Cnewstv / 14.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನನ್ನ ಮಗನ ಸಾವಿಗೆ ಅಗ್ನಿಶಾಮಕ ದಳದ ವೈಫಲ್ಯವೇ ಕಾರಣ : ಶಶಿಧರ್ ಭೂಪಾಳಂ.
ಶಿವಮೊಗ್ಗ: ನನ್ನ ಮಗನ ಸಾವಿಗೆ ಅಗ್ನಿಶಾಮಕ ದಳದ ವೈಫಲ್ಯವೇ ಕಾರಣ ಎಂದು ಮೃತ ಶರತ್ ಭೂಪಾಳಂ ತಂದೆ ಶಶಿಧರ್ ಭೂಪಾಳಂ ಆರೋಪಿಸಿದರು.
ಇದನ್ನು ಒದಿ : https://cnewstv.in/?p=11841
ಅವರು ಇಂದು ಮಥುರಾ ಪ್ಯಾರಾಡೈಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.8ರ ಬೆಳಗಿನ ಜಾವ ಕುವೆಂಪು ರಸ್ತೆಯಲ್ಲಿರುವ ಶುಭಶ್ರೀ ನಿವಾಸದಲ್ಲಿ ನಡೆದ ಘೋರ ಅಗ್ನಿ ದುರಂತದಲ್ಲಿ ನನ್ನ ಮಗ ಹಾಗೂ ಖ್ಯಾತ ಕೈಗಾರಿಕೋದ್ಯಮಿ ಶರತ್ ಭೂಪಾಳಂ ಜೀವ ತೆತ್ತಿರುವುದು ಅಗ್ನಿಶಾಮಕ ದಳದ ಹತ್ತು ಹಲವು ವೈಫಲ್ಯಗಳು ಕಾರಣವಾಗಿದೆ ಎಂದರು.
ಘಟನೆ ನಡೆದಾಗ ಅಗ್ನಿಶಾಮಕ ದಳದವರು ಸರಿಯಾದ ಸಮಯಕ್ಕೆ ಬರಲಿಲ್ಲ. ಬಂದರೂ ಕೂಡ ಅವರ ಬಳಿ ಸುರಕ್ಷತಾ ಉಪಕರಣಗಳು ಇರಲಿಲ್ಲ. ಇದರಿಂದ ತೊಂದರೆಯಾಯಿತು. ಮತ್ತೊಮ್ಮೆ ಫೋನ್ ಮಾಡಿದಾಗ ಎರಡನೇ ಬಾರಿ ಆಗಮಿಸಿದ ಅಗ್ನಿಶಾಮಕ ವಾಹನದಲ್ಲಿ ಎಲ್ಲ ಸಲಕರಣೆಗಳು ಇದ್ದವು. ಆದರೆ ಈ ವಾಹನ ಮೊದಲೇ ಬಂದಿದ್ದರೆ ನನ್ನ ಮಗನ ಜೀವ ಉಳಿಯುತ್ತಿತ್ತು ಎಂದು ಆರೋಪಿಸಿದ ಅವರು, ಅಗ್ನಿಶಾಮಕ ದಳದವರು ಒಬ್ಬೊಬ್ಬರಿಗೆ ಒಂದೊಂದು ರೀತಿಯ ವಾಹನ ಕಳುಹಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.
ಅಗ್ನಿಶಾಮಕ ಇಲಾಖೆಯಲ್ಲಿ ಸಮವಸ್ತçವಿಲ್ಲದ ನೌಕರ ವರ್ಗವಿರುತ್ತದೆ ಇದರಿಂದ ಅವರನ್ನು ಗುರುತಿಸಲು ಕಷ್ಟವಾಗುತ್ತದೆ. ಬೆಳ್ಳಂಬೆಳಿಗ್ಗೆ ಕತ್ತಲು ಆವರಿಸಿರುವುದರಿಂದ ಟಾರ್ಚ್ ಬೇಕಾಗುತ್ತದೆ. ಆದರೆ ಇವರ ಬಳಿ ಟಾರ್ಚ್ ಇರುವುದಿಲ್ಲ. ಆಕ್ಸಿಜೆನ್ ಸಿಲಿಂಡರ್ ಇಲ್ಲದೆ ಮಾಸ್ಕ್ಗಳಿಲ್ಲದೆ ಪರದಾಡುತ್ತಾರೆ. ಮುಖ್ಯವಾಗಿ ನೀರಿನ ಪೈಪುಗಳ ಕೊರತೆ ಎದ್ದುಕಾಣುತ್ತದೆ. ಮತ್ತು ಅವರಿಗೆ ಘಟನೆಯ ಅವಲೋಕನದ ಬಗ್ಗೆ ತಿಳುವಳಿಕೆ ಇಲ್ಲ. ಹೀಗೆ ಹಲವು ವೈಫಲ್ಯಗಳು ಇಲಾಖೆಯಲ್ಲಿದೆ ಎಂದು ದೂರಿದರು.
ಇದನ್ನು ಒದಿ : https://cnewstv.in/?p=11837
ನನ್ನ ಮಗನ ರೀತಿ ಯಾರಿಗೂ ಆಗಬಾರದು. ಇಲಾಖೆ ಕೂಡ ಈಬಗ್ಗೆ ಎಚ್ಚರಿಕೆವಹಿಸಬೇಕು ಎಂಬುದು ನಮ್ಮ ಆಗ್ರಹ. ಈಬಗ್ಗೆ ಜಿಲ್ಲಾಧಿಕಾರಿಗಳ ಜೊತೆಯೂ ಮಾತನಾಡಿದ್ದೇನೆ. ಈ ಎಲ್ಲಾ ಘಟನೆಗಳನ್ನು ಇಟ್ಟುಕೊಂಡು ಅಗ್ನಿಶಾಮಕ ಇಲಾಖೆಯ ಕುಂದುಕೊರತೆಗಳನ್ನು ತಿಳಿಸಿ ಆ ಬಗ್ಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಜ.16ರಂದು ಬೆಳಿಗ್ಗೆ 10.30ಕ್ಕೆ ಕುವೆಂಪು ರಸ್ತೆಯಲ್ಲಿರುವ ನಮ್ಮ ನಿವಾಸ ಶುಭಶ್ರೀ ಇಂದ ಮೌನ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಪ್ರತಿಭಟನೆ ಹಾಗೂ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments