ಶಿವಮೊಗ್ಗ : ಸಾವರ್ಕರ್ ಸಾಮ್ರಾಜ್ಯ..
Cnewstv.in / 19.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಸಾವರ್ಕರ್ ಸಾಮ್ರಾಜ್ಯ..
ಶಿವಮೊಗ್ಗ : ದೇಶದ ಅತ್ಯಂತ ವಿವಾದಿತ ಮತ್ತು ಜನಪ್ರಿಯ ವ್ಯಕ್ತಿ ವೀರ ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟ. ದೇಶಭಕ್ತಿಯನ್ನು ಬಿಂಬಿಸುವ ಕಾರ್ಯಕ್ರಮ ಸಾವರ್ಕರ್ ಸಾಮ್ರಾಜ್ಯವನ್ನು ಅ.22 ರಂದು ಸಂಜೆ 5 ಗಂಟೆಗೆ ನಗರದ ಸೈನ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಇಂದು ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಶ್ರೀಗಂಧ, ಸಾಮಗಾನ ಸಂಸ್ಥೆ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತನ್ನ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ವೀರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್, ಕರ್ನಾಟಕ ದೇವಸ್ಥಾನ ಸಂವರ್ಧನ ಮನೋಹರ ಮಠದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ, ರಾಷ್ಟ್ರವಾದಿ ಚಿಂತಕಿ ಶ್ರೀ ಲಕ್ಷ್ಮೀ ರಾಜಕುಮಾರ್, ಸಾಮಗಾನದ ಗೌರವಾಧ್ಯಕ್ಷ ಕೆ..ಕಾಂತೇಶ್ ಉಪಸ್ಥಿತರಿರುತ್ತಾರೆ ಎಂದರು.
1944 ರಲ್ಲಿ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರ ಪುಣ್ಯ ಸ್ಮರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅವರು ಸಶಕ್ತ ಭಾರತದ ಕನಸು ಕಂಡಿದ್ದರು. ಅವರ ಚಿಂತನೆ, ಸನಾತನ ಸಂಸ್ಕೃತಿಯ ವಿಚಾರಧಾರೆ ಮತ್ತು ಹಿಂದು ಧರ್ಮದಲ್ಲಿ ರುವ ಜಾತಿ ಪದ್ಧತಿ ವಿರುದ್ಧ ಅವರು ಹೋರಾಟ ನಡೆಸಿದರು. ಅಂತಹವರ ಸ್ಮರಣೆ ಮತ್ತು ಚಿಂತನೆಯನ್ನು ಮಾಡುವ ಸಂಬಂಧ ಈ ಕಾರ್ಯವನ್ನು ರೂಪಿಸಲಾಗಿದೆ.
600 ಜನ ಸಾವರ್ಕರ್ ಕುರಿತು ಮೂರು ರಾಷ್ಟ್ರಭಕ್ತಿಯ ಸಮೂಹ ಗಾಯನವನ್ನು ಹಾಡಲಿದ್ದಾರೆ. ಯುವಕರು ಸಾತ್ಯಕಿ ಸಾವರ್ಕರ್ ಸ್ವಾಗತಕ್ಕಾಗಿ ಬೈಕ್ ಮತ್ತು ಆಟೋ ರ್ಯಾಲಿ ನಡೆಸಲಿದ್ದಾರೆ. ರ್ಯಾಲಿ ಅಶೋಕ ವೃತ್ತದಿಂದ ಪ್ರಾರಂಭವಾಗಲಿದೆ. ಸುಮಾರು 1000 ಬೈಕ್ ಮತ್ತು 350 ಆಟೋಗಳು ಇರಲಿದೆ ಎಂದರು.
ಇದನ್ನು ಓದಿ :
http://cnewstv.in/?p=11270
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ : ಸಾವರ್ಕರ್ ಸಾಮ್ರಾಜ್ಯ.. 2022-10-19
Recent Comments