Breaking News

ಪತ್ನಿ ಸಮ್ಮುಖದಲ್ಲಿ ‘ತೃತೀಯ ಲಿಂಗಿ’ ಕೈ ಹಿಡಿದ ಪತಿರಾಯ!

Cnewstv.in / 15.09.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪತ್ನಿ ಸಮ್ಮುಖದಲ್ಲಿ ‘ತೃತೀಯ ಲಿಂಗಿ’ ಕೈ ಹಿಡಿದ ಪತಿರಾಯ!

ಭವಾನಿಪಟ್ಟಣ : ಒಡಿಶಾದ ಕಲಹಂದಿ ಜಿಲ್ಲೆಯಲ್ಲಿ ಪತ್ನಿಯ ಅನುಮತಿಯೊಂದಿಗೆ ಒಬ್ಬ ವ್ಯಕ್ತಿ ತೃತೀಯ ಲಿಂಗಿ ವ್ಯಕ್ತಿಯನ್ನು ವಿವಾಹವಾಗುವುದು ಭಾರೀ ಸಂಚಲನ ಸೃಷ್ಟಿಸಿದೆ. ಶನಿವಾರ ರಾತ್ರಿ ಈ ಮದುವೆ ನಡೆದಿದೆ ಎನ್ನಲಾಗುತ್ತಿದೆ.

ನರ್ಲಾ ಬ್ಲಾಕ್ ವ್ಯಾಪ್ತಿಯ ಧುರ್ ಕುಟಿ ಗ್ರಾಮದ ತೃತೀಯ ಲಿಂಗಿ ಸಂಗೀತಾ, ಭವಾನಿಪಟ್ಟಣದ ದೇವ್ ಪುರ್ ಗ್ರಾಮಕ್ಕೆ ಸೇರಿದ ಫಕೀರಾ ನಿಯಾಲ್ (30) ಅವರನ್ನು ಮದುವೆಯಾಗಿದ್ದಾರೆ. ದಿನಗೂಲಿ ಕಾರ್ಮಿಕರಾಗಿರುವ ಫಕೀರಾನಿಗೆ ಐದು ವರ್ಷಗಳ ಹಿಂದೆಯೇ ವಿವಾಹವಾಗಿದ್ದು, ಮೂರು ವರ್ಷದ ಗಂಡು ಮಗುವಿದೆ.

ಫಕೀರಾನಿಗೆ ಸಂಗೀತ ಪರಿಚಯವಾಗುವಂತೆ ಇಬ್ಬರಲ್ಲಿ ಪ್ರೇಮಂಕುರಾಗಿದ್ದು, ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ. ಆದಾಗ್ಯೂ, ಇದಕ್ಕೆ ಕುಟುಂಬದ ಸದಸ್ಯರು ಅಡ್ಡಿಪಡಿಸಿದ್ದಾರೆ. ಈ ವಿಷಯವನ್ನು ಫಕೀರಾ ತನ್ನ ಹೆಂಡತಿಗೆ ತಿಳಿಸಿ, ಆಕೆ ಮದುವೆಗೆ ಅನುಮತಿ ನೀಡ ಸ್ಥಳೀಯರು ಹೇಳುತ್ತಾರೆ.

ಫಕೀರಾ ಹೆಂಡತಿಯ ಸಮ್ಮುಖದಲ್ಲಿ ಶನಿವಾರ ರಾತ್ರಿ ದೇವಸ್ಥಾನದ ಸಂಪ್ರದಾಯದಂತೆ ಇಬ್ಬರು ಹಸೆಮಣೆಯೇರಿದ್ದು, ಕಾಮಿನಿ ಕಿನಾರ್ ಸಮುದಾಯದ ಅಧ್ಯಕ್ಷರು ಸೇರಿದಂತೆ ದಂಪತಿಗೆ ಶುಭ ಕೋರಿದ್ದಾರೆ. ಸಂಗೀತಾ ಫಕೀರಾನ ಹೆಂಡತಿ ಜೊತೆ ಆತನ ಮನೆಯಲ್ಲಿ ವಾಸಿಸಲು ಆರಂಭಿಸಿದ್ದಾಳೆ. ಕುಟುಂಬ ಸದಸ್ಯರು ಒಪ್ಪಿಗೆ ಕಾರಣ ಸಾರ್ಥಕ ಭಾವ ಮೂಡಿದೆ ಎಂದು ಸಂಗೀತಾ ಸಂತಸ ವ್ಯಕ್ತಪಡಿಸಿದ್ದಾಳೆ. ಈ ರೀತಿಯಲ್ಲಿ ಕಾನೂನು ಬದ್ದವಾಗಿ ನಡೆದ ಮೊದಲ ವಿವಾಹ ಚರ್ಚೆಗೆ ಗ್ರಾಸವಾಗಿದೆ.

ಇದನ್ನು ಒದಿ : https://cnewstv.in/?p=11113

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*