Breaking News

ಮುರುಘಾ ಶ್ರೀಗಳ ವಿರುದ್ಧ ಎಸ್ ಜೆಎಂ ವಿದ್ಯಾಸಂಸ್ಥೆ ಸಿಬ್ಬಂದಿಯ ಹೆಸರಿನಲ್ಲಿ ಬಹಿರಂಗ ಪತ್ರ ವೈರಲ್..

Cnewstv.in / 16.09.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮುರುಘಾ ಶ್ರೀಗಳ ವಿರುದ್ಧ ಎಸ್ ಜೆಎಂ ವಿದ್ಯಾಸಂಸ್ಥೆ ಸಿಬ್ಬಂದಿಯ ಹೆಸರಿನಲ್ಲಿ ಬಹಿರಂಗ ಪತ್ರ ವೈರಲ್..

ಚಿತ್ರದುರ್ಗ : ಮಠದ ವಿದ್ಯಾರ್ಥಿನಿಯರೊಂದಿಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಶ್ರೀಗಳು ಪೋಕ್ಸೇ ಕಾಯ್ದೆಯಡಿ ಜೈಲುಪಾಲಾಗಿದ್ದಾರೆ. ಇದರ ನಡುವೆ ಎಸ್ ಜೆಎಂ ವಿದ್ಯಾಸಂಸ್ಥೆ ಸಿಬ್ಬಂದಿ ಹೆಸರಿನಲ್ಲಿ ಪತ್ರ ಒಂದು ವೈರಲ್ ಆಗಿದೆ. ಅದರೆ ಇನ್ನೂ ಈ ಬಗ್ಗೆ ಮಠದ ಆಡಳಿತ ಮಂಡಳಿ ಯಾವುದೇ ರೀತಿಯಾದ ಪ್ರತಿಕ್ರಿಯೆಗಳ ಅಥವಾ ಸ್ಪಷ್ಟನೆ ನೀಡಿಲ್ಲ.‌

ಪತ್ರವನ್ನು ಉಲ್ಲೇಖಿಸಲಾದ ಪ್ರಮುಖ ಅಂಶಗಳು..

* ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವಿದ್ದು ಅವರನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

* ಮಠದ ಆಡಳಿತದಲ್ಲಿನ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು.

* ಮಠ, ಸಂಸ್ಥೆಗಳಲ್ಲಿನ ಮುರುಘಾಶ್ರೀ ಭಾವಚಿತ್ರವನ್ನು ತೆರವುಗೊಳಿಸಬೇಕು

* ಶರಣ ಸಂಸ್ಕೃತಿ ಉತ್ಸವ ಹೆಸರಿನಲ್ಲಿ ಸಿಬ್ಬಂದಿಯಿಂದ ಹಣವಸೂಲಿ ಮಾಡಲಾಗಿದ್ದು, ಹಾಗೇ ವಸೂಲಿ ಮಾಡಿರುವ ಹಣವನ್ನ ಸಿಬ್ಬಂದಿಗೆ ವಾಪಸ್ ನೀಡಬೇಕು.

* ಶ್ರೀಗಳ ಆಪ್ತರನ್ನು ಮಠದಲ್ಲಿನ ಹುದ್ದೆಗಳಿಂದ ಮುಕ್ತಿಗೊಳಿಸಿ.

* ಶ್ರೀಗಂಧ ಹೆಲಿಕ್ಯಾಪ್ಟರ್ ಖರೀದಿ ಮಾಡಿದ ಮಾಹಿತಿ ಇದೆ. ಮಠದಲ್ಲಿನ ಐಷಾರಾಮಿ ಕಾರುಗಳನ್ನು ಮಾರಿ ಮಠದ ಅಭಿವೃದ್ಧಿಗೆ ಬಳಸಿ ಎಂದು ಒತ್ತಾಯಿಸಲಾಗಿದೆ.

ಇದನ್ನು ಒದಿ : https://cnewstv.in/?p=11115

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*