4 ತಿಂಗಳಿಗೆ ಕಿತ್ತುಹೋದ 4.41 ಕೋಟಿ ರೂಪಾಯಿ ವೆಚ್ಚದ ರಸ್ತೆ..
Cnewstv.in / 08.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
4 ತಿಂಗಳಿಗೆ ಕಿತ್ತುಹೋದ 4.41 ಕೋಟಿ ರೂಪಾಯಿ ವೆಚ್ಚದ ರಸ್ತೆ..
ಶಿವಮೊಗ್ಗ : 4.41 ಕೋಟಿ ರೂಪಾಯಿ ವೆಚ್ಚದ ಡಾಂಬರ್ ರಸ್ತೆ ಕಾಮಾಗಾರಿ ಸಂಪೂರ್ಣ ಕಳಪೆಯಾಗಿದ್ದು, ನಾಲ್ಕೇ ತಿಂಗಳಲ್ಲಿ ಬರೀ ಕೈಯಲ್ಲೇ ಕಿತ್ತು ಬರುತ್ತಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಗವಟೂರು, ನೇರಲುಮನೆ, ಹುಲಿಗಿನಸರ, ಮಾವಿನಸರ, ಸೇರಿದಂತೆ ಕೆಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ 4.41 ಕೋಟಿ ರೂಪಾಯಿ ವೆಚ್ಚದಲ್ಲಿ 5.13 ಕಿ.ಮೀ ಉದ್ದದ ಗ್ರಾಮೀಣ ರಸ್ತೆ ನಿರ್ಮಾಣ ಮಾಡಲಾಗಿತ್ತು.
ಈ ರಸ್ತೆಯ ಕಾಮಗಾರಿಯ ಜೊತೆಯಲ್ಲಿ ರಸ್ತೆಯ ನಿರ್ವಹಣೆಯನ್ನು 2026 ರವರೆಗೆ ಗುತ್ತಿಗೆದಾರ ನಿರ್ವಹಿಸಬೇಕಾಗಿತ್ತು ಸದ್ಯದ ಪರಿಸ್ಥಿತಿಯಲ್ಲಿ ನಿರ್ವಹಣೆ ದೂರದ ಮಾತಾಗಿದ್ದು, ಕಾಮಗಾರಿಯೇ ಸಂಪೂರ್ಣ ಕಳಪೆಯಾಗಿದ್ದು ಬರಿಗೈಯಲ್ಲೇ ಡಾಂಬರ್ ಹಾಗೆ ಕಿತ್ತು ಬರುತ್ತಿದೆ
ಇನ್ನು ಈ ಕಳಪೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಕಾಮಗಾರಿಯ ಮೇಲ್ವಿಚಾರಣೆ ಮಾಡಬೇಕಾದ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ. ಕೂಡಲೆ ರಸ್ತೆಯನ್ನು ಮರು ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Recent Comments