ಶಿವಮೊಗ್ಗ ವಾರ್ಡ್ ನಂಬರ್ ಎರಡರ ರಸ್ತೆಗಳು : ಜನರ ಜೀವ ವೈಕುಂಠ ದರ್ಶನ..!
Cnewstv.in / 18.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ ವಾರ್ಡ್ ನಂಬರ್ ಎರಡರ ರಸ್ತೆಗಳು:ಜನರ ಜೀವ ವೈಕುಂಠ ದರ್ಶನ..!
ಶಿವಮೊಗ್ಗ: ಇದೆಂತಹ ಸುದ್ದಿಯಪ್ಪಾ ಇದರ ಹೆಡ್ಲೈನ್ಸ್ ಓದಿದರೆ ಅರ್ಥವೇ ಆಗುತ್ತಿಲ್ಲ ಎಂದು ನಿಮಗನಿಸಬಹುದು, ಆದ್ರೆ ಈ ಸುದ್ದಿಯನ್ನ ಓದಿದರೆ ನಿಮಗೆ ಈ ಹೆಡ್ ಲೈನ್ಸ್ ನ ಸಂಪೂರ್ಣ ಕಥೆ ಅರ್ಥವಾಗುತ್ತದೆ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಸದ್ಯ ಸ್ಮಾರ್ಟ್ ಸಿಟಿಯಾಗುತ್ತಿದೆ, ಈ ಮಾತನ್ನು ನೀವು ಕೇಳುತ್ತಲೇ ನಿಮ್ಮ ಮನಸು ಸಂತೋಷವಾಗಬಹುದು, ನೀವು ಹಾಗೆಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ ಯಾಗಬಹುದು ನೂರಾರು ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಆಮೆಗಿಂತ ನಿಧಾನಗತಿಯಲ್ಲಿ ಸಾಗುತ್ತಿದೆ ಶಿವಮೊಗ್ಗ ನಗರದ ಅದೆಷ್ಟೋ ಬಡಾವಣೆಗಳಿಗೆ ಇದುವರೆಗೂ ಸ್ಮಾರ್ಟ್ ಸಿಟಿ ಕಾಮಗಾರಿ ಕಾಲೇ ಇಟ್ಟಿಲ್ಲ ಎನ್ನಿಸುತ್ತೆ.
ಆದರೆ ಇದರ ದುಷ್ಪರಿಣಾಮಗಳು ಮಾತ್ರ ಸಾರ್ವಜನಿಕರು ದಿನ ನಿತ್ಯ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ ನಗರದ ವಾರ್ಡ್ ನಂಬರ್ 2 ಎಲ್ ಬಿಎಸ್ ನಗರ ಹಾಗೂ ಅಕ್ಕಪಕ್ಕದ ಬಡಾವಣೆಗಳ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ರಸ್ತೆಯ ಮಧ್ಯ ಭಾಗಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ ಶಿವಮೊಗ್ಗ ಸವಳಂಗ ರಸ್ತೆಯಲ್ಲಿ ಫ್ಲೈ ಓವರ್ ಬ್ರಿಡ್ಜ್ ನಿರ್ಮಾಣವಾಗುತ್ತಿರುವ ಕಾರಣ ದ್ವಿಚಕ್ರವಾಹನಗಳಿಂದ ಹಿಡಿದು ಭಾರೀ ಗಾತ್ರದ ವಾಹನಗಳು ಈ ಎಲ್ ಬಿಎಸ್ ನಗರದ ಮೂಲಕವೇ ಹಾದು ಹೋಗಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ನಿತ್ಯ ನಿರಂತರವಾಗಿ ಈ ರಸ್ತೆಗಳಲ್ಲಿ ಭಾರೀ ವಾಹನಗಳು ಸಂಚರಿಸುವ ಪರಿಣಾಮ ಸ್ಥಳೀಯ ಸಾರ್ವಜನಿಕರಿಗೆ ತೀರಾ ತೊಂದರೆಯುಂಟಾಗಿತ್ತು, ಇದರ ಜತೆಯಲ್ಲಿ ಜನರಿಗೆ ಧೂಳು ಮಣ್ಣಿನ ಪ್ರಸಾದ ದಿನನಿತ್ಯ ಉಣ್ಣುವಂತಾಗಿದೆ.
