Breaking News

ಹಾಸನ ಮಿಕ್ಸಿ ಸ್ಪೋಟ ಪ್ರಕರಣ : ಪಾಗಲ್ ಪ್ರೇಮಿಯ ಬಂಧನ.

Cnewstv / 04.01.2023 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹಾಸನ ಮಿಕ್ಸಿ ಸ್ಪೋಟ ಪ್ರಕರಣ : ಪಾಗಲ್ ಪ್ರೇಮಿಯ ಬಂಧನ.

ಹಾಸನ : ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಕ್ಸಿಯಲ್ಲಿ ಸ್ಪೋಟಕ ವಸ್ತು ಹುಟ್ಟು ಮಾಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

 

https://cnewstv.in/?p=11771

ಬಂದಿತ್ತಾ ಆರೋಪಿ ಅನೂಪ್ ಕುಮಾರ್. ಪ್ರೀತಿ ನಿರಾಕರಣೆ ಮಾಡಿದ ಕಾರಣ ಯುವತಿಯನ್ನ ಹತ್ಯೆ ಮಾಡಲು ಮಿಕ್ಸಿಯಲ್ಲಿ ಸ್ಪೋಟಕ ವಸ್ತುವನ್ನು ಇಟ್ಟು ಬ್ಲಾಸ್ಟ್ ಮಾಡಿ ಹತ್ಯೆ ಮಾಡಲು ಸಂಚು ನಡೆಸಿದ್ದ.

ಹೇಗೆ ಸ್ಪೋಟ ಮಾಡಬೇಕು ಎಂಬುದನ್ನು ಇಂಟರ್ನೆಟ್ ಮೂಲಕ ತಿಳಿದುಕೊಂಡಿದ್ದ ಇದಕ್ಕಾಗಿ 2 ಡಿಟೊನೇಟರ್ ನನ್ನು ರಾಮನಗರದ ಕ್ವಾರಿಯಿಂದ ತಂದು ಮಿಕ್ಸಿಯಲ್ಲಿ ಫಿಕ್ಸ್ ಮಾಡಿದ್ದಾನೆ.

ಕೊರಿಯರ್ ಮೂಲಕ ಬಂದ ಮಿಕ್ಸರ್​ ಅನ್ನು ಡಿಸೆಂಬರ್ 17ರಂದೇ ಕೊರಿಯರ್ ಮಾಲೀಕ ಶಶಿ ಡೆಲಿವರಿ ಮಾಡಿಸಿದ್ದರು. ಆದರೆ ಅದನ್ನು ನಿರಾಕರಿಸಿದ್ದ ಮಹಿಳೆ ವಾಪಸ್ ಕಳುಹಿಸುವಂತೆ ಕೊರಿಯರ್​ನವರಿಗೆ ತಿಳಿಸಿದ್ದರು. ಕೊರಿಯರ್ ಮಾಡಿದವರ ಪೂರ್ಣ ವಿಳಾಸ ಇಲ್ಲದ ಕಾರಣ ಅದನ್ನು ವಾಪಸ್ ಕಳಿಸಲು 350 ರೂ. ಶುಲ್ಕ ನೀಡಬೇಕೆಂದು ಕೊರಿಯರ್ ಮಾಲೀಕ ಕೇಳಿದ್ದರು. ಆದರೆ ಹಣ ನೀಡದೆ ಮಹಿಳೆ ವಾಪಸಾಗಿದ್ದರು. ವಾಪಸ್ ‌ಕಳುಹಿಸಲು ಸೂಕ್ತ ವಿಳಾಸ ಇಲ್ಲದ ಕಾರಣ ಕೊರಿಯರ್ ಅಂಗಡಿ ಮಾಲೀಕ ಅದನ್ನು ಬಿಚ್ಚಿ ಪರಿಶೀಲನೆ ಮಾಡಿದ್ದರು. ಈ ವೇಳೆ ಸ್ಫೋಟ ಸಂಭವಿಸಿತ್ತು.

https://cnewstv.in/?p=11771

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*