Cnewstv / 26.12.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ವೃದ್ಧ ದಂಪತಿಯನ್ನು ಕೊಲೆ ಮಾಡಿದ 12 ವರ್ಷದ ಚಿಂದಿ ಆಯುವ ಬಾಲಕ.
ಗಾಜಿಯಾಬಾದ್ : ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನವೆಂಬರ್ 22 ರಂದು ನಡೆದ ವೃದ್ಧ ದಂಪತಿಯ ಕೊಲೆ ಪ್ರಕರಣದ ತನಿಖೆ ವೇಳೆ ಸಿಕ್ಕ ಸತ್ಯಾಂಶದಿಂದ ಪೊಲೀಸರು ದಂಗಾಗಿದ್ದಾರೆ. ವೃದ್ಧ ದಂಪತಿಯ ಕೊಲೆ ಹಿಂದಿನ ಮಾಸ್ಟರ್ ಮೈಂಡ್ 12 ವರ್ಷದ ಬಾಲಕ. ಈ ಕೃತ್ಯದ ಹಿಂದೆ ಇದ್ದ ಬಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ವೃದ್ಧ ದಂಪತಿಯ ಕೊಲೆ ಹಿಂದಿನ ರಹಸ್ಯ ಬಯಲಾಗಿದೆ.
ಗಾಜಿಯಾಬಾದ್‌ನ ಟ್ರೋನಿಕಾ ನಗರದಲ್ಲಿ ನವೆಂಬರ್ 22 ರಂದು 60 ವರ್ಷದ ವೃದ್ಧ ಇಬ್ರಾಹಿಂ ಹಾಗೂ ಅವರ ಪತ್ನಿ 55 ವರ್ಷದ ಹಜ್ರಾ ಎಂಬುವವರನ್ನು ಕೊಲೆ ಮಾಡಲಾಗಿದೆ. ಇಬ್ಬರ ಕುತ್ತಿಗೆಯನ್ನು ಬಟ್ಟೆಯಲ್ಲಿ ಹಿಸುಕಿ ಹತ್ಯೆ ಮಾಡಲಾಯಿತು. ಈ ಪ್ರಕರಣದ ತನಿಖೆಯಲ್ಲಿ ಪೊಲೀಸರು ವೃದ್ಧರಿಗೆ ಪರಿಚಯವಿರುವ ವ್ಯಕ್ತಿಗಳು ಮನೆಗೆ ಬಂದು ಹೋಗುವವರ ವಿಚಾರಣೆ ನಡೆಸಿದ್ದರು. ಈ ವೇಳೆ ಇವರನ್ನು ಹತ್ಯೆ ಮಾಡಿದ್ದು 12 ವರ್ಷದ ಬಾಲಕ ಎಂಬುದು ಬೆಳಕಿಗೆ ಬಂದಿದ್ದು, ಆತನೊಂದಿಗೆ ಈ ಕೃತ್ಯಕ್ಕೆ ಸಹಕರಿಸಿದ ಇಬ್ಬರು ಆರೋಪಿಯನ್ನು ಬಂಧಿಸಿದ್ದಾರೆ.
https://cnewstv.in/?p=11736
ಈ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ ಆಗಾಗ ಮನೆಗೆ ಬರುತ್ತಿದ್ದ ಆರೋಪಿ ಬಾಲಕ ಕೊಲೆಯ ನಂತರ ತಲೆಮರೆಸಿಕೊಂಡಿದ್ದ, ಈ ಹಿನ್ನಲೆಯಲ್ಲಿ ಪೋಲಿಸರು ಅನುಮಾನದಿಂದ ಆತನ ಹಿಂದೆ ಬಿದ್ದ ಆತನನ್ನು ಹಾಗೂ ಇಬ್ಬರು ಅರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣ ಹಿನ್ನೆಲೆ.
ಈತ ಈ ವೃದ್ಧ ದಂಪತಿ ಬಳಿ ಬೇಕಾದಷ್ಟು ಹಣವಿದೆ ಎಂದು ಭಾವಿಸಿ ತನ್ನ ಇಬ್ಬರು ಗೆಳೆಯರೊಂದಿಗೆ ಚರ್ಚಿಸಿ ಮನೆ ದರೋಡೆಗೆ ಸಂಚು ರೂಪಿಸಿದ್ದ. ಅದರಂತೆ ನವೆಂಬರ್ 22 ರಂದು ಮಧ್ಯರಾತ್ರಿ ತನ್ನ ಸಹಚರರ ಜೊತೆ ವೃದ್ಧರು ವಾಸವಿದ್ದ ಮನೆಗೆ ನುಗ್ಗಿ ಇಬ್ಬರನ್ನು ಉಸಿರುಗಟ್ಟಿಸಿ ಕೊಂದಿದ್ದರು.
ಬಳಿಕ ಮನೆಯಲ್ಲಿದ್ದ 54 ಸಾವಿರ ರೂ. ಹಣ, ಬೆಳ್ಳಿ ಸರ, ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಬೆಳಗ್ಗೆ ಮಗಳು ರಿಹಾನಾ ಎದ್ದ ನೋಡಿದಾಗ ತಮ್ಮ ತಂದೆ ತಾಯಿ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಬಲೆ ಬೀಸಿದ ಆರೋಪಿ ಬಾಲಕ ಹಾಗೂ ಆತನ ಜೊತೆಗಾರರಾದ ಶಿವಂ, ಮುಖೇಶ್ ಎಂಬುವವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ನಾಪತ್ತೆ, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಎ1 ಆರೋಪಿ 12 ವರ್ಷದ ಬಾಲಕ ಚಿಂದಿ ಆಯುವ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399