ಕೀರ್ತಿ ನಗರದಿಂದ ಎಲ್ ಬಿಎಸ್ ನಗರಕ್ಕೆ ಸಂಪರ್ಕ ವಾಗಿರುವ ಸೇತುವೆಯು ಕೂಡ ಇದೀಗ ಜನರ ಜೀವನ ತೆಗೆದುಕೊಳ್ಳಲು ಹಾತೊರೆಯುತ್ತಿದೆ. ಭಾರಿ ವಾಹನಗಳ ಸಂಚಾರದಿಂದಾಗಿ ಸೇತುವೆಯು ಕೂಡ ಶಿಥಿಲಾವಸ್ಥೆ ತಲುಪುತ್ತಿದೆ. ಯಾವಾಗ ಜನರು ಪ್ರಾಣ ಕಳೆದುಕೊಳ್ಳುತ್ತಾರೆ ಎಂಬ ಭಯ ಇಲ್ಲಿಯ ನಿವಾಸಿಗಳನ್ನು ಕಾಡುತ್ತಿದೆ.
ಬಹುತೇಕ ಭಾಗ ಹಾಳಾಗಿರುವ ರಸ್ತೆಗಳನ್ನು ತಾತ್ಕಾಲಿಕವಾಗಿಯಾದರೂ ದುರಸ್ತಿ ಮಾಡಿಕೊಡುವಂತೆ ಸ್ಥಳೀಯ ಕಾರ್ಪೊರೇಟರ್ ಆಗಿರುವ ವಿಶ್ವಾಸ್ ರವರಿಗೆ ಸಾರ್ವಜನಿಕರು ಅದೆಷ್ಟೋ ಬಾರಿ ಮನವಿಯನ್ನು ನೀಡಿದು ಇದರ ಬಗ್ಗೆ ಕಾರ್ಪೊರೇಟರ್ ರವರು ಮಾತ್ರ ಸ್ವಲ್ಪವೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಕೇವಲ ಇಷ್ಟೇ ಮಾತ್ರವಲ್ಲದೆ ಈ ಎಲ್ ಬಿಎಸ್ ನಗರದ ರಸ್ತೆಗಳು ಕಿರಿದಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಚಲಿಸುವುದರಿಂದ ಈ ರಸ್ತೆಗಳಲ್ಲಿ ಜನಸಂದಣಿಯೂ ಕೂಡ ತೀರಾ ಹೆಚ್ಚಾಗಿದೆ. ಮೊದಲೇ ಗುಂಡಿಗಳಿಂದ ಕೂಡಿರುವ ರಸ್ತೆ ಅದರ ನಡುವೆ ಹೆಚ್ಚಿನ ಜನಸಂದಣಿ ಇವೆರಡರ ಪರಿಣಾಮ ಈ ರಸ್ತೆಗಳಲ್ಲಿ ಅದೆಷ್ಟೋ ಬಾರಿ ವಾಹನಗಳು ಅಪಘಾತಕ್ಕೀಡಾಗಿವೆ. ಈ ರಸ್ತೆಗಳ ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಸಾರ್ವಜನಿಕರ ಜೀವವು ರಸ್ತೆಯ ಮೇಲೆ ಪ್ರಯಾಣಿಸುವ ಬದಲಾಗಿ ವೈಕುಂಠದ ಕಡೆಗೆ ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಜನರು ಹೇಳುತ್ತಾರೆ.
ಇನ್ನೂ 1 ಮೂಲಗಳ ಪ್ರಕಾರ ಈ ಎಲ್ ಬಿಎಸ್ ನಗರದ ರಸ್ತೆ ದುರಸ್ತಿಗಾಗಿ ಇಪ್ಪತ್ತು ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂಬುವ ಮಾತುಗಳು ಕೂಡ ಕೇಳಿ ಬಂದಿತ್ತು ಈ ರಸ್ತೆ ದುರಸ್ತಿಯ ಹಣವು ಯಾವ ದೇವರ ಹುಂಡಿಗೆ ಸೇರಿದೆಯೋ ಆ ವೈಕುಂಠವನ್ನೇ ಬಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಮತವನ್ನು ಪಡೆದ ಕಾರ್ಪೊರೇಟರ್ ರವರು ಇನ್ನಾದರೂ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವುದು ಜನರ ಮಾತಾಗಿದೆ.
Recent Comments