಾಣ ಸೇರಿದಂತೆ ಅನೇಕ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ.ತುಮರಿ ಸೇತುವೆ ನಿರ್ಮಾಣ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ₹ 606 ಕೋಟಿ ಅಂದಾಜು ವೆಚ್ಚದ ಯೋಜನೆಯ ಗಾತ್ರ ಇಳಿಸುವ ನಿಟ್ಟಿನಲ್ಲಿ ಸೇತುವೆ ಗಾತ್ರ ಕಡಿಮೆ ಮಾಡಲಾಗುತ್ತಿದೆ. ಇದರಿಂದ ಸುಮಾರು ₹ 150 ಕೋಟಿ ಉಳಿಯಲಿದೆ. ಹಾಗಾಗಿ ತಾಂತ್ರಿಕ ಸಲಹೆ ಮೇರೆಗೆ ಅಧಿಕಾರಿಗಳು ಹೊಸದಾಗಿ ಡಿಪಿಆರ್ ಸಲ್ಲಿಸಿದ್ದಾರೆ ಭದ್ರಾವತಿಯ ವಿಐಎಸ್ಎಲ್ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆ. ೪೫೦ ಕೋಟಿ ವೆಚ್ಚದಲ್ಲಿ ತುರ್ತಾಗಿ ಕೆಲ ವಿಭಾಗವನ್ನು ದುರಸ್ತಿ ಮಾಡಲು ಉದ್ದೇಶಿಸಲಾಗಿದೆ. ಹಾಗೆಯೇ ಶಾಹಿ ಗಾರ್ಮೆಂಟ್ಸ್ ಸೇರಿದಂತೆ ಅನೇಕ ಉದ್ಯಮಗಳು ಇಲ್ಲಿ ತಲೆ ಎತ್ತಿದ್ದು ಅನೇಕರಿಗೆ ಉದ್ಯೋಗಾವಕಾಶ ಸಿಕ್ಕಿದೆ. .ಇನ್ನೂ ರಾಜ್ಯದ ಬಗರ್ ಹುಕುಂ ರೈತರ ಹಿತ ಕಾಯಲು ಬಿಜೆಪಿ ಸಿದ್ಧವಿದೆ. ಹೊರ ದೇಶಗಳಿಂದ ಬರುವ ಅಡಕೆ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ ಪರಿಣಾಮ ದರ ಸ್ಥಿರವಾಗಿದೆ.ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ ಚಳ್ಳಕೆರೆ-ಶಿವಮೊಗ್ಗ, ಶಿವಮೊಗ್ಗ-ಹೊನ್ನಾಳಿ- ಹರಿಹರ ಬಿಎಚ್ ರಸ್ತೆಯನ್ನು ನಾಲ್ಕುಪಥದ ರಸ್ತೆಯಾಗಿ ಮಾಡಲು ಒಪ್ಪಿಗೆ ಸಿಕ್ಕಿದೆ.ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಅಮೃತ ಯೋಜನೆಯಡಿ ಜಿಲ್ಲೆಯಲ್ಲಿ ಕೆಲಸಗಳಾಗುತ್ತಿದೆ. ಪಾಸ್ ಪೋರ್ಟ್ ಸೇವಾ ಕೇಂದ್ರ, ಕೇಂದ್ರಿಯ ವಿದ್ಯಾಲಯ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳಾಗಿವೆ.ಅತೀ ಹೆಚ್ಚು ಅಭಿವೃದ್ಧಿ ಕೆಲಸಗಳು ಅಗಿರುವುದು ಬಿ.ಎಸ್.ವೈ ಅವಧಿಯಲ್ಲಿ. ಕಾಂಗ್ರೆಸ್ ನವರು ಅವಧಿಯಲ್ಲಿ ಗುರುತಿಸುವಂತಹ ಯಾವ ಕೆಲಸ ಆಗಿದೆ ಎಂಬುದನ್ನು ಹೇಳಲಿ.?? ಹಿಂದೆ ಸಂಸದನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಹಾಗಾಗಿ ನಾನು ಮುಂದಿನ ಲೋಕಸಭೆ ಮತ್ತೊಮ್ಮೆ ಟಿಕೆಟ್ ಕೇಳಿದ್ದೇನೆ. ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದರು.
- ತುಂಗಾ ನದಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಶವ ಪತ್ತೆ ...
- ಪ್ರಧಾನಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಕ್ಷಮೆಯಾಚನೆಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಆಗ್ರಹ ...
- ಮಾಜಿ ನಗರಸಭಾ ಅಧ್ಯಕ್ಷರಾದ N J ರಾಜಶೇಖರ್ ಇನ್ನಿಲ್ಲ ...
- ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಜಿಲ್ಲಾ ಅಧ್ಯಕ್ಷರಾಗಿ ಕರವೇ ಕಿರಣ್ ನೇಮಕ ...
- ಕುವೆಂಪು ವಿಶ್ವವಿದ್ಯಾಲಯದ ಪ್ರವೇಶಾತಿಗೆ ಅವಧಿ ವಿಸ್ತರಣೆ. ...
- ದಸರಾ ಚಲನಚಿತ್ರೋತ್ಸವ… ...
- ಬೆಳ್ಳಿ ಅಂಬಾರಿಯ ಜಂಬೂಸವಾರಿಗೆ ಶಿವಪ್ಪನಾಯಕ ಅರಮನೆಯಲ್ಲಿ ಸಕಲ ಸಿದ್ಧತೆ ...
- ನವರಾತ್ರಿ ಸಂಭ್ರಮ.. ...
- ಶಿವಮೊಗ್ಗ ದಸರಾಕ್ಕೆ ಸಕ್ರೆಬೈಲಿನ ಮೂರು ಆನೆಗಳಿಗೆ ವಿಶೇಷ ಆಹ್ವಾನ: ಅಂಬಾರಿ ಹೊರಲು ಸಾಗರಗೆ ತಾಲೀಮು ...
- ಶಿವಮೊಗ್ಗದಲ್ಲಿ ನ್ಯೂಸ್ 18 ಕನ್ನಡ ವಾಹಿನಿಯ ಕರುನಾಡ ಹಬ್ಬ ಕರುನಾಡ ಹಬ್ಬಕ್ಕೆ ನಿಮ್ಮ ಸಿ ನ್ಯೂಸ್ ಸಾಥ್! ...
Recent Comments