ಶಿವಪ್ಪನಾಯಕ ಮಾಲ್ ಲಿಸ್ ಅವ್ಯವಹಾರ ಸಿ.ಬಿ.ಐ. ತನಿಕೆಗೆ ಆಗಬೇಕು – ಕರ್ನಾಟಕ ರಾಜ್ಯ ಗೆಳೆಯರ ಬಳಗ
Cnewstv / 17.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಪ್ಪನಾಯಕ ಮಾಲ್ ಲಿಸ್ ಅವ್ಯವಹಾರ ಸಿ.ಬಿ.ಐ. ತನಿಕೆಗೆ ಆಗಬೇಕು – ಕರ್ನಾಟಕ ರಾಜ್ಯ ಗೆಳೆಯರ ಬಳಗ
ಶಿವಮೊಗ್ಗ : ಶಿವಪ್ಪನಾಯಕ ಮಾಲ್‌ನ ಲಿಸ್ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು ಸಿ.ಬಿ.ಐ. ತನಿಕೆಗೆ ಆಗಬೇಕು ಮತ್ತು ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ಅಥವಾ ನಮ್ಮ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಬೇಕೆಂದು ಅಗ್ರಹಿಸಿ ಕರ್ನಾಟಕ ರಾಜ್ಯ ಗೆಳೆಯರ ಬಳಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇದನ್ನು ಒದಿ : https://cnewstv.in/?p=11895
ಶಿವಪ್ಪ ಮಾರ್ಕೆಟ್ ಅಸ್ ಅವಧಿ ವಿಸ್ತರಣೆ ಮಾಡುವ ವಿಚಾರದಲ್ಲಿ ಅವ್ಯವಹಾರ ನಡೆದಿರುವ ಅರೋಪ ಹೊತ್ತಿರುವಂತಹ ಮಹಾನಗರಪಾಲಿಕೆಯ ಈ ಹಿಂದಿನ ಆಡಳಿತ ಪಕ್ಷದ ನಾಯಕರಾಗಿದ್ದಂತಹ ಚನ್ನಬಸಪ್ಪನವರು ಬ್ಯಾರೀಸ್ ಗೋಲ್ಡನ್ ಹಾರ್ವೆಸ್ಟ್ ಹೈ. ಅ.ನ ಮಾಲೀಕ ಬ್ಯಾರಿಯವರಿಂದ ಕಿಕ್ ಬ್ಯಾಕ್ ಪಡೆದು, ಸದರಿ ಮಾಲ್ ನ ಆಸ್ ಅವಧಿಯನ್ನು 99ವರ್ಷಕ್ಕೆ ಮುಂದುವರೆಸುವ ಅಜೆಂಡಾವನ್ನು ಸಾಮಾನ್ಯ ಸಭೆಯಲ್ಲಿಟ್ಟು ಅನುಮೋದಿಸಲು ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ ಈ ಮಾಲ್ ನ ಲಿಸ್ ಅವಧಿಯು 2042ಕ್ಕೆ ಮುಗಿಯಲಿದ್ದು, 2042ರ 3 ತಿಂಗಳ ಮೊದಲು ಈ ಅಸ್ ವಿಸ್ತರಿಸುವ ಅಜಂಡಾವನ್ನು ಸಾಮಾನ್ಯ ಸಭೆಯಲ್ಲಿ ತಂದು ಅನುಮೋದನೆಗೊಂಡ ನಂತರದಲ್ಲಿ ಲಿಸ್ ಅವಧಿಯನ್ನು ವಿಸ್ತರಣೆ ಮಾಡಬಹುದಾಗಿದೆ, ಇದು ಕಾನೂನಿನ ಪ್ರಕಾರ ನಡೆಯುವಂತಹ ಪ್ರಕ್ರಿಯೆ. ಆದರೆ ಈ ಲಿಸ್ ಅವಧಿಯ ವಿಚಾರವನ್ನು 2042ಕ್ಕೂ 20 ವರ್ಷ ಮೊದಲೇ ಮೀಟಿಂಗ್‌ನಲ್ಲಿ ತಂದಿದ್ದಂತಹ ವ್ಯಕ್ತಿಯಾದರೂ ಯಾರು ಮತ್ತು ಯಾಕಾಗಿ ತರಲಾಗಿದೆ ಎಂಬ ವಿಚಾರವನ್ನು ಸಿ.ಬಿ.ಐ. ತನಿಕೆಗೆ ಒಳಪಡಿಸಿ ಜನತೆಯ ಮುಂದೆ ಇಡಬೇಕಾಗಿ ಮತ್ತು ತಪ್ಪಿತಸ್ಥರನ್ನು ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸಬೇಕು ಎಂದು ಅಗ್ರಹಿಸಿದರು.