Breaking News

ಕರ್ನಾಟಕದ ಒಬ್ಬ ವ್ಯಕ್ತಿ ಸೇರಿದಂತೆ, ಭಾರತದ 5 ಮಂದಿಯಲ್ಲಿ ಕೊರೊನಾ ರೂಪಾಂತರಿ ಎಕ್ಸ್‌ಬಿಬಿ.1.5 ತಳಿ ದೃಢ…

Cnewstv / 04.01.2023 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕರ್ನಾಟಕದ ಒಬ್ಬ ವ್ಯಕ್ತಿ ಸೇರಿದಂತೆ, ಭಾರತದ 5 ಮಂದಿಯಲ್ಲಿ ಕೊರೊನಾ ರೂಪಾಂತರಿ ಎಕ್ಸ್‌ಬಿಬಿ.1.5 ತಳಿ ದೃಢ…

ನವದೆಹಲಿ : ಭಾರತದ 5 ಮಂದಿಯಲ್ಲಿ ಕೊರೊನಾ ರೂಪಾಂತರಿ ಎಕ್ಸ್‌ಬಿಬಿ.1.5 ತಳಿ ದೃಢಪಟ್ಟಿದೆ.

https://cnewstv.in/?p=11765

ಅಮೆರಿಕದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಕೊರೊನಾ ರೂಪಾಂತರಿ ಎಕ್ಸ್‌ಬಿಬಿ.1.5 ತಳಿಯು ಭಾರತದ 5 ಮಂದಿಯಲ್ಲಿ ದೃಢಪಟ್ಟಿದ್ದು, ಈ ಪೈಕಿ ಕರ್ನಾಟಕದ ಒಬ್ಬ ವ್ಯಕ್ತಿಯೂ ಸೇರಿದ್ದಾರೆ ಎಂದು ಇಂಡಿಯನ್‌ ಸಾರ್ಸ್‌ ಕೋವ್‌-2 ಜಿನೋಮಿಕ್ಸ್‌ ಕನ್ಸೋರ್ಟಿಯಮ್‌ ತಿಳಿಸಿದೆ.

ಸೋಂಕು ದೃಢಪಟ್ಟಿರುವ ಐವರಲ್ಲಿ ಮೂವರು ಗುಜರಾತ್‌ ಮೂಲದವರಾಗಿದ್ದು, ಕರ್ನಾಟಕ ಹಾಗೂ ರಾಜಸ್ಥಾನದ ತಲಾ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಎಕ್ಸ್‌ಬಿಬಿ.1.5 ತಳಿಯು ಒಮಿಕ್ರಾನ್‌ ರೂಪಾಂತರಿಯ ಉಪ ತಳಿಗಳಾದ ಬಿಎ.2.10.1 ಹಾಗೂ ಬಿಎ.2.75 ತಳಿಗಳ ಸಮ್ಮಿಶ್ರ ತಳಿಯಾಗಿದೆ. ಎಕ್ಸ್‌ಬಿಬಿ ಹಾಗೂ ಎಕ್ಸ್‌ಬಿಬಿ.1.5 ತಳಿಗಳು ಅಮೆರಿಕದಲ್ಲಿ ಕೊರೊನಾ ಪ್ರಕರಣ ಹೆಚ್ಚಳಕ್ಕೆ ಶೇ.44ರಷ್ಟು ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

https://cnewstv.in/?p=11765

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*