Cnewstv / 26.12.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕೋವಿಡ್ ಮುಂಜಾಗ್ರತೆ ವಹಿಸಿ ಲಸಿಕೆ ಪಡೀಯಿರಿ : ಜಿ.ಪಂ. ಸಿಇಓ.
ಶಿವಮೊಗ್ಗ : ಜಿಲ್ಲಾಪಂಚಾಯತ್ ಶಿವಮೊಗ್ಗ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನಿರ್ವಾಹಕ ಎನ್.ಡಿ. ಪ್ರಕಾಶ್ ರವರು ಶಿವಮೊಗ್ಗ ಜಿಲ್ಲೆಯ ಎಲ್ಲಾ ತಹಸೀಲ್ದಾರ್, ಇಓ, ಬಿಇಒ ಮತ್ತು ಟಿಹೆಚ್ ಒ ಗಳಿಗೆ ಜೂಮ್ ವಿಸಿ ಮುಖಾಂತರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಎಲ್ಲಾ ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಆಕ್ಸಿಜನ್ ಸರಬರಾಜು, ಐಸಿಯು ಬೆಡ್ ಕಾಯ್ದೆರಿಸುವ ಬಗ್ಗೆ ಹಾಗೂ ಕೋವಿಡ್ ಲಸಿಕೆ ಮುಂಜಾಗೃತ ಡೋಸ್ ಶೇ.100 ರಷ್ಟು ನೀಡಲು ಸೂಚಿಸಿದರು.
ಡಿಹೆಚ್ಒ ರಾಜೇಶ್ ಸುರಗಿಹಳ್ಳಿ ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಜಾಸ್ತಿ ಮಾಡಲು ಸೂಚಿಸಿ ಟೆಸ್ಟ್, ಟ್ರ್ಯಾಕ್, ಟ್ರೀಟ್ ಪದ್ಧತಿ ಅಳವಡಿಸಿ ಹಾಗೂ ಸಾಮಾಜಿಕ ಅಂತರ ಕಾದುಕೊಳ್ಳುವುದು, ಮಾಸ್ಕ್ ಧರಿಸುವುದು ಸೀತ ನೆಗಡೆ, ಜ್ವರ ಬಂದಂತವರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಲು ತಿಳಿಸಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399