Breaking News

ಮೃಗಾಲಯ ಸ್ವಯಂ ಕಾರ್ಯಕರ್ತರ ಸೇವೆಗೆ ಆಹ್ವಾನ.

Cnewstv.in / 11.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಮೃಗಾಲಯ ಸ್ವಯಂ ಕಾರ್ಯಕರ್ತರ ಸೇವೆಗೆ ಆಹ್ವಾನ.

ಶಿವಮೊಗ್ಗ : ಶಿವಮೊಗ್ಗ ಮೃಗಾಲಯದಲ್ಲಿ ಸ್ವಯಂ ಕಾರ್ಯಕರ್ತರಾಗಿ(ವಾಲಂಟಿಯರ್ಸ್) ಕಾರ್ಯ ನಿರ್ವಹಿಸಲು ಆಸಕ್ತ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ.

ವನ್ಯಪ್ರಾಣಿಗಳ ಬಗ್ಗೆ ವಿಶೇಷ ಆಸಕ್ತಿ ಇರುವ ಪರಿಣಾಮಕಾರಿಯಾಗಿ ಸಂವಹನ ಮಾಡುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಯಾವುದೇ ರೀತಿಯ ವೇತನ ಆರ್ಥಿಕ ಲಾಭಗಳನ್ನು ನಿರೀಕ್ಷೆ ಮಾಡದೇ ವನ್ಯಪ್ರಾಣಿಗಳ ಬಗ್ಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಉದ್ದೇಶವಿರುವವರಿಗೆ ಶಿವಮೊಗ್ಗ ಮೃಗಾಲಯ ಸ್ವಾಗತಿಸುತ್ತದೆ.

ಸ್ವಯಂ ಕಾರ್ಯಕರ್ತರ ಆಯ್ಕೆ ವಿಷಯದಲ್ಲಿ ಕಾರ್ಯ ನಿರ್ವಾಹಕರ ತೀರ್ಮಾನ ಅಚಿತಿವಾಗಿದ್ದು, ಆಸಕ್ತರು ಶಿವಮೊಗ್ಗ ಮೃಗಾಲಯ ಅಥವಾ ಮೊಬೈಲ್ ಸಂಖ್ಯೆ 8073322471, 9741887070 ನ್ನು ಸಂಪರ್ಕಿಸಬಹುದೆಂದು ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಇದನ್ನು ಓದಿ :

http://cnewstv.in/?p=11222

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*