Breaking News

ಅಪ್ಪು ನಮನದ ಮೂಲಕ ಮೈಸೂರ ಯುವ ದಸರಾ ಆರಂಭ..

Cnewstv.in / 29.09.2022/ ಮೈಸೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಅಪ್ಪು ನಮನದ ಮೂಲಕ ಮೈಸೂರ ಯುವ ದಸರಾ ಆರಂಭ..

ಮೈಸೂರು:  ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಹಾಗೂ ಕೇಂದ್ರಬಿಂದುವಾದ ಯುವ ದಸರಾ ಸಮಾರಂಭವನ್ನು ಅಪ್ಪು ನಮನದ ಮೂಲಕ ಡಾಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಉದ್ಘಾಟನೆಗೆ ಮೊದಲು ಮೈಸೂರು ನೃತ್ಯ ಕಲಾವಿದರ ಕಲಾತಂಡವು ಡಾ.ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳಾದ ಯುವರತ್ನ, ಜಾಕಿ, ಪವರ್, ಅಣ್ಣಾಬಾಂಡ್ ಸೇರಿದಂತೆ ಅನೇಕ ಚಿತ್ರಗಳು ನೆರೆದಿದ್ದ ಕಾರ್ಯಕ್ರಮಕ್ಕೆ ರಂಜಿಸುವುದರ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದರು.

ಡಾ.ಪುನೀತ್ ರಾಜ್ ಕುಮಾರ್ ಹೆಸರು ಹಾಗೂ ಹಾಡುಗಳು ಬರುತ್ತಿದ್ದಂತೆ ನೆರೆದಿದ್ದ ಸಾವಿರಾರು ಕುಣಿದು ಕುಪ್ಪಳಿಸಿ ಸಂಭ್ರಮದಲ್ಲಿ ಸಡಗರದಿಂದ ಯುವತಿಯರು. ಹಾಡು ಮುಗಿದ ಬಳಿಕವು ಮೈದಾನದಲ್ಲಿ ಅಪ್ಪು ಅಪ್ಪು ಎಂಬ ಮೂಲಕವೂ ಸಹ ಅಪ್ಪು ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*