Cnewstv / 27.12.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕೊರಿಯರ್ ಕಚೇರಿಯಲ್ಲಿ ಪಾರ್ಸಲ್ ಬಂದಿದ್ದ ಮಿಕ್ಸಿ ಸ್ಫೋಟ. ಮಾಲೀಕನಿಗೆ ಗಂಭೀರ ಗಾಯ.
ಬೆಂಗಳೂರು : ಕೊರಿಯರ್ ಕಚೇರಿಯಲ್ಲಿ ಪಾರ್ಸಲ್ ಬಂದಿದ್ದ ಮಿಕ್ಸಿ ಸ್ಫೋಟಗೊಂಡಿದ್ದು, ಮಾಲೀಕನಿಗೆ ಗಂಭೀರವಾದ ಗಾಯವಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
https://cnewstv.in/?p=11745
ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ನಡೆದಿದೆ. ಘಟನೆಯಲ್ಲಿ ಅಂಗಡಿ ಮಾಲೀಕ ಶಶಿ ಗಂಭೀರ ಗಾಯಗೊಂಡಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಡಿಟಿಡಿಸಿ ಕೊರಿಯರ್ ಗೆ ಮಿಕ್ಸಿ ಪಾರ್ಸಲ್ ಬಂದಿತ್ತು. ಅದನ್ನು ನಗರದ ವ್ಯಕ್ತಿಯೊಬ್ಬರಿಗೆ ಮಿಕ್ಸಿ ಡೆಲಿವರಿ ಮಾಡಿದ್ದರಂತೆ. ಎರಡು ದಿನಗಳ ಬಳಿಕ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಎಂದು ವ್ಯಕ್ತಿ ಕೊರಿಯರ್ ಗೆ ವಾಪಸ್ ನೀಡಿದ್ದರಂತೆ. ವಾಪಸ್ ಪಡೆಯೋ ವೇಳೆ ಮಿಕ್ಸಿ ಆನ್ ಮಾಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆಯಂತೆ.
ಸ್ಫೋಟಗೊಂಡ ತೀವ್ರತೆಗೆ ಕೊರಿಯರ್ ಕಚೇರಿಯ ಗ್ಲಾಸ್ ಪುಡಿಪುಡಿಯಾಗಿದ್ದು, ಗೋಡೆಗಳಿಗೂ ಹಾನಿಯಾಗಿದೆ. ಘಟನೆಯಲ್ಲಿ ಮಾಲೀಕ ಶಶಿ ಅವರ ಕೈ, ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಸ್‌ಪಿ ಹರಿರಾಮ್ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
https://cnewstv.in/?p=11741
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399