Breaking News

ಕೆಪಿಸಿಸಿಗೆ ತುಂಬಬೇಕಿದ್ದ ಹಣ ಬಡ ಕುಟುಂಬಕ್ಕೆ ನೀಡಿ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಮುಂದಾದ ಮಾಜಿ ಸಿಎಂ ಸಹೋದರನ ಪುತ್ರ.

Cnewstv / 15.11.2022 / ಬೆಂಗಳೂರು / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕೆಪಿಸಿಸಿಗೆ ತುಂಬಬೇಕಿದ್ದ ಹಣ ಬಡ ಕುಟುಂಬಕ್ಕೆ ನೀಡಿ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಮುಂದಾದ ಮಾಜಿ ಸಿಎಂ ಸಹೋದರನ ಪುತ್ರ.

ಬೆಂಗಳೂರು : ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಬೇಕಾದರೆ ಅರ್ಜಿ ಜೊತೆಗೆ 2 ಲಕ್ಷ ರೂ. ಡಿಡಿ ನೀಡಬೇಕು. ಆದರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರು, ಪಕ್ಷಕ್ಕೆ ಹಣವನ್ನು ನೀಡಿದೆ ಸಮಾಜ ಕಾರ್ಯಕ್ಕೆ ವಿನಿಯೋಗಿಸಿ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಈ ರೀತಿ ವಿಭಿನ್ನ ಪ್ರಯತ್ನ ಮಾಡಿರುವ ಅಕಾಂಕ್ಷಿ ತೇಜಸ್ವಿ ಪಟೇಲ್. ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ಅವರ ತಮ್ಮನ ಮಗ. ದಾವಣಗೆರೆ ಜಿಲ್ಲೆಯ ಚನ್ನಗಿರರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ತೇಜಸ್ವಿ ಪಟೇಲ್ ಅವರು ನಾಳೆ ಅಥವಾ ನಾಡಿದ್ದು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ತೆರಳಿ ಟಿಕೆಟ್​ಗಾಗಿ ಅರ್ಜಿಸಲ್ಲಿಸಲಿದ್ದಾರೆ.

ದೆಹಲಿಯನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣ.

ಅರ್ಜಿ ಸಲ್ಲಿಸಲು ಹೋಗುವ ಮುನ್ನ ದಾವಣಗೆರೆ ಅಂಬೇಡ್ಕರ ಸರ್ಕಲ್ ಬಳಿ ಓರ್ವ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಅಂಗವಿಕಲ ಯುವತಿಗೆ ಬರೋಬರಿ ಎರಡು ಲಕ್ಷ ರೂಪಾಯಿ ಡಿಡಿ ನೀಡಿದರು. ಬಡವರಾಗಿರುವ ಕೆಂಚಮ್ಮನಿಗೆ ಮಾತು ಬರಲ್ಲ. ಇಷ್ಟರಲ್ಲಿ ಮದುವೆಯೂ ಇದೆ. ಇದರ ಖರ್ಚಿಗೆ ಹಣವಿಲ್ಲ. ಹೀಗಾಗಿ ಕೆಪಿಸಿಸಿ ಟಿಕೆಟ್​ಗೆ ಅರ್ಜಿಸಲ್ಲಿಸಲು ನೀಡಬೇಕಾದ ಎರಡು ಲಕ್ಷ ರೂಪಾಯಯನ್ನ ಸಂಕಷ್ಟದಲ್ಲಿದ್ದ ಈ ಯುವತಿಗೆ ನೀಡಿ ಈ ಹಣವನ್ನ ಕೆಪಿಸಿಸಿಯಿಂದಲೇ ಕೊಡಲಾಗಿದೆ ಎಂದು ಪರಿಗಣಿಸಿ ಟಿಕೆಟ್​ಗಾಗಿ ತಮ್ಮ ಅರ್ಜಿ ಸ್ವೀಕಾರ ಮಾಡಬೇಕು ಎಂಬುದು ತೇಜಸ್ವಿ ಪಟೇಲ್ ವಿಭಿನ್ನ ಪ್ರಯತ್ನವಾಗಿದೆ.

ಸದ್ಯ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷರಾಗಿ ಮತ್ತು ಅವರ ಪತ್ನಿ ಈ ಹಿಂದೆ ಜಿಲ್ಲಾ ಪಂಚಾಯಿತ್ ಸದಸ್ಯರಾಗಿ ಅಧಿಕಾರ ಅನುಭಿಸಿದ್ದಾರೆ. ಈಗ ಜೆ.ಎಚ್.ಪಟೇಲರು ಪ್ರತಿನಿಧಿಸುತ್ತಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಅವರ ತಮ್ಮನ ಮಗನಾಗಿದ್ದಾರೆ. ಈ ಹಿಂದೆ ಸಹ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ ಇವರ ಹೆಸರು ಕೇಳಿ ಬಂದಿತ್ತು. ಈಗ ವಿಧಾನ ಸಭೆಗೆ ಪಟೇಲ್ ಕುಟುಂಬದ ಕುಡಿ ಅದೃಷ್ಠ ಪರೀಕ್ಷೆಗೆ ಮುಂದಾಗಿದೆ.

https://cnewstv.in/?p=11516

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